Advertisement

Harley Davidson: 2.3 ಲಕ್ಷ ರೂ.ಗೆ ಹರ್ಲೆ ಡೇವಿಡ್‌ಸನ್‌!

10:06 PM Jul 04, 2023 | Team Udayavani |

ನವದೆಹಲಿ: ಭಾರತದ ಮಾರುಕಟ್ಟೆಗೆ ಹರ್ಲೆ ಡೇವಿಡ್‌ಸನ್‌ ಕಂಪನಿಯು 440 ಸಿಸಿ ಮೋಟರ್‌ಸೈಕಲ್‌ ಪರಿಚಯಿಸಿದ್ದು, ಆರಂಭಿಕ ಬೆಲೆ ಕೇವಲ 2.3 ಲಕ್ಷ ರೂ.(ಎಕ್ಸ್‌ ಶೋರೂಮ್‌) ಇದೆ. ಮೂರು ವೇರಿಯಂಟ್‌ಗಳಲ್ಲಿ ಹರ್ಲೆ ಡೇವಿಡ್‌ಸನ್‌ ಎಕ್ಸ್‌ 440 ಸಿಂಗಲ್‌ ಸಿಲಂಡರ್‌ ಬೈಕ್‌ಗಳು ಲಭ್ಯವಿದೆ. “ಡೆನಿಮ್‌’ ಬೆಲೆ 2.29 ಲಕ್ಷ ರೂ., “ವಿವಿಡ್‌’ ಬೆಲೆ 2.49 ಲಕ್ಷ ರೂ. “ಎಸ್‌’ ವೇರಿಯಂಟ್‌ ಬೆಲೆ 2.69 ಲಕ್ಷ ರೂ. (ಎಕ್ಸ್‌ ಶೋರೂಮ್‌) ಇರಲಿದೆ.

Advertisement

27 ಪಿಎಸ್‌ ಪವರ್‌, ಸಿಕ್ಸ್‌ ಸ್ಪೀಡ್‌ ಗೇರ್‌ ಬಾಕ್ಸ್‌, ಆಯಿಲ್‌ ಕೂಲ್ಡ್‌ ಮೋಟರ್‌ ಹೊಂದಿದ್ದು, ಒಂದು ಲೀಟರ್‌ ಪೆಟ್ರೋಲ್‌ಗೆ 25 ಕಿ.ಮೀ. ಮೈಲೇಜ್‌ ಕೊಡಲಿದೆ ಎಂದು ಕಂಪನಿ ತಿಳಿಸಿದೆ. 100 ವರ್ಷ ಹಳೆಯ ಕಂಪನಿ ಹರ್ಲೆ ಡೇವಿಡ್‌ಸನ್‌ ಭಾರತದಲ್ಲಿ ಹೀರೊ ಮೋಟರ್‌ ಕಾರ್ಪ್‌ನೊಂದಿಗೆ ಸಹಭಾಗಿತ್ವ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next