Advertisement
ಹರ್ಕೆಬಾಳಿನಿಂದ ಮುಖ್ಯವಾಗಿ ಬೆಚ್ಚಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇಲ್ಲಿನ ಬೆಚ್ಚಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಮಕ್ಕಳು ಸಹ ನಡೆದುಕೊಂಡು ಹೋಗಲು ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಮಕ್ಕಳ ಸಹಿತ ಎಲ್ಲರೂ ಇದೇ ರಸ್ತೆಯಲ್ಲಿ ದಿನಾಲೂ ಪ್ರಯಾಸಪಟ್ಟು ನಡೆದುಕೊಂಡು ಹೋಗುತ್ತಿದ್ದರೂ, ಇದನ್ನು ನೋಡಿಕೊಂಡು ಸಹ ಸ್ಥಳೀಯಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಂತಿದೆ ಎನ್ನುವ ಆರೋಪ ಜನರದ್ದಾಗಿದೆ.
Related Articles
Advertisement
ಬಾಡಿಗೆಗೂ ಬರಲ್ಲ..
ಇಲ್ಲಿನ ಜನರಿಗೆ ಪಡಿತರ ಅಥವಾ ಅಗತ್ಯ ವಸ್ತುಗಳನ್ನು ಹೊಸಂಗಡಿಯಿಂದ ತೆಗೆದುಕೊಂಡು ಹೋಗಬೇಕಾಗಿದೆ. ಈ ದುರ್ಗಮ ಹಾದಿಯಲ್ಲಿ ರಿಕ್ಷಾ ಅಥವಾ ಇನ್ನಿತರ ವಾಹನಗಳನ್ನು ಬಾಡಿಗೆಗೆ ಕರೆದರೆ ಬರುವುದಿಲ್ಲ ಎನ್ನುವುದೇ ಹೆಚ್ಚಿನವರ ಚಾಳಿಯಾಗಿ ಬಿಟ್ಟಿದೆ. ಬಂದರೂ ದುಬಾರಿ ಬಾಡಿಗೆ ದರವನ್ನು ತೆರಬೇಕಾದ ಅನಿವಾರ್ಯತೆ ಇಲ್ಲಿನ ಜನರದ್ದಾಗಿದೆ.
ರಿಕ್ಷಾ ಬಾಡಿಗೆಗೆ ಕರೆದರೆ ಬರುವುದಿಲ್ಲ ಅನ್ನುತ್ತಾರೆ. ಬಂದರೂ ಹೆಚ್ಚು ಬಾಡಿಗೆ ಕೊಡಬೇಕು. ಯಾರಿಗಾದರೂ ಅನಾರೋಗ್ಯ ಉಂಟಾದರೆ ನಮ್ಮ ಪರಿಸ್ಥಿತಿ ಹೇಳತೀರದಾಗಿದೆ. – ರಾಜೇಂದ್ರ ಬೆಚ್ಚಳ್ಳಿ, ಸ್ಥಳೀಯರು
ಬೆಚ್ಚಳ್ಳಿ ಭಾಗದ ಜನರು ದುರ್ಗಮ ಹಾದಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಅರಿವಿದ್ದು, ಈ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 2 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾಗುವ ನಿರೀಕ್ಷೆಯಿದೆ. ಆದಷ್ಟು ಬೇಗ ಈ ರಸ್ತೆಯ ಡಾಮರು ಕಾಮಗಾರಿ ಆರಂಭಕ್ಕೆ ಕ್ರಮಕೈಗೊಳ್ಳಲಾಗುವುದು. – ಶಾರದಾ ಗೊಲ್ಲ, ಅಧ್ಯಕ್ಷೆ, ಹೊಸಂಗಡಿ ಗ್ರಾ.ಪಂ.