Advertisement

Harish Salve; 3ನೇ ವಿವಾಹವಾದ ಹರೀಶ್ ಸಾಳ್ವೆ; ಅತಿಥಿಗಳಾಗಿ ನೀತಾ ಅಂಬಾನಿ, ಲಲಿತ್ ಮೋದಿ

07:42 PM Sep 04, 2023 | Team Udayavani |

ಲಂಡನ್: ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರು ರವಿವಾರ ಲಂಡನ್ ನಲ್ಲಿ ಮೂರನೇ ವಿವಾಹವಾದರು. ಲಂಡನ್ ನಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ 68ರ ಹರೆಯದ ಹರೀಶ್ ಸಾಳ್ವೆ ಅವರು ಟ್ರಿನಾ ಅವರನ್ನು ವಿವಾಹವಾದರು.

Advertisement

ಹರೀಶ್ ಸಾಳ್ವೆ ಅವರ ವಿವಾಹ ಕಾರ್ಯಕ್ರಮಕ್ಕೆ ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ, ಸುನಿಲ್ ಮಿತ್ತಲ್, ಎಲ್‌ಎನ್ ಮಿತ್ತಲ್, ಎಸ್‌ಪಿ ಲೋಹಿಯಾ ಮತ್ತು ಗೋಪಿ ಹಿಂದುಜಾ ಸೇರಿದಂತೆ ಇತರ ಪ್ರಮುಖ ಉದ್ಯಮಿಗಳು ಉಪಸ್ಥಿತರಿದ್ದರು. ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಮತ್ತು ಅವರ ಗೆಳತಿ, ಮಾಡೆಲ್ ಉಜ್ವಲಾ ರಾವುತ್ ಕೂಡಾ ಹಾಜರಿದ್ದರು.

ಸಾಳ್ವೆ ಅವರಿಗೆ ಇದು ಮೂರನೇ ಮದುವೆ. ಸಾಳ್ವೆ ಮತ್ತು ಅವರ ಮೊದಲ ಪತ್ನಿ ಮೀನಾಕ್ಷಿ 38 ವರ್ಷಗಳ ವೈವಾಹಿಕ ಜೀವನದ ನಂತರ ಜೂನ್ 2020 ರಲ್ಲಿ ವಿಚ್ಛೇದನ ಪಡೆದರು. ಅವರು ಅದೇ ವರ್ಷದಲ್ಲಿ ಕ್ಯಾರೋಲಿನ್ ಬ್ರೋಸಾರ್ಡ್ ಅವರನ್ನು ವಿವಾಹವಾದರು. ಸಾಳ್ವೆ ಮತ್ತು ಅವರ ಮಾಜಿ ಪತ್ನಿ ಮೀನಾಕ್ಷಿ ಅವರಿಗೆ ಸಾಕ್ಷಿ ಮತ್ತು ಸಾನಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹಿರಿಯ ವಕೀಲ ಸಾಳ್ವೆ ಅವರು ಸುಪ್ರೀಂ ಕೋರ್ಟ್ ನಲ್ಲಿ ಪ್ರಾಕ್ಟೀಸ್ ಮಾಡಿದವರು. ಹಲವು ಹೈಪ್ರೊಫೈಲ್ ಕೇಸ್ ಗಳನ್ನು ಗೆದ್ದ ಸಾಧನೆ ಅವರದ್ದು. ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು ಮರಣದಂಡನೆ ವಿಧಿಸಿದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಸಾಳ್ವೆ ಕೇವಲ ಒಂದು ರೂ. ಸಂಭಾವನೆ ಪಡೆದಿದ್ದರು. ಕೃಷ್ಣ ಗೋದಾವರಿ ಜಲಾನಯನ ಅನಿಲ ವಿವಾದ, ಸಲ್ಮಾನ್ ಖಾನ್ ಹಿಟ್ ಆ್ಯಂಡ್ ರನ್ ಕೇಸ್ ಸೇರಿ ಹಲವು ಪ್ರಕರಣಗಳನ್ನು ವಾದ ಮಾಡಿದ್ದರು.

Advertisement

1999ರಿಂದ 2002ರವರೆಗೆ ಹರೀಶ್ ಸಾಳ್ವೆ ಅವರು ಭಾರತದ ಸರ್ಕಾರದ ಸಾಲಿಸಿಟರ್ ಜನರಲ್ ಆಗಿ ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next