ತೆಕ್ಕಟ್ಟೆ : ತವರಿಗೆ ಸೇರಿದ ಬೀಜಾಡಿ ಹರೀಶ್ ಬಂಗೇರ ಕುಟುಂಬ ಸಮೇತರಾಗಿ ಬಂದು ಆನೆಗುಡ್ಡೆ ಶ್ರೀ ವಿನಾಯಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ಕೋಟೇಶ್ವರ ದೇವಸ್ಥಾನದವರೆಗೆ ಇಂದು(ಆ.19, ಗುರುವಾರ) ಮುಂಜಾನೆ ಕಾಲ್ನಡಿಯಲ್ಲಿ ಸಾಗಿದರು.
ಸೌದಿಯಲ್ಲಿ ಕಳೆದ 1 ವರ್ಷ 8 ತಿಂಗಳ ಕಾಲ ಬಂಧನದಲ್ಲಿದ್ದ ಕುಂದಾಪುರದ ತಾಲೂಕಿನ ಬೀಜಾಡಿಯ ಹರೀಶ್ ಬಂಗೇರ ಅವರು ಬಿಡುಗಡೆ ಯಾಗಿ ನಿನ್ನೆ(ಬುಧವಾರ, ಆಗಸ್ಟ್ 18) ಬೆಂಗಳೂರಿಗೆ ಬಂದಿಳಿದಿದ್ದು, ಅಲ್ಲಿಂದ ರಾತ್ರಿ ಹುಟ್ಟೂರಿಗೆ ಆಗಮಿಸಿದ್ದಾರೆ.
2019ರ ಡಿ.21 ರಂದು ಹರೀಶ್ ಬಂಗೇರ ತನ್ನದಲ್ಲದ ತಪ್ಪಿಗೆ ಬಂಧಿತನಾಗಿದ್ದು, 2021ರ ಆ. 17 ರಂದು ಅಲ್ಲಿನ ರಾಯಭಾರಿ ಅಧಿಕಾರಿಗಳು ವಿಮಾನ ನಿಲ್ದಾಣ ಕ್ಕೆ ಬಿಟ್ಟಿದ್ದಾರೆ.
ಇದನ್ನೂ ಓದಿ : ಮತ್ತೆ ಎನ್ ಸಿಎ ಕೋಚ್ ಹುದ್ದೆ ಬಯಸಿದ ರಾಹುಲ್ ದ್ರಾವಿಡ್: ಆಯ್ಕೆ ಕಷ್ಟ ಎನ್ನುತ್ತಿದೆ ನಿಯಮಗಳು
ಬಂಧನದಿಂದ ಮುಕ್ತನಾದರೇ, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಿಂದ ಕೋಟೇಶ್ವರದ ದೇವಸ್ಥಾನದ ತನಕ ಪಾದಯಾತ್ರೆ ಮಾಡುತ್ತೇನೆ ಎಂದು ಬಂಗೇರ ಹರಕೆ ಹೊತ್ತುಕೊಂಡಿದ್ದರು. ಬಂಧನಮುಕ್ತರಾಗಿ ತಾಯ್ನಾಡಿಗೆ ಬಂದು ಒಂದು ದಿನದಲ್ಲೇ ಹೇಳಿಕೊಂಡ ಹರಕೆಯನ್ನು ತೀರಿಸಿದ್ದಾರೆ.
ಇನ್ನು, ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದು, ಇಂದು (ಆ.18ರಂದು) ತಾಯ್ನಾಡಿಗೆ ಮರಳಿದ್ದರು.
ಈ ಹಿಂದೆ ಸೌದಿಯ ದೊರೆ ಮತ್ತು ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮೆಕ್ಕಾದ ಬಗ್ಗೆ ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ವ್ ಹಾಕಿದ್ದ ಆರೋಪದ ಮೇಲೆ ಹರೀಶ್ ಬಂಗೇರರನ್ನು 2019ರ ಡಿಸೆಂಬರ್ ನಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು.
ಈ ಬಗ್ಗೆ ಹರೀಶ್ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಎಂಬವರನ್ನು ಬಂಧಿಸಿದ್ದರು.
ಅವರು ಹರೀಶ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ಧ ಪೋಸ್ವ್ ಹಾಕಿ, ಅದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ವೈರಲ್ ಮಾಡಿದ್ದರು ಮತ್ತು ನಂತರ ಈ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು.
ಇದನ್ನೂ ಓದಿ : ತಾಲಿಬಾನಿಗರಲ್ಲಿ ಪಶ್ಚಾತ್ತಾಪವನ್ನೇ ನೋಡಿರಲಿಲ್ಲ !