Advertisement

ಕದ್ದು ಮುಚ್ಚಿ ಸಿನಿಮಾ ನೋಡಿದ ಹರಿಪ್ರಿಯಾ

11:04 AM Feb 03, 2018 | Team Udayavani |

ನಟಿ ಹರಿಪ್ರಿಯಾ ಯಾರಿಗೂ ಗೊತ್ತಾಗದಂತೆ ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಕದ್ದುಮುಚ್ಚಿ ಅವರು ಸಿನಿಮಾ ನೋಡಿದ್ದು, ತೆಲುಗಿನ ಬಾಲಕೃಷ್ಣ ಅಭಿನಯದ “ಜೈಸಿಂಹ’. ಅವರು ಈ ಚಿತ್ರದ ನಾಯಕಿ. 

Advertisement

ಹರಿಪ್ರಿಯಾ ಅಭಿಮಾನಿಗಳು ಗುರುತು ಹಿಡಿಯಬಾರದು ಎಂಬ  ಕಾರಣದಿಂದ ತಲೆಗೊಂದು ಮಂಕಿ ಕ್ಯಾಪ್‌ ಧರಿಸಿ, ಮೈತುಂಬಾ ಶಾಲು ಹಾಕಿಕೊಂಡು ಪ್ರೇಕ್ಷಕರ ಜೊತೆಯಲ್ಲಿ ಸಿನಿಮಾ ನೋಡಿದ್ದಾರೆ. ನಂತರ ಫೋಟೋ  ಕ್ಲಿಕ್ಕಿಸಿಕೊಂಡು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next