Advertisement
ಹೌದು, ಇತ್ತೀಚಿನ ವರ್ಷಗಳಲ್ಲಿ ತರಹೇವಾರಿ ಪಾತ್ರ ಮಾಡುವ ಮೂಲಕ ಈಗಲೂ ಬಿಝಿ ನಟಿ ಅಂದರೆ ಅದು ಹರಿಪ್ರಿಯಾ. ಅವರ ಮತ್ತೂಂದು ಹೈಲೈಟ್ ಅಂದರೆ, ಈ ವರ್ಷ ಅವರು ನಟಿಸಿರುವ ಆರು ಚಿತ್ರಗಳು ಬಿಡುಗಡೆಯಾಗಿವೆ! ಕನ್ನಡದ ನಟಿಯ ಮಟ್ಟಿಗೆ ಇದು ನಿಜಕ್ಕೂ ಖುಷಿಯ ವಿಷಯ. ಹರಿಪ್ರಿಯಾ ಎಲ್ಲಾ ರೀತಿಯ ಪಾತ್ರಕ್ಕೂ ಸೈ ಅಂದವರು. ಆ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡವರು. ಒಬ್ಬ ನಟಿಯ ಆರು ಚಿತ್ರಗಳು ವರ್ಷದಲ್ಲಿ ತೆರೆಗೆ ಬರುತ್ತವೆ ಅಂದರೆ, ಅದು ಸಂಭ್ರಮವಲ್ಲದೆ ಮತ್ತೇನು? ಅಪ್ಪಟ ಕನ್ನಡದ ಹುಡುಗಿಯಾಗಿರುವ ಹರಿಪ್ರಿಯಾ, ಈಗ “ಕನ್ನಡ್ ಗೊತ್ತಿಲ್ಲ’ ಮೂಲಕ ಮತ್ತೂಮ್ಮೆ ನಟನೆ ಸಾಬೀತುಪಡಿಸಲು ತಯಾರಿ ನಡೆಸಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಅಪ್ಪಟ ಕನ್ನಡತನ ಇರುವ ಚಿತ್ರ. ಅದರಲ್ಲೂ ಹರಿಪ್ರಿಯಾ ಅವರಿಗೆ ಕನ್ನಡ ಅಂದರೆ ಪ್ರಾಣ. ಕನ್ನಡ ಪ್ರೀತಿಯಿಂದಲೇ ಚಿತ್ರದಲ್ಲಿ ತೊಡಗಿಸಿಕೊಂಡ ಬಗ್ಗೆ ಸ್ವತಃ ಹರಿಪ್ರಿಯಾ ಹೇಳುವುದಿಷ್ಟು.
Related Articles
ಮೂಡಿಬಂದಿದೆ’ ಎನ್ನುತ್ತಾರೆ ಹರಿಪ್ರಿಯಾ.
Advertisement
ಎಲ್ಲಾ ಭಾಷಿಗರೂ ನೋಡ್ಬೇಕು ಹರಿಪ್ರಿಯಾ ಅವರು “ಕನ್ನಡ್ ಗೊತ್ತಿಲ್ಲ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಕಥೆ ಮತ್ತು ಅವರು ನಿರ್ವಹಿಸಿರುವ ಪಾತ್ರವಂತೆ. ಆ ಬಗ್ಗೆ ಹೇಳುವ ಹರಿಪ್ರಿಯಾ, “ನಾನು ಡಬ್ಬಿಂಗ್ ಮಾಡುವಾಗಲೇ ಸಿನಿಮಾ ಯಾವ ರೇಂಜ್‌ನಲ್ಲಿದೆ ಅನ್ನೋದು ಗೊತ್ತಾಯ್ತು. ಇದೊಂದು ಕನ್ನಡಕ್ಕಾಗಿಯೇ ಮಾಡಿರುವ ಕಥೆ. ಕನ್ನಡಿಗರಿಗೆ ಇಷ್ಟವಾಗುವ ಕಥೆ. ಇಲ್ಲಿ ನಾನು ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ. “ಕನ್ನಡ್ ಗೊತ್ತಿಲ್ಲ’ ಶೀರ್ಷಿಕೆಗೆ ನ್ಯಾಯ ಒದಗಿಸೋ ಪಾತ್ರವದು. ಇಲ್ಲಿ ನಾನು ಅಧಿಕಾರಿಯಾಗಿ, ಯಾಕೆ ಕನ್ನಡ ಪ್ರೀತಿ ಹೊಂದಿರುತ್ತೇನೆ, ಆ ಲಿಂಕ್ ಹೇಗೆಸಿಂಕ್ ಆಗುತ್ತೆ ಅನ್ನೋಕೆ ಸಿನಿಮಾ ನೋಡಬೇಕು’ ಎನ್ನುವ ಅವರು, “ಪ್ರಸ್ತುತ ಬೆಂಗಳೂರಲ್ಲಿ ಕನ್ನಡ್ ಗೊತ್ತಿಲ್ಲ ಎಂಬ ಪದಬಳಕೆಯೇ ಜಾಸ್ತಿಯಾಗುತ್ತಿದೆ. ಇಲ್ಲಿ ನಮ್ಮವರಿಗಿಂತ ಹೊರಗಿನವರೇ ಹೆಚ್ಚು ಇದ್ದಾರೆ. ಬಿಜಿನೆಸ್, ಸ್ಟಡಿ, ಕೆಲಸ ಹೀಗೆ ನಾನಾ ವಿಷಯಗಳಲ್ಲಿ ಪರಭಾಷಿಗರ ಸಂಖ್ಯೆಯೇ ಹೆಚ್ಚಿದೆ. ಪ್ರತಿ ನಿತ್ಯ “ಕನ್ನಡ್ ಗೊತ್ತಿಲ್ಲ’ ಎಂಬ ಪದ ಕೇಳ್ಳೋದು ಇಲ್ಲಿ ಕಾಮನ್ ಆಗಿದೆ. ಇಲ್ಲಿ ಎಷ್ಟೋ ಜನ ಹೊರಗಿನವರು ನಮ್ಮ ಭಾಷೆ ಕಲಿತಿದ್ದಾರೆ, ಭಾಷೆ ಗೊತ್ತಿದ್ದೂ, ಮಾತನಾಡದೆಯೂ ಇದ್ದಾರೆ, ನಾವು ಯಾತಕ್ಕೆ ನಿಮ್ಮ ಭಾಷೆ ಕಲಿಯಬೇಕು ಎನ್ನುವವರೂ ಇದ್ದಾರೆ. ಒಟ್ಟಾರೆ ಈ ಎಲ್ಲಾ ಕೆಟಗರಿ ಮಂದಿ ಈ ಚಿತ್ರ ನೋಡಬೇಕು. ಹಾಗಂತ, ಇಲ್ಲಿ ಯಾರನ್ನೂ ದೂರುವಂತಹ ಕೆಲಸ ಮಾಡಿಲ್ಲ. ಆದರೆ, ಕನ್ನಡ ಭಾಷೆ ಕುರಿತ ಸಿನಿಮಾದಲ್ಲಿ ಒಂದು ಥ್ರಿಲ್ಲಿಂಗ್ ಜರ್ನಿ ಇದೆ. ಅದೇ ಚಿತ್ರದ ಸಸ್ಪೆನ್ಸ್’ ಎನ್ನುತ್ತಾರೆ ಅವರು.
ಕನ್ನಡ ಪ್ರೀತಿಗೆ ಒಳ್ಳೇ ವೇದಿಕೆ “ಕನ್ನಡ್ ಗೊತ್ತಿಲ್ಲ’ ಮೂಲಕ ಯಾರಿಗಾದರೂ ಟಾಂಗ್ ಕೊಡುವ ಪ್ರಯತ್ನ ಮಾಡಲಾಗಿದೆಯಾ? ಈ ಪ್ರಶ್ನೆಗೆ ಉತ್ತರಿಸುವ ಹರಿಪ್ರಿಯಾ, “ಇದು ಯಾರ ವಿರುದಟಛಿದ ಚಿತ್ರವೂ ಅಲ್ಲ. ಕನ್ನಡ ಪ್ರೀತಿಯನ್ನು ವ್ಯಕ್ತಪಡಿಸುವ ಸಿನಿಮಾ. ಕನ್ನಡ ಮಾತಾಡಲ್ಲ, ಕನ್ನಡ ಬರೋದೇ ಇಲ್ಲ. ಕನ್ನಡವನ್ನು ಅವಮಾನಿಸಿದವರಿಗೆ ಇಲ್ಲಿ ಏನೆಲ್ಲಾ ಆಗುತ್ತೆ ಅನ್ನುವ ಲೈನ್ ಇದೆ. ಹಾಗಂತ, ವಿನಾಕಾರಣ, ಅನ್ಯ ಭಾಷಿಗರ ವಿರುದ್ಧವಂತೂ ಇಲ್ಲ. ಮೊದಲ ಸಲ ನನಗೆ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಲು ಒಂದೊಳ್ಳೆಯ ಫ್ಲಾಟ್ ಫಾರ್ಮ್ ಕೊಟ್ಟಿರುವ ಚಿತ್ರವಿದು. ಇನ್ನು, “ಕನ್ನಡ್ ಗೊತ್ತಿಲ್ಲ’ ಸಿನಿಮಾ ನೋಡಿದ ಅನ್ಯ ಭಾಷಿಗರು ಒಂದಷ್ಟು ಬದಲಾಗಬಹುದಾ? ಇದಕ್ಕೆ ಅವರ ಉತ್ತರ, ಇಲ್ಲಿ ಯಾರನ್ನೂ ಫೋರ್ಸ್ ಮಾಡೋಕೆ ಆಗಲ್ಲ. ತಿದ್ದುವುದಕ್ಕೂ ಆಗೋದಿಲ್ಲ. ನಮ್ಮತನದ ಚಿತ್ರ ಮಾಡಿದ್ದೇವೆ. ಅದನ್ನು ಇಲ್ಲಿರುವ ಪ್ರತಿಯೊಬ್ಬರೂ ಪ್ರೀತಿಯಿಂದ ಅಪ್ಪಿಕೊಳ್ಳಬೇಕಷ್ಟೇ.
ಒಂದು ಯೋಚನೆಯಂತೂ ಇಲ್ಲಿದೆ. ಅದನ್ನು ಎಲ್ಲರೂ ಅಳವಡಿಸಿಕೊಂಡರೆ, “ಕನ್ನಡ್ ಗೊತ್ತಿಲ್ಲ’ ಎಂಬ ಪದ ಮುಂದೆ ಕೇಳುವುದು ಕಡಿಮೆಯಾಗುತ್ತದೆ’ ಎನ್ನುತ್ತಾರೆ ಹರಿಪ್ರಿಯಾ. ವಿಜಯ್ ಭರಮಸಾಗರ