Advertisement

ವಾಲ್ಮೀಕಿ ಶ್ರೀಗಳಿಂದ ಸಿಎಂಗೆ ಮನವಿ

11:36 AM Feb 19, 2020 | Naveen |

ಹರಿಹರ: ರಾಜನಹಳ್ಳಿಯ ವಾಲ್ಮೀಕಿ ಮಠದ ಆವರಣದಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜು ಸ್ಥಾಪನೆ ಸೇರಿದಂತೆ ಸಮಾಜದ ಬಹುದಿನಗಳ ಬೇಡಿಕೆ ಈಡೇರಿಸುವಂತೆ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಮಂಗಳವಾರ ಬೆಂಗಳೂರಿನ ಸಿಎಂ ನಿವಾಸ ಧವಳಗಿರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪರಿಗೆ ಮನವಿ ಮಾಡಿದರು.

Advertisement

ಎಸ್‌ಇಪಿ ಮತ್ತು ಟಿಎಸ್‌ಪಿ ಯೋಜನೆಯಡಿ ವೈದ್ಯಕೀಯ, ಉನ್ನತ ಶಿಕ್ಷಣ ಇಲಾಖೆಗಳಿಗೆ ಹಂಚಿಕೆಯಾಗುವ ಅನುದಾನದಲ್ಲಿ ಗುರುಪೀಠಕ್ಕೆ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ ಕಾಲೇಜು ಮಂಜೂರು ಮಾಡಬೇಕು. ಎಸ್ಟಿ ಮೀಸಲಾತಿ ಶೆ.7.5ಕ್ಕೆ ಹೆಚ್ಚಿಸುವುದು, ಎಸ್ಟಿ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮತ್ತು ಆಯೋಗ, ವಿವಿ ಸ್ಥಾಪಿಸುವುದು. ಹಂಪಿ ಕನ್ನಡ ವಿವಿಗೆ ಮಹರ್ಷಿ ವಾಲ್ಮೀಕಿ ಎಂದು ನಾಮಕರಣ ಮಾಡುವುದು.

6-10ನೇ ತರಗತಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸುವ ಪ್ರತಿಷ್ಠತ ಶಾಲಾ ಯೋಜನೆ ಮುಂದುವರಿಸಿ ಮಕ್ಕಳ ಸಂಖ್ಯೆ ಹೆಚ್ಚಿಸುವುದು. ವಿವಿಗಳಲ್ಲಿ ಸಂಶೋಧನೆ ಮಾಡುವವರಿಗೆ ಮಾಸಿಕ 25 ಸಾವಿರ ವಿದ್ಯಾರ್ಥಿ ವೇತನ, 10 ಸಾವಿರ ನಿರ್ವಹಣಾ ವೆಚ್ಚ ನೀಡುವುದು. ವಿಮಾನಯಾನ, ಇಸ್ರೋ, ಐಐಟಿಯಂತಹ ಪ್ರವೇಶ ಪರೀಕ್ಷೆಗಳಿಗೆ 4 ವಿಭಾಗಗಳಲ್ಲೂ ತರಬೇತಿ ಕೇಂದ್ರ ತೆರೆಯುವುದು. ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ಸ್ಥಾಪಿಸುವುದು ಸೇರಿದಂತೆ ವಿವಿಧ 18 ಬೇಡಿಕೆಗಳಿದ್ದ ಮನವಿ ಸ್ವೀಕರಿಸಿದ ಸಿಎಂ ಇವುಗಳಲ್ಲಿ ಸಾಧ್ಯವಾದಷ್ಟು ಈಡೇರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಡಿಸಿಎಂ ಲಕ್ಷಣ ಸವದಿ, ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರಾದ ಎಸ್‌.ವಿ.ರಾಮಚಂದ್ರಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಬಿ.ಪಿ.ಹರೀಶ್‌, ಸಮಾಜದ ಮುಖಂಡ ಟಿ.ಈಶ್ವರ ಮತ್ತಿತರರಿದ್ದರು.

ಚನ್ನಗಿರಿ: ಕಾಯಕ ತತ್ವಕ್ಕೆ ಆದ್ಯತೆ ನೀಡಿ ಬದ್ಧತೆಯ ಬದುಕು ಸಾಗಿಸಿದ 12ನೇ ಶತಮಾನದ ಶರಣರ ನಡೆ-ನುಡಿ ಒಂದಾಗಿದ್ದವು. ಈ ಕಾರಣಕ್ಕೆ 12ನೇ ಶತಮಾನ ಸುವರ್ಣಾಕ್ಷರದಲ್ಲಿ
ಬರೆದಿಡುವಂಥ ಶತಮಾನವೆಂದು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ಎಸ್‌. ಶಂಕರಪ್ಪ ಬಣ್ಣಿಸಿದ್ದಾರೆ. ಮಂಗಳವಾರ ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅಖೀಲ ಶರಣ ಸಾಹಿತ್ಯ ಪರಿಷತ್‌ ಹಮ್ಮಿಕೊಂಡಿದ್ದ ಶರಣರು, ಶರಣ ಸಾಹಿತ್ಯ, ಸಂಸ್ಕೃತಿ, ಆಚಾರ, ವಿಚಾರಧಾರೆ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಸಮೂಹವನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶರಣರ ವಚನ ಸಂದೇಶಗಳು ಮಾರ್ಗದರ್ಶಿ ಹಾಗೂ ಮಾದರಿಯಾಗಿವೆ. ಶರಣರ ಸಂದೇಶಗಳನ್ನು ಸಮಾಜಕ್ಕೆ ಬಿತ್ತಲೆಂದೇ ಸಾಕಷ್ಟು ಕಾರ್ಯಕ್ರವನ್ನು ಆಯೋಜಿಲಾಗುತ್ತಿದೆ. ಶಿವ ಶರಣರ ಮೌಲ್ಯಗಳನ್ನು ಇಂದಿನ ಸಮಾಜಕ್ಕೆ ಧಾರೆ ಎರೆಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

Advertisement

ಜಾತಿ, ಮತ, ಪಂಥ, ಮೇಲು-ಕೀಳು ಎನ್ನದೆ ಕಾಯಕ ಮಾಡಿದವರು ಶರಣರು. ಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಬಾಳಬೇಕು. ಕಾಯಕದಲ್ಲಿ ಕೈಲಾಸ ಕಂಡವರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಪರಿಶ್ರಮ ಇಲ್ಲದ ಜೀವನ ರೂಪಿಸಿಕೊಳ್ಳುವ ಮಾರ್ಗದರ್ಶನ ನೀಡುತ್ತಿದ್ದು, ಆಲಸಿತನ ರೂಢಿಸಿಕೊಳ್ಳುವ ಮೈಗಳ್ಳರನ್ನಾಗಿ ಮಾಡಬಾರದು ಎಂದು ಸಲಹೆ ನೀಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಚಿಕ್ಕೋಳ್‌ ಈಶ್ವರಪ್ಪ ಮಾತನಾಡಿ, ಜಾತಿ ವ್ಯವಸ್ಥೆ, ಅಂಧಾನುಕರಣೆ, ಅಸಮಾನತೆ ವಿರುದ್ಧ ಹೋರಾಟ ಮಾಡಿ ಕಲ್ಯಾಣ ಕ್ರಾಂತಿಗೆ ಕಾರಣರಾದ ಬಹುತೇಕ ಶರಣರಿಗೆ ಜನ್ಮ ನೀಡಿದ ನಾಡು ಕರ್ನಾಟಕ.

ಕಾಯಕ ಶರಣರ ಬಗ್ಗೆ ಸಂಶೋಧನೆ ಅಗತ್ಯವಿದೆ. ಬಸವಾದಿ ಶರಣರ ವಿರುದ್ಧ 800 ವರ್ಷಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಲೇ ಬಂದಿದ್ದಾರೆ. ಕಾಯಕದ ಜತೆಯಲ್ಲಿ ಸಮಾಜವನ್ನು ಕಟ್ಟುವಂತ ಕೆಲಸ ಮಾಡಲಾಗಿದೆ. ಅಂತಹ ಶರಣರನ್ನು ಗುರಿಯಾಗಿಸಿ ಶೋಷಣೆಗೆ ಒಳಪಡಿಸಿರುವ ಘಟನೆಗಳು ಸಹ ನಡೆದಿವೆ. ಆದ್ದರಿಂದ ಕಾಯಕ ಶರಣರ ಕುರಿತು ಸಂಶೋಧನೆ ಅಗತ್ಯವಾಗಿದೆ ಎಂದರು.

ಪ್ರಾಂಶುಪಾಲ ಡಾ| ಬಿ.ವಿ ವೀರಪ್ಪ, ಸಾಹಿತಿ ಕಾಕನೂರು ಎಂ.ಬಿ. ನಾಗರಾಜ್‌, ತಾಲೂಕು ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಆರ್‌. ಶಿವಮೂರ್ತಿ ಜಕ್ಕಲಿ, ಉಪನ್ಯಾಸಕರಾದ ಅಬ್ದುಲ್‌ ರೆಹಮಾನ್‌, ಬಿ. ಮಲ್ಲಿಕಾರ್ಜುನಪ್ಪ, ಶಂಕರ್‌ನಾಯ್ಕ ಮತ್ತಿತರರಿದ್ದರು.

ಚನ್ನಗಿರಿ: ಶರಣರ ವಿಚಾರಧಾರೆ ಕುರಿತ ದತ್ತಿ ಉಪನ್ಯಾಸವನ್ನು ಗಣ್ಯರು ಉದ್ಘಾಟಿಸಿದರು. ರಾಜನಹಳ್ಳಿ ವಾಲ್ಮೀಕಿ ಪೀಠದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಮಹರ್ಷಿ ವಾಲ್ಮೀಕಿ ದೇವಸ್ಥಾನದ ಕಾಮಗಾರಿ ಹಣದ ಕೊರತೆಯಿಂದ ಅಪೂರ್ಣಗೊಂಡಿದ್ದು, 2020-21ನೇ ಸಾಲಿನ ಬಜೆಟ್‌ನಲ್ಲಿ 2 ಕೋ.ರೂ. ಅನುದಾನ ಮೀಸಲಿಡಲು ಶ್ರೀಗಳು ಒತ್ತಾಯಿಸಿದರು. ಇದೆ ರೀತಿ ಯಾದಗಿರಿಯ ಸುರಪುರ ತಾಲೂಕು ಬಂಡೊಳ್ಳಿ ಗ್ರಾಮದಲ್ಲಿರುವ ಗುರುಪೀಠದ 17.5 ಎಕರೆ ಜಮೀನಿನಲ್ಲಿ 50 ಕೋ.ರೂ. ವೆಚ್ಚದಲ್ಲಿ 1ರಿಂದ 12ನೇ ತರಗತಿಗೆ ಶಾಲಾ ಕೊಠಡಿಗಳು, ಪ್ರಯೋಗಾಲಯಗಳು, ಬಾಲಕ-ಬಾಲಕಿಯರ ಪ್ರತ್ಯೇಕ ಹಾಸ್ಟೆಲ್‌, ಶಿಕ್ಷಕರು-ಸಿಬ್ಬಂದಿಗಳ ವಸತಿಗೃಹ, ಆಡಳಿತ ಕಛೇರಿ, ಅಡಿಟೋರಿಯಮ್‌, ಕ್ರೀಡಾಂಗಣ ಸೇರಿದಂತೆ ಶೈಕ್ಷಣಿಕ ಸಮುಚ್ಚಯ ನಿರ್ಮಿಸಲಾಗುತ್ತಿದ್ದು, ಬಜೆಟ್‌ನಲ್ಲಿ 25 ಕೋ.ರೂ. ಘೋಷಿಸಲು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next