Advertisement

ಹರಿಹರಕ್ಕೆ 1 ಕೋ.ರೂ. ದೂಡಾ ಅನುದಾನ

11:25 AM Jan 29, 2020 | Naveen |

ಹರಿಹರ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾದ ಅಂದಾಜು 3 ದಶಕಗಳಲ್ಲಿ ಹರಿಹರ ನಗರಕ್ಕೆ ಮೊದಲ ಸಲ 1 ಕೋ.ರೂ. ಅನುದಾನ ಮಂಜೂರಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

Advertisement

ನಗರದ ಬೀರೂರು-ಸಮ್ಮಸಗಿ ರಸ್ತೆಗೆ ಬೀದಿ ದೀಪ ಅಳವಡಿಸುವ ಕಾಮಗಾರಿಗೆ ನಗರದ ಜಯಶ್ರೀ ಚಿತ್ರಮಂದಿರದ ಎದುರಿನ ರಸ್ತೆ ವಿಭಜಕದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ದೂಡಾ ರಚನೆಯಾಗಿ ಸುಮಾರು 26 ವರ್ಷಗಳ ನಂತರ ಹರಿಹರದ ಅಭಿವದ್ಧಿಗೆ 1 ಕೋ.ರೂ. ನಷ್ಟು ಬೃಹತ್‌ ಮೊತ್ತ ಬಿಡುಗಡೆಯಾಗಿರುವುದು ಇದೆ ಮೊದಲು ಎಂದರು.

ರಾಜ್ಯ ಬಿಜೆಪಿ ಸರ್ಕಾರದ ಅವಧಿ ಇನ್ನೂ 3 ವರ್ಷಗಳಿದ್ದು, ಹರಿಹರದ ಪೌರಾಯುಕ್ತರು,
ಅಧ್ಯಕ್ಷರೊಂದಿಗೆ ಚರ್ಚಿಸಿ, ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಪ್ರಸ್ತಾವನೆ ಸಲ್ಲಿಸಿ, ಹಣ ಮಂಜೂರು ಮಾಡಿಸಿಕೊಳ್ಳಬೇಕು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಶ್ಯಾಮನೂರು ಶಿವಶಂಕರಪ್ಪ, ಎಸ್‌.ರಾಮಪ್ಪ ಒಟ್ಟಾಗಿ ಅವಳಿ ನಗರಗಳ ಅಭಿವೃದ್ಧಿಪಡಿಸಬೇಕು ಎಂದರು.

ಶಾಸಕ ಎಸ್‌.ರಾಮಪ್ಪ ಮಾತನಾಡಿ, ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ತಮ್ಮದೇ ಪಕ್ಷದ ಮಾದಪ್ಪ ಹಾಗೂ ಅಂದಿನ ಡಿಸಿ ರಮೇಶ್‌ ಅವರಿಗೆ ಹರಿಹರ ಹಳೆ ಪಿಬಿ ರಸ್ತೆ ಅಭಿವೃದ್ಧಿಯಾಗಿ ಹಲವು ವರ್ಷಗಳಾಗಿದ್ದು, ಬೀದಿ ದೀಪಗಳಿಲ್ಲ. ದಾವಣಗೆರೆಯಂತೆ ಹರಿಹರದಲ್ಲೂ ಬೀದಿ ದೀಪ ಅಳವಡಿಕೆಗೆ 1 ಕೋ.ರೂ. ಅನುದಾನ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಅನುದಾನ ಬಂದಿದೆ ಎಂದರು.

ನಗರಸಭೆಯ 45 ಲಕ್ಷ ರೂ. ಸೇರಿದಂತೆ ಒಟ್ಟು 1.45 ಕೋ.ರೂ. ವೆಚ್ಚದಲ್ಲಿ ಹಳೆ ಪಿಬಿ ರಸ್ತೆಯ ತುಂಗಭದ್ರಾ ಸೇತುವೆಯಿಂದ ದಾವಣಗೆರೆ ಮಾರ್ಗದ 2ನೇ ಗೇಟ್‌ ವರೆಗೆ ದಾವಣಗೆರೆ ಮಾದರಿಯಲ್ಲಿ ಬೀದಿ ದೀಪ ಅಳವಡಿಸಲಾಗುವುದು ಎಂದರು.

Advertisement

ನಗರ ವ್ಯಾಪ್ತಿಯ 8 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳು ಅಲ್ಲದೆ 13.5 ಕೋ.
ರೂ. ವೆಚ್ಚದ ಎಕ್ಕೆಗೊಂದಿ ರಸ್ತೆ, 17 ಕೋ. ವೆಚ್ಚದ ದೀಟೂರು-ಪಾಮೇನಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ. ಆದಷ್ಟು ಬೇಗ ಸಂಸದರು ಸಿಎಂ ಜೊತೆ ಚರ್ಚಿಸಿ ಮಂಜೂರಾದ ಕಾಮಗಾರಿಗಳ ಅನುದಾನ ದೊರಕಿಸಬೇಕೆಂದು ಸಂಸದರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಎಂ.ಸಿದ್ದೇಶ್ವರ, ರಾಮಪ್ಪನವರು ಬಿ.ಪಿ.ಹರೀಶ್‌ ಜತೆ ಬೆಂಗಳೂರಿಗೆ ತೆರಳಿ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಲಿ. ಅಗತ್ಯವಿದ್ದರೆ ತಾವು ಸಿಎಂ ಜೊತೆ ಮಾತನಾಡುವುದಾಗಿ ತಿಳಿಸಿದರು. ಅತಿವೃಷ್ಟಿ ಹಾನಿಗೆ ಸರ್ಕಾರ 8,500 ಸಾವಿರ ಕೋ.ರೂ. ಪರಿಹಾರ ನೀಡಬೇಕಾಗಿದ್ದರಿಂದ ಹಣದ ಕೊರತೆಯಾಗಿದೆ. ಬರುವ ಮಾರ್ಚ್‌ ನಂತರ ರಾಜ್ಯದಲ್ಲಿ ಅಭವೃದ್ಧಿ ಪರ್ವ ಆರಂಭವಾಗಲಿದೆ ಎಂದರು.

ಜಿ.ಪಂ.ಸದಸ್ಯ ವಾಗೀಶ್‌ ಸ್ವಾಮಿ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಸದಸ್ಯರಾದ ರಾಜು ರೋಖಡೆ, ಮಾಜಿ ಶಾಸಕ ಬಿ.ಪಿ.ಹರೀಶ್‌, ನಗರಸಭೆ ಸದಸ್ಯರಾದ ಎಸ್‌.ಎಂ. ವಸಂತ್‌, ನೀತಾ ಮೆಹರ್ವಾಡೆ, ಕೆ.ಜಿ. ಸಿದ್ದೇಶ್‌, ಆಟೋ ಹನುಮಂತ, ದೂಡಾ ಆಯುಕ್ತ ಕುಮಾರಸ್ವಾಮಿ, ನಗರಸಭೆ ಪೌರಾಯುಕ್ತೆ ಎಸ್‌.ಲಕ್ಷಿ, ಮುಖಂಡರಾದ ಎಸ್‌.ಎಂ.ವೀರೇಶ್‌, ಡಿ.ಹೇಮಂತರಾಜ್‌, ಬೆಳ್ಳೂಡಿ ರಾಮಚಂದ್ರಪ್ಪ, ಕೆ.ಮರಿದೇವ್‌, ಅಜಿತ್‌ ಸಾವಂತ್‌, ಮಾರುತಿ ಶೆಟ್ಟಿ, ಸುರೇಶ್‌ ಚಂದಾಪುರ್‌, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next