Advertisement

ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅನನ್ಯ

10:58 AM Sep 06, 2019 | Naveen |

ಹರಿಹರ: ಉನ್ನತ ಮಟ್ಟದ ನಾಗರಿಕತೆ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಎಸ್‌.ರಾಮಪ್ಪ ಹೇಳಿದರು.

Advertisement

ನಗರದ ಮರಿಯಾ ಸದನದಲ್ಲಿ ಗುರುವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನಾದಿ ಕಾಲದಿಂದಲೂ ಶಿಕ್ಷಕರು ಸಮಾಜದಲ್ಲಿ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡುವಲ್ಲಿ ಶ್ರಮಿಸುತ್ತಾ ಬಂದಿದ್ದಾರೆ. ದೇಶದ ಪ್ರಗತಿಯಲ್ಲಿ ಶಿಕ್ಷಕರ ಕೊಡುಗೆ ಅನನ್ಯ ಎಂದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯ ರೂಪಿಸುವ ಶಕ್ತಿ ಶಿಕ್ಷಕರಿಗಿದೆ. ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ವ್ಯಕ್ತಿತ್ವ ರೂಪಿಸಿರುವ ಶಿಕ್ಷಕರನ್ನು ಸ್ಮರಿಸುವ ದಿನವೇ ಶಿಕ್ಷಕರ ದಿನಾಚರಣೆಯಾಗಿದೆ. ಇಂದಿನ ದಿನಮಾನಗಳಲ್ಲಿ ಖಾಸಗಿಗಿಂತ ಸರಕಾರಿ ಶಾಲೆಗಳ ಮಕ್ಕಳೇ ಉನ್ನತ ಸಾಧನೆ ಮಾಡುತ್ತಿದ್ದಾರೆ ಎಂದರು.

ಸಾಮಾನ್ಯ ಶಿಕ್ಷಕನೂ ಕೂಡ ತನ್ನ ಸಾಧನೆಗಳ ಮೂಲಕ ರಾಷ್ಟ್ರಪತಿ ಸ್ಥಾನಕ್ಕೇರಬಹುದೆಂಬ ಸಂದೇಶ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರಿಂದ ತಿಳಿಯುತ್ತದೆ. ಅವರ ಜೀವನ ಎಲ್ಲಾ ಶಿಕ್ಷಕರಿಗೆ ಆದರ್ಶವಾಗಲಿ ಎಂದು ಆಶಿಸಿದರು.ಎಸ್‌ಜೆವಿಪಿ ಕಾಲೇಜು ನಿವೃತ್ತ ಉಪನ್ಯಾಸಕ ಪ್ರೊ| ಬಿ.ಬಿ.ನಂದ್ಯಾಲ ಮಾತನಾಡಿ, ಮಾನವೀಯ ಮೌಲ್ಯ, ಪ್ರೀತಿ, ವಿಶ್ವಾಸಗಳನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದರು. ನಿವೃತ್ತ ಶಿಕ್ಷಕರು ಹಾಗೂ ಶಿಕ್ಷಕರ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಶ್ರೀ ಹರಿಹರೇಶ್ವರ ದೇವಸ್ಥಾನದಿಂದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರ ಭಾವಚಿತ್ರದ ಮೆರವಣಿಗೆ ನಡೆಯಿತು. ಆರೋಗ್ಯ ಮಾತೆ ಚರ್ಚ್‌ನ ಫಾ|ಡಾ| ಅಂತೋನಿ ಪೀಟರ್‌, ತಾಪಂ ಅಧ್ಯಕ್ಷ ಶ್ರೀದೇವಿ ಮಂಜಪ್ಪ, ಉಪಾಧ್ಯಕ್ಷೆ ಜಯಮ್ಮ ಬಸವಲಿಂಗಪ್ಪ, ಜಿಪಂ ಸದಸ್ಯ ಬಿ.ಎಂ. ವಾಗೀಶ್‌ ಸ್ವಾಮಿ, ಹೇಮಾವತಿ ಭೀಮಪ್ಪ, ಎಪಿಎಂಸಿ ಅಧ್ಯಕ್ಷ ನರೇಂದ್ರ ಕೆ.ಎಂ., ನಗರಸಭಾ ಸದಸ್ಯ ನಿಂಬಕ್ಕ ಚಂದಾಪೂರ್‌, ಬಿಇಒ ಬಸವರಾಜಪ್ಪ ಯು. ಸಿಪಿಐ ಐ.ಎಸ್‌. ಗುರುನಾಥ್‌, ಶಿಕ್ಷಕರ ಸಂಘದ ಅಧ್ಯಕ್ಷ ನಜೀರ್‌ ಅಹ್ಮದ್‌, ರೇವಣಸಿದ್ದಪ್ಪ ಅಂಗಡಿ, ರೇವಣ್ಣ ನಾಯಕ್‌, ಎ.ಸಿದ್ದಲಿಂಗಪ್ಪ, ರಿಯಾಜ್‌ ಅಹ್ಮದ್‌, ಬಿಆರ್‌ಪಿ ಎಸ್‌.ಬಿ.ಮಹಬೂಬ್‌ ಬಾಷಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next