Advertisement

ಮನೆಮನೆಗೆ ತೆರಳಿ ಪೌರತ್ವ ಕಾಯ್ದೆ ಪಾಠ

12:03 PM Jan 06, 2020 | Naveen |

ಹರಿಹರ: ಪೌರತ್ವ ತಿದ್ದುಪಡಿ ಕಾಯಿದೆ ಕುರಿತು ಸೂಕ್ತ ಮಾಹಿತಿ ನೀಡಲು ಜ.1ರಿಂದ ಬಿಜೆಪಿ ಹಮ್ಮಿಕೊಂಡಿರುವ ಜನಸಂಪರ್ಕ ಆಂದೋಲನದಂತೆ ಮಾಜಿ ಶಾಸಕ ಬಿ.ಪಿ.ಹರೀಶ್‌ ಹಾಗೂ ಪಕ್ಷದ ಮುಖಂಡರು ಭಾನುವಾರ ನಗರದ 21ನೇ ವಾರ್ಡ್‌ನ ಮನೆಮನೆಗೆ ತೆರಳಿ ನೂತನ ಕಾಯ್ದೆ ಕುರಿತು ವಿವರಣೆ ನೀಡುವ ಮೂಲಕ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು.

Advertisement

ಚುನಾವಣಾ ಪ್ರಚಾರ ಸಮಯದಲ್ಲಿ ಮತಭಿಕ್ಷೆಗೆ ತೆರಳಿದಂತೆ ಮನೆಮನೆಗೆ ತೆರಳಿ ಕರಪತ್ರ ವಿತರಿಸಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾರಿಗೂ ತೊಂದರೆ ಉಂಟಾಗುವುದಿಲ್ಲ ಎಂಬ ವಾಸ್ತವ ಸತ್ಯವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾಗಿ, ಚಿತ್ರಹಿಂಸೆ ಅನುಭವಿಸಿ ಭಾರತಕ್ಕೆ ಬಂದಿರುವ ಅಲ್ಲಿನ ಹಿಂದೂಗಳಿಗೆ ಪೌರತ್ವ ನೀಡುವುದಕ್ಕಷ್ಟೇ ಕಾಯ್ದೆ ಜಾರಿಗೆ ತರಲಾಗಿದೆ. ಆದರೆ, ಪ್ರತಿಪಕ್ಷಗಳು ಜನರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿವೆ ಎಂದರು.

ಯಾರು ಕದ್ದು ಮುಚ್ಚಿ ದೇಶದೊಳಗೆ ನುಸುಳಿ ಬಂದಿದ್ದಾರೋ ಅಂಥವರು ಹೊರ ಹೋಗಬೇಕಾಗುತ್ತದೆ. ಅದರೆ ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಓಟ್‌ ಬ್ಯಾಂಕ್‌ಗಾಗಿ ಸಿಎಎ ಬಗ್ಗೆ ಅಪಪ್ರಚಾರ ಮಾಡುತ್ತಾ ಅಲ್ಪ ಸಂಖ್ಯಾತರ ಓಲೈಸುತ್ತಿವೆ. ರಾಜಕೀಯ ಲಾಭಕ್ಕಾಗಿ ಹಿಂಸಾಚಾರವನ್ನೂ ಪ್ರಚೋದಿಸುತ್ತಿರುವುದು ಅಕ್ಷಮ್ಯ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಇಲ್ಲಿನ ಅಲ್ಪಸಂಖ್ಯಾತರು, ಮುಸ್ಲಿಂ
ಸಮುದಾಯದವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ. ಆದರೂ ಸಹ
ವಿರೋಧ ಪಕ್ಷಗಳು ಅಪ ಪ್ರಚಾರ ನಡೆಸುವ ಮೂಲಕ ದೇಶದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿವೆ. ಈ ಅಂಶಗಳನ್ನು ಎಲ್ಲ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರು ಮನೆ-ಮನೆಗೆ ತೆರಳಿ
ಜನರಿಗೆ ಮನದಟ್ಟು ಮಾಡಬೇಕು ಎಂದು ಕರೆ ನೀಡಿದರು.

Advertisement

ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಂ ವಿರೇಶ್‌ ಹನಗವಾಡಿ ಮಾತನಾಡಿ, ದೇಶದ ಆಂತರಿಕ
ಭದ್ರತೆಗಾಗಿ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿದೆ. ಸಿಎಎ ಜಾರಿ ತರದಿದ್ದರೆ ಮತಾಂಧ ದೇಶಗಳಿಂದ ಹೊರದಬ್ಬಲ್ಪಟ್ಟು ಕಳೆದ ಹಲವು ವರ್ಷಗಳಿಂದ ಅತಂತ್ರ ಸ್ಥಿತಿಯಲ್ಲಿರುವ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಸಿಖ್‌ ಸಮುದಾಯದವರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜೀತ್‌ ಸಾವಂತ್‌, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್‌,
ನಗರಸಭಾ ಸದಸ್ಯೆ ನೀತಾ ಮೆಹರ್ವಾಡೆ, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಐರಣಿ,
ಬಾತಿ ಚಂದ್ರಶೇಖರ್‌, ಮಂಜಾನಾಯ್ಕ, ಪ್ರವೀಣ್‌ ಪವಾರ್‌, ಮಾಲತೇಶ್‌ ಭಂಡಾರಿ, ರಾಜೇಶ್‌ ವರ್ಣೆಕರ್‌, ಮೋತ್ಯನಾಯ್ಕ, ಸ್ವಾತಿ ಹನುಮಂತ್‌, ಜೆ.ಎಂ.ಪ್ರಶಾಂತ್‌, ರವಿಕುಮಾರ್‌, ಎನ್‌.ಇ.ಸ್ವಾಮಿ, ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next