Advertisement

ಫ‌ಲಿತಾಂಶ ಅತಂತ್ರ; ಅಧಿಕಾರಕ್ಕಾಗಿ ಪಕ್ಷಗಳ ತಂತ್ರ

10:29 AM Jun 03, 2019 | Team Udayavani |

ಹರಿಹರ: ಪ್ರಸಕ್ತ ನಗರಸಭೆ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯದೆ ಅತಂತ್ರ ಫಲಿತಾಂಶ ಎೂರಬಿದ್ದಿದೆ.

Advertisement

ಯಾರು, ಯಾರೊಂದಿಗೆ ಮೈತ್ರಿ ಮಾಡಿಕೊಂಡು ನಗರಸಭೆ ಆಡಳಿತದ ಚುಕ್ಕಾಣಿ ಹಿಡಿಯುತ್ತಾರೆ, ಅಧ್ಯಕ್ಷ-ಉಪಾಧ್ಯಕ್ಷ ಗಾದಿ ಯಾರಿಗೆ ಒಲಿಯುತ್ತವೆ, ಜೆಡಿಎಸ್‌ಗೆ ವರವಾಗಿ ಪರಿಣಮಿಸಿರುವ ಮೀಸಲಾತಿ ಪ್ರಶ್ನಿಸಿ ಯಾರಾದರೂ ನ್ಯಾಯಾಲಯದ ಮೊರೆ ಎೂೕಗಬಹುದೇ ಎಂಬ ಚರ್ಚೆಗಳೇ ನಗರಾದ್ಯಂತ ನಡೆಯುತ್ತಿವೆ.

ಶಾಸಕ ಎಸ್‌. ರಾಮಪ್ಪ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದಾಗಿ ಎೕಳುತ್ತಿದ್ದರೆ ಜೆಡಿಎಸ್‌ ಮುಖಂಡ ಎಚ್.ಎಸ್‌. ಶಿವಶಂಕರ್‌ ಮಾತ್ರ ತಮ್ಮ ಮುಂದಿನ ನಿಲುವಿನ ಬಗ್ಗೆ ಬಹಿರಂಗವಾಗಿ ಯಾವುದೇ ಎೕಳಿಕೆ ನೀಡಿಲ್ಲ.

ಇನ್ನೊಂದು ತಿಂಗಳು ಅವಕಾಶ: ವಿಜೇತ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಆಯೋಗ ಸರ್ಕಾರಕ್ಕೆ ಕಳಿಸಿದ ನಂತರ, ಗೆಜೆಟ್ ನೋಟಿಫಿಕೇಷನ್‌ ಆಗಿ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಲು ಇನ್ನೊಂದು ತಿಂಗಳು ಕಾಲಾವಕಾಶ ಬೇಕಾಗಬಹುದು. ಅಲ್ಲಿಯವರೆಗೂ ನಗರಸಭೆಯ ಮುಂದಿನ ಆಡಳಿತದ ಬಗ್ಗೆ ಕುತೂಎೂಲ ಸಹಜವೇ ಆಗಿದೆ.

ನಗರಸಭೆಯಾಗಿ ಮೇಲ್ದರ್ಜೆಗೆ: 1996 ರಲ್ಲಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ ಇಲ್ಲಿನ ನಗರ ಸ್ಥಳೀಯ ಸಂಸ್ಥೆ 7.84 ಚ.ಕಿ.ಮೀ. ಪ್ರದೇಶದ ವ್ಯಾಪ್ತಿ ಒಳಗೊಂಡಿತ್ತು. ಬಹುದಿನಗಳ ಬೇಡಿಕೆಯಂತೆ 2017ರಲ್ಲಿ ನಗರ ಎೂರವಲಯದ ಅಮರಾವತಿ (ಅಮರಾವತಿ ಕಾಲೋನಿ, ಕೆಎಚ್ಬಿ ಕಾಲೋನಿ, ಆಂಜನೇಯ ಬಡಾವಣೆ) ಹರ್ಲಾಪುರ, ಮಹಜೇನಹಳ್ಳಿ ಮತ್ತು ಶೇರಾಪುರ ಗ್ರಾಮಗಳು ನಗರಕ್ಕೆ ಸೇರ್ಪಡೆಯಾಗಿದ್ದು, ನಗರಸಭೆಗೆ ವ್ಯಾಪ್ತಿ ವಿಸ್ತಾರವಾಗಿದೆ.

Advertisement

ಪುನರ್‌ ವಿಂಗಡಣೆ ಬಳಿಕ ಮೊದಲ ಚುನಾವಣೆ: ವಾರ್ಡ್‌ ಸಂಖ್ಯೆ ಅಷ್ಟೆ ಇದ್ದರೂ ವಾರ್ಡ್‌ಗಳ ವ್ಯಾಪ್ತಿ ಎಚ್ಚಿಸಲಾಗಿದೆ. ವಾರ್ಡ್‌ಗಳ ಪುನರ್‌ವಿಂಗಡಿಸಿದ ನಂತರ ಈಗ ನಡೆದಿದ್ದೆ ಪ್ರಥಮ ಚುನಾವಣೆಯಾಗಿದೆ.

ಏಳು-ಬೀಳು: 1996 ರ ಪ್ರಥಮ ಚುನಾವಣೆಯಲ್ಲಿ ಕಾಂಗೆಸ್‌ ಸ್ಪಷ್ಟ ಬಹುಮತ ಗಳಿಸಿ ಪೂರ್ಣಾವಧಿ ಅಕಾರ ಚಲಾಯಿಸಿತು. ಅನ್ವರ್‌ ಸಾಬ್‌ ನಗರಸಭೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ನಂತರ ಕೃಷ್ಣ ಸಾ, ಸೈಯದ್‌ ಖಲೀಲ್, ಸೈಯ್ಯದ್‌ ನಜೀರ್‌, ಬಿ.ರೇವಣಸಿದ್ದಪ್ಪ ಅಧ್ಯಕ್ಷರಾದರು.

2001 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಜಂಟಿಯಾಗಿ ಆಡಳಿತ ನಡೆಸಿದವು. ಕಾಂಗ್ರೆಸ್‌ ಪಕ್ಷದಿಂದ ಈಗಿನ ಶಾಸಕ ಎಸ್‌. ರಾಮಪ್ಪ ಮೊದಲ ಎರಡೂವರೆ ವರ್ಷಗಳ ಕಾಲ ಅಧಿಕಾರ ನಡೆಸಿ ನಗರಸಭೆಯ ಪ್ರಥಮ ದೀರ್ಘಾವ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ನಂತರದ ಎರಡೂವರೆ ವರ್ಷಗಳ ಅವಧಿಯ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಶ್ನಿಸಿ ಕಾಂಗ್ರೆಸ್‌ ಸದಸ್ಯ ಬ್ಯಾಂಕ್‌ ಶಿವಣ್ಣ ತಡಯಾಜ್ಞೆ ತಂದಿದ್ದರಿಂದ ಜಿಲ್ಲಾಕಾರಿಗಳು ಆಡಳಿತಾಧಿಕಾರಿಗಳಾಗಿ ಅಧಿಕಾರ ಚಲಾಯಿಸಿದರು.

ಬಹುಮತವಿದ್ದರೂ ಸುಮಗವಾಗದ ಜೆಡಿಎಸ್‌ ಹಾದಿ: 2007 ರ ಚುನಾವಣೆಯಲ್ಲಿ 21 ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಪಡೆದಿದ್ದ ಜೆಡಿಎಸ್‌ ನಗರಸಭೆ ಅಧಿಕಾರ ಹಿಡಿಯಿತು. ಕಾಂಗ್ರೆಸ್‌ 7 ಸ್ಥಾನ ಪಡೆದಿತ್ತು. ಬಿಜೆಪಿಯಿಂದ ರಮೇಶ್‌ ಮೆಹರ್ವಾಡೆ ಮತ್ತು ಪಕ್ಷೇತರರಾಗಿ ಮೀರಾಭಟ್, ಬಿ.ಆರ್‌. ಸುರೇಶ್‌ ಆಯ್ಕೆಯಾಗಿದ್ದರು.

ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರಾಗಿ ಜೆಡಿಎಸ್‌ನ ಕೆ.ಮರಿದೇವ್‌, ಎೂನ್ನಮ್ಮ ಕೊಂಡಜ್ಜಿ, ನಂತರ ಪಕ್ಷೇತರ ಅಭ್ಯರ್ಥಿ ಬಿ.ಆರ್‌.ಸುರೇಶ್‌ ಅಧ್ಯಕ್ಷರಾದರೆ, ಜೆಡಿಎಸ್‌ನ ಕೆ.ವೀರಣ್ಣ, ನೈಮುನ್ನಿಸಾ, ಹಬೀಬ್‌ ಉಲ್ಲಾ ಉಪಾಧ್ಯಕ್ಷರಾಗಿದ್ದರು. ಜೆಡಿಎಸ್‌ ಸದಸ್ಯ ವೀರಣ್ಣ ಮರಣದಿಂದ ನಡೆದ ಮರುಚುನಾವಣೆಯಲ್ಲಿ ಎಸ್‌.ರಾಮಪ್ಪ ಗೆಲ್ಲುವ ಮೂಲಕ ಕಾಂಗ್ರೆಸ್‌ ಸದಸ್ಯರ ಸಂಖ್ಯೆ 8ಕ್ಕೆ ಏರಿತ್ತು.

ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದ ಜೆಡಿಎಸ್‌ ಮುಂದಿನ ಹಾದಿ ಅಷ್ಟೇನು ಸುಗಮವಾಗಿರಲಿಲ್ಲ. ಅಧ್ಯಕ್ಷ ಸ್ಥಾನದ ತೀವ್ರ ಆಕಾಂಕ್ಷಿಯಾಗಿದ್ದ ಬಿ.ಕೆ. ಸೈಯದ್‌ ಐವರು ಸದಸ್ಯರೊಂದಿಗೆ ಸ್ವಪಕ್ಷ ಜೆಡಿಎಸ್‌ ವಿರುದ್ಧ ಬಂಡೆದ್ದರು. ಕೇವಲ 8 ಸ್ಥಾನ ಪಡೆದಿದ್ದ ಕಾಂಗ್ರೆಸ್‌ ಪಕ್ಷದ ರಾಧಾ ಹುಲಿಗೇಶ್‌ ಅಧ್ಯಕ್ಷರಾಗಲು ಇದೆ ಕಾರಣವಾಯಿತು.

ತತ್‌ಕ್ಷಣದ ಅಪಾಯದಿಂದ ಪಾರಾಗಲು ರಾಧಾರನ್ನು ಅಧ್ಯಕ್ಷರನ್ನಾಗಿಸಿದ್ದ ಚಾಣಾಕ್ಷ ಶಿವಶಂಕರ್‌ ಕೆಲ ತಿಂಗಳಲ್ಲೆ ಪಕ್ಷೇತರ ಸದಸ್ಯ ಬಿ.ಆರ್‌. ಸುರೇಶ್‌ ಬೆಂಬಲದಿಂದ ತಮ್ಮ ಪಕ್ಷದ ವಿಶ್ವನಾಥ್‌ ಭೂತೆ ಅವರನ್ನು ಅಧ್ಯಕ್ಷರಾಗಿಸಿದರು. ಈ ವೇಳೆ ಬಿಜೆಪಿಯ ಏಕೈಕ ಸದಸ್ಯ ರಮೇಶ್‌ ಮೆಹರ್ವಾಡೆ ಅಧ್ಯಕ್ಷರಾಗಲು ಯತ್ನಿಸಿ ಕೇವಲ 1 ಮತದಿಂದ ವಿಫಲರಾಗಿದ್ದರು.

ಕೈ-ಕಮಲದ ಮೈತ್ರಿಗೆ ಬಹುಕಾಲ ಬಾಳಲಿಲ್ಲ: 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ 13, ಜೆಡಿಎಸ್‌ 10, ಕೆಜೆಪಿ 4, ಬಿಜೆಪಿ 1 ಸ್ಥಾನ ಗಳಿಸಿದ್ದು, ಮೂವರು ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಪಕ್ಷೇತರ ಅಭ್ಯರ್ಥಿ ಡಿ.ಜಿ. ರಘುನಾಥ್‌ರನ್ನು ಪಕ್ಷಕ್ಕೆ ಸೇರಿಸಿಕೊಂಡು, ಅಷ್ಟರಲ್ಲಾಗಲೆ ಒಟ್ಟಾಗಿದ್ದ ಕೆಜೆಪಿ-ಬಿಜೆಪಿಯ ಐವರು ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್‌ ನಗರಸಭೆ ಅಧಿಕಾರ ಹಿಡಿಯಿತು.

ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್‌ ವಿಫಲ: ಕಾಂಗ್ರೆಸ್‌ನ ಷಹಜಾದ್‌ ಎಸ್‌.ಕೆ. ಅಧ್ಯಕ್ಷರಾದರೆ, ಬಿಜೆಪಿಯ ಅಂಬುಜಾ ರಾಜೋಳಿ ಉಪಾಧ್ಯಕ್ಷರಾದರು. ಆದರೆ ವಿಪಕ್ಷ ಸ್ಥಾನದಲ್ಲಿರಲಾಗದೆ ಚಡಪಡಿಸಿದ ಜೆಡಿಎಸ್‌ ಕೆಲ ತಿಂಗಳಲ್ಲೆ ಕಾಂಗ್ರೆಸ್‌ ಪಕ್ಷದ ವೈಫಲ್ಯ ಬಳಸಿಕೊಂಡು ಅಧಿಕಾರ ಹಿಡಿಯುವಲ್ಲಿ ಸಫಲವಾಯಿತು.

ಚಾಣಾಕ್ಷ ನಡೆ : ಕಾಂಗ್ರೆಸ್‌ನ ಬಂಡಾಯ ಸದಸ್ಯರಾದ ಸೈಯದ್‌ ಏಜಾಜ್‌ ಅಹ್ಮದ್‌, ಸೈಯದ್‌ ಜಹೀರ್‌ ಅಲ್ತಮಷ್‌, ಬಿ.ಅಲ್ತಾಫ್‌, ಪರ್ವಿನ್‌ ಬಾನು, ಹಜರತ್‌ ಅಲಿ ಬೆಂಬಲದೊಂದಿಗೆ ಸ್ವತಂತ್ರವಾಗಿ ಗೆದ್ದು, ಜೆಡಿಎಸ್‌ ಸೇರಿದ್ದ ಪ್ರತಿಭಾ ಕುಲಕರ್ಣಿ ಅವರನ್ನು ಅಧ್ಯಕ್ಷರಾಗಿಸುವಲ್ಲಿ ಶಿವಶಂಕರ್‌ ಯಶಸ್ವಿಯಾದರು.

ಅವಿರೋಧ ಆಯ್ಕೆ: 2ನೇ ಅವಧಿಯ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ (ಹಿಂದುಳಿದ ವರ್ಗ ಬ ಮಹಿಳೆ) ಕಾಂಗ್ರೆಸ್‌ನ ಆಶಾ ಮರಿಯೋಜಿರಾವ್‌, ಉಪಾಧ್ಯಕ್ಷ ಸ್ಥಾನಕ್ಕೆ (ಪರಿಶಿಷ್ಟ ಪಂಗಡ ಮಹಿಳೆ) ಜೆಡಿಎಸ್‌ನ ಅಂಜಿನಮ್ಮ ಮಾತ್ರ ಅರ್ಹರಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.

18ನೇ ವಾರ್ಡ್‌ ಸದಸ್ಯ ಜಿ.ಸುರೇಶ್‌ಗೌಡರ ಮರಣದಿಂದ ತೆರವಾದ ಸ್ಥಾನಕ್ಕೆ ಅದೆ ಮೀಸಲಾತಿಗೆ ಸೇರಿದ ಸುಜಾತಾ ಆಯ್ಕೆಯಾಗಿದ್ದು, ಎರಡೂವರೆ ವರ್ಷ ತಾವೊಬ್ಬರೇ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ಆಶಾರ ಕನಸನ್ನು ಭಗ್ನಗೊಳಿಸಿತು. ಆಶಾ ಅವರು ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದಾರೆಂದು ಆರೋಪಿಸಿ ಸ್ವಪಕ್ಷ ಹಾಗೂ ವಿಪಕ್ಷದವರೆಲ್ಲಾ ಸೇರಿ ಆಶಾರನ್ನು ಕೆಳಗಿಳಿಸಿ ಸುಜಾತಾ ರೇವಣಸಿದ್ದಪ್ಪರನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next