Advertisement

ಹಿಜಾಬ್‌-ಕೇಸರಿ ವಿವಾದ : 6 ಪ್ರಕರಣ ದಾಖಲು ; ಎಸ್ಪಿ ರಿಷ್ಯಂತ್‌ ಹೇಳಿಕೆ

11:16 AM Feb 10, 2022 | Team Udayavani |

ಹರಿಹರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಹಿಜಾಬ್‌ -ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ
ನಡೆಯುತ್ತಿದೆ ಎಂದು ಎಸ್‌ಪಿ ಸಿ.ಬಿ. ರಿಷ್ಯಂತ್‌ ತಿಳಿಸಿದ್ದಾರೆ.

Advertisement

ಗಲಾಟೆ ನಡೆದ ಸ್ಥಳಕ್ಕೆ ಪ್ರಭಾರಿ ಐಜಿಪಿ ಸತೀಶ್‌ ಕುಮಾರ್‌ ಅವರೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಲ್ಲು ತೂರಾಟ ನಡೆಸಿ
ಪೊಲೀಸರನ್ನು ಗಾಯಗೊಳಿಸಿರುವ ಹಾಗೂ ವಾಹನ ಜಖಂಗೊಳಿಸಿರುವ ಬಗ್ಗೆ ನಾಲ್ಕು ಪ್ರಕರಣಗಳು, ಕಾಲೇಜು ಆವರಣದೊಳಗೆ ವಿದ್ಯಾರ್ಥಿಗಳ ಪರಸ್ಪರ ಗಲಾಟೆ ಮತ್ತು ಕಲ್ಲು
ತೂರಾಟದಲ್ಲಿ ಗಾಯಗೊಂಡಿರುವ ಕುರಿತು ತಲಾ ಒಂದೊಂದು ಪ್ರಕರಣ ದಾಖಲಿಸಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಗಲಾಟೆ ಬಗ್ಗೆ ಸಾಕಷ್ಟು ವಿಡಿಯೋ ಮತ್ತು ಫೋಟೋಗಳು ಲಭ್ಯವಿದ್ದು, ಇವುಗಳನ್ನು ಪರಿಶೀಲಿಸಿ ತಪ್ಪಿತಸ್ಥರನ್ನು ನಿಖರವಾಗಿ ಗುರುತಿಸಲಾಗುವುದು. ಅಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಮಾಯಕರನ್ನಾಗಲಿ, ಅನವಶ್ಯಕವಾಗಿ ಯಾರನ್ನೇ ಆಗಲಿ ಪ್ರಕರಣದಲ್ಲಿ ಸಿಲುಕಿಸುವ, ಬಂಧಿಸುವ ಪ್ರಶ್ನೆಯೇ ಇಲ್ಲ. ಕಾಲೇಜಿನ ಸಿಬ್ಬಂದಿ ಹಾಗೂ ಶಾಸಕರೊಂದಿಗೆ ಘಟನೆ ಬಗ್ಗೆ ಚರ್ಚಿಸಲಾಗಿದೆ.

ಘಟನೆ ನಡೆದಾಗ ಹಾಜರಿದ್ದ ಹಲವಾರು ಮುಖಂಡರೂ ಸಂಪರ್ಕದಲ್ಲಿದ್ದು, ಅವರಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರು ಯಾವುದೇ ಗುಂಪಿಗೆ
ಸೇರಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹರಿಹರ ನಗರದಲ್ಲಿ 144 ಸೆಕ್ಷನ್‌ ಜಾರಿಯಲ್ಲಿದ್ದು ಅನವಶ್ಯಕ ಓಡಾಟ, ಗುಂಪುಗೂಡುವಿಕೆ ನಿಷೇಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ
ಹೆಚ್ಚುವರಿ ಪೊಲೀಸ್‌ ಪಡೆ ನಿಯೋಜಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.

ಪ್ರಭಾರಿ ಡಿವೈಎಸ್‌ಪಿ ಬಸವರಾಜಪ್ಪ, ಸಿಪಿಐ ಯು. ಸತೀಶ್‌ಕುಮಾರ್‌ ಇದ್ದರು.

Advertisement

ಇದನ್ನೂ ಓದಿ : ಹಿಜಾಬ್ ವಿವಾದ ಅಂತರರಾಷ್ಟ್ರೀಯ ಮಟ್ಟದಿಂದ ಇಲ್ಲಿಗೆ ಬರುತ್ತದೆ : ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next