Advertisement

ತಾಪಂ ಇಒ ಸ್ಥಾನಕ್ಕೆ ಇಬ್ಬರು ಅಧಿಕಾರಿಗಳ ಕುಸ್ತಿ!

11:57 AM Jan 18, 2020 | Naveen |

ಹರಿಹರ: ಇಲ್ಲಿನ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಸ್ಥಾನಕ್ಕೆ ಇಬ್ಬರು ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆಯುತ್ತಿದ್ದು, ಹಾಲಿ ಕಾರ್ಯ ನಿರ್ವಹಿಸುತ್ತಿದ್ದ ಜಿ.ಡಿ.ಗಂಗಾಧರನ್‌ ಹಾಗೂ ಇಲ್ಲಿಗೆ ವರ್ಗಾವಣೆ ಗೊಂಡಿರುವ ಲಕ್ಷ್ಮೀಪತಿ ಬಿ. ಕಳೆದ 7-8 ತಿಂಗಳಿನಿಂದ ಒಂದೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ.

Advertisement

ಎಂದಿನಂತೆ ಗುರುವಾರ ಬೆಳಿಗ್ಗೆ ಕಚೇರಿಗೆ ಆಗಮಿಸಿದ ಜಿ.ಡಿ.ಗಂಗಾಧರನ್‌ ತಮ್ಮ ಕುರ್ಚಿಯಲ್ಲಿ ಆಸೀನರಾಗಿದ್ದು, ಕೆಲ ಸಮಯದಲ್ಲೇ ಆಗಮಿಸಿದ ಲಕ್ಷ್ಮೀಪತಿ ಬಿ., ನ್ಯಾಯಾಲಯದ ಆದೇಶ ಪ್ರತಿ ನೀಡಿ ಅಧಿಕಾರ ಹಸ್ತಾಂತರಿಸಲು ಕೋರಿದರು. ಗಂಗಾಧರನ್‌ ಬರುವ ಮಾರ್ಚವರೆಗೂ ತಮ್ಮ ಅವಧಿಯಿದೆ ಎಂದು ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದರಾದರೂ ಸಂಜೆವರೆಗೂ ಇಬ್ಬರೂ ಅಧಿಕಾರಿಗಳು ಒಂದೇ ಕಚೇರಿಯಲ್ಲಿ ಕುಳಿತು ಕಾರ್ಯ ನಿರ್ವಹಿಸಿದರು.

ಶುಕ್ರವಾರ ಅನಾರೋಗ್ಯ ಕಾರಣದಿಂದ ಗಂಗಾಧರನ್‌ ಕರ್ತವ್ಯಕ್ಕೆ ಗೈರಾಗಿದ್ದು, ಲಕ್ಷ್ಮೀಪತಿ ಒಬ್ಬರೆ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀಪತಿ, ಕರ್ನಾಟಕ ಸೇವಾ ನಿಯಮದ ಪ್ರಕಾರ ಸ್ವಯಂ ಅಧಿ
ಕಾರ ಪಡೆದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದರು.

ಕಳೆದ ಜು.20ರಂದೇ ತಾವು ಕೊಪ್ಪಳ ಜಿಲ್ಲೆಯಿಂದ ಹರಿಹರಕ್ಕೆ
ವರ್ಗಾವಣೆಗೊಂಡಿದ್ದು, ಜು. 22ರಂದು ಹರಿಹರದಲ್ಲಿ ಕರ್ತವ್ಯಕ್ಕೆ ಹಾಜರಾದೆ. ಆಗಲೇ ಗಂಗಾಧರನ್‌ರಿಗೆ ಗಂಗಾವತಿಗೆ ವರ್ಗಾವಣೆಯಾಗಿತ್ತು. ಆದರೆ ಅವರು ಪುನಃ ವರ್ಗಾವಣೆ ಆದೇಶ ಮಾರ್ಪಡಿಸಿಕೊಂಡು ಹರಿಹರಕ್ಕೆ ಬಂದರು. ನಾನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯ ಬೆಂಗಳೂರಿನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದೆ. ನ.21 ರಂದು ನಾನು ಹರಿಹರಕ್ಕೆ ಮರು ಆದೇಶ ಮಾಡಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಗಂಗಾಧರನ್‌ ಕಚೇರಿಯಲ್ಲಿ ಇರಲಿಲ್ಲ. ಅನಾರೋಗ್ಯ ಕಾರಣದಿಂದ ರಜೆಯಲ್ಲಿದ್ದಾರೆಂದು ತಿಳಿಯಿತು. ಪುನಃ ಡಿ.10ರಂದು ಗಂಗಾಧರನ್‌ ಆದೇಶ ಮಾರ್ಪಡಿಸಿಕೊಂಡು
ಹರಿಹರಕ್ಕೆ ಆಗಮಿಸಿ ಕರ್ತವ್ಯ ನಿರ್ವಹಿಸತೊಡಗಿದರು. ಪದೇ ಪದೇ ವರ್ಗಾವಣೆಯಿಂದ ಬೇಸತ್ತ ನಾನು ಕೆಎಟಿ ಮೊರೆ ಹೋಗಿದ್ದು, ಕೆಎಟಿ ಜ.14ರ ಆದೇಶದಲ್ಲಿ ಸರ್ಕಾರದ ಡಿ.10ರ ವರ್ಗಾವಣೆ ಆದೇಶ ರದ್ದುಪಡಿಸಿದೆ. ಅದರಂತೆ ನಾನು ಇಂದು ಕರ್ತವ್ಯಕ್ಕೆ ಹಾಜರಾಗಿದ್ದೇನೆ ಎಂದು ವಿವರಿಸಿದರು.

ಸರ್ಕಾರದ ಆದೇಶ ಪಾಲಿಸುತ್ತೇನೆ:
ಗಂಗಾಧರ್‌ ನ್ಯಾಯಾಲಯ ಆದೇಶವು ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ತಲುಪಿದ್ದು, ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಸರ್ಕಾರದ ಆದೇಶದಂತೆ ನಾನು ನಡೆದುಕೊಳ್ಳುತ್ತೇನೆ. ಆರೋಗ್ಯ ಸಮಸ್ಯೆ ಕಾರಣಕ್ಕೆ ರಜೆಯಲ್ಲಿದ್ದೇನೆ.
.ಜಿ.ಡಿ.ಗಂಗಾಧರನ್‌ ತಾಪಂ
ಇಒ, ಹರಿಹರ

Advertisement
Advertisement

Udayavani is now on Telegram. Click here to join our channel and stay updated with the latest news.

Next