Advertisement
ವಿವಿಧ ಅಭಿವೃದ್ಧಿ ಯೋಜನೆಗಳ ಕಡತ ಪರಿಶೀಲನೆಗೆ ಇಲ್ಲಿನ ನಗರಸಭೆ ಹಾಗೂ ತಾಲೂಕು ಕಚೇರಿಗೆ ಗುರುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರಸಭೆ ಮಳಿಗೆಗಳನ್ನು ಪಡೆದಿರುವ ಕೆಲವರು ನಿಯಮ ಉಲ್ಲಂಘಿಸಿರುವ ಆರೋಪ ಬಂದಿದ್ದು, ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲಿದ್ದ ಪೌರಾಯುಕ್ತೆ ಎಸ್.ಲಕ್ಷ್ಮಿ ಅವರಿಗೆ ಸೂಚಿಸಿದರು.
Related Articles
Advertisement
ನಗರ ಹೊರವಲಯದ ಗ್ರಾಮಗಳು ನಗರಕ್ಕೆ ಸೇರ್ಪಡೆಯಾಗಿದ್ದು, ಅಂತಹ ಗ್ರಾಮಗಳ ಸ್ವತ್ತುಗಳನ್ನು ನಗರಸಭೆಯಲ್ಲಿ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಆದಷ್ಟು ಬೇಗ ಎಲ್ಲಾ ಸ್ವತ್ತುಗಳ ಖಾತಾ ಎಕ್ಸ್‌ಟ್ರ್ಯಾಕ್ಟ್ ದೊರೆಯಲಿವೆ ಎಂದರು.
ಅಕ್ರಮ ತಡೆಗೆ ಕ್ರಮ: ಗಣಿ ಮತ್ತು ಭೂವಿಜ್ಞಾನ ಸಚಿವರು ಅಕ್ರಮ ಮರಳುಗಾರಿಕೆ ತಡೆಗೆ ಹೊಸದಾಗಿ ಕಾನೂನು ರೂಪಿಸುವುದಾಗಿ ತಿಳಿಸಿದ್ದಾರೆ. ಈಗಿರುವ ನಿಯಮಾನುಸಾರ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಶಾಸನ ಸಂರಕ್ಷಿಸಿ: ನಗರದ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿನ ಪುರಾತನ ಶಾಸನಗಳನ್ನು ಸಂರಕ್ಷಿಸಿ ವಿವಿಧ ಭಾಷೆಗೆ ತರ್ಜುಮೆ ಮಾಡಿ ಪ್ರವಾಸಿಗರಿಗೆ ಮಾಹಿತಿ ದೊರೆಯುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ರೆಹನ್ ಪಾಷಾಗೆ ಡಿಸಿ ತಿಳಿಸಿದರು.
ಅನುದಾನ ತಾರತಮ್ಯ: ನಗರದ ಅಭಿವೃದ್ಧಿಗೆ ಸರ್ಕಾರದಿಂದ 8 ಕೋ.ರೂ. ಅನುದಾನ ಮಂಜೂರಾಗಿದ್ದು, ಅದನ್ನು ಕೆಲವೇ ವಾರ್ಡ್‌ಗೆ ಹಂಚಿಕೆ ಮಾಡಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೌರಾಯುಕ್ತೆ, ನಗರಸಭೆ ಕ್ರಿಯಾಯೋಜನೆಯಂತೆ ಈ ಅನುದಾನ ಬಿಡುಗಡೆಯಾಗಿದೆ ಎಂದರು.
ಮುಂದೆ ಬಿಡುಗಡೆಯಾಗುವ ಅನುದಾನವನ್ನು ಅತ್ಯಗತ್ಯವಿರುವ ಕಡೆಗೆ ಆದ್ಯತೆ ಅನುಸಾರ ಹಂಚಿಕೆ ಮಾಡುವಂತೆ ಡಿಸಿ ಸೂಚಿಸಿದರು.
ನಗರಕ್ಕೆ ಕುಡಿಯುವ ನೀರು ಪೂರೈಸುವ ಜಾಕ್‌ವೆಲ್ ಘಟಕಕ್ಕೆ 24 ಗಂಟೆ ವಿದ್ಯುತ್ ಪೂರೈಸುವ ಎಕ್ಸ್‌ಪ್ರೆಸ್ ಲೈನ್ ಯೋಜನೆ ಪ್ರಗತಿಯಲ್ಲಿದೆ. ವಿದ್ಯುತ್ ಪೂರೈಸುವ ಹೆಸ್ಕಾಂಗೆ 40 ಲಕ್ಷ ರೂ. ಪಾವತಿಸಬೇಕಿದ್ದು, ಸರ್ಕಾರಕ್ಕೆ ವರದಿ ನೀಡಲಾಗಿದೆ. ಅನುದಾನ ಬಂದ ಕೂಡಲೆ ವಿದ್ಯುತ್ ಸಂಪರ್ಕ ಪಡೆಯಲಾಗುವುದು ಎಂದು ಪೌರಾಯುಕ್ತರು ತಿಳಿಸಿದರು.