Advertisement
ತಾಲೂಕಿನ ಪಾಮನಕಲ್ಲೂರು ಹೋಬಳಿ ಕೇಂದ್ರದಲ್ಲಿ ಕಳೆದ 72 ದಿನಗಳಿಂದ ರೈತರ ಅನಿರ್ದಿಷ್ಠ ಧರಣಿ ನಡೆದಿದ್ದು, ನಾರಾಯಣಪುರ ಬಲದಂಡೆ ಮುಖ್ಯಕಾಲುವೆಗೆ ಪ್ರತ್ಯೇಕ 5ಎ ಶಾಖೆ ಕಾಲುವೆ ನಿರ್ಮಾಣ ಮಾಡಿ ಅಲ್ಲಿಂದ ನೀರು ಹರಿಸಬೇಕು ಎನ್ನುವುದು ಇವರ ಬೇಡಿಕೆಯಾಗಿದೆ. ಇದು ತಾಂತ್ರಿಕವಾಗಿ
ಅಸಾಧ್ಯ, ನೀರಿನ ಲಭ್ಯತೆ ಇಲ್ಲದೇ ಇರುವುದು, ಟನಲ್ ನಿರ್ಮಾಣ, ಭೂಸ್ವಾಧಿಧೀನ ಪ್ರಕ್ರಿಯೆಗಳು ಸೇರಿ ಹಲವು ತಾಂತ್ರಿಕ ಸಮಸ್ಯೆ ಇದೆ ಎನ್ನುವ ಅಂಶವನ್ನು ಸರಕಾರ ಪ್ರಸ್ತಾಪಿಸಿ ಈ ಯೋಜನೆ ಜಾರಿಗೆ ನಿರಾಕರಿಸಿದೆ.
ಗುತ್ತಿಗೆ ನೀಡಲು ಮುಂದಾಗಿದೆ. 2.80 ಕೋಟಿ ರೂ.: ನಂದವಾಡಗಿ ಏತ ನೀರಾವರಿಯಲ್ಲಿ ಮಸ್ಕಿ ಕ್ಷೇತ್ರದ 23 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ಹನಿ ನೀರಾವರಿ ಮೂಲಕ ನೀರು ಒದಗಿಸುವುದಕ್ಕೆ ಈ ಹಿಂದೆ ಯೋಜನೆ ರೂಪಿಸಲಾಗಿತ್ತು. ಇದಕ್ಕಾಗಿ ಹಂಚಿಕೆಯಾದ 2.25 ಟಿಎಂಸಿ ಅಡಿ ನೀರಿನ ಬಳಕೆಗೆ 1200 ಕೋಟಿ ರೂ.
ಹಣವನ್ನು ಕಾಯ್ದಿರಿಸಲಾಗಿತ್ತು. ಆದರೆ ರೈತರ ಬೇಡಿಕೆ ಹರಿ ನೀರಾವರಿ ಒದಗಿಸಬೇಕು ಎನ್ನುವುದಾಗಿದ್ದರಿಂದ ಹಳೆಯದನ್ನು ಕೈ ಬಿಟ್ಟು, ಈಗ ಪುನಃ ಡಿಪಿಆರ್ (ಡಿಟೈಲ್ ಪ್ರಾಜೆಕ್ಟ್ ರಿಪೋರ್ಟ್) ತಯಾರಿಕೆ ಮುಂದಾಗಿದ್ದಾರೆ.
Related Articles
Advertisement
ಹೆಸರು ಬದಲಾವಣೆನಂದವಾಡಗಿ ಏತ ನೀರಾವರಿ ಎರಡನೇ ಹಂತದ ಮೂಲಕ ಈ ಯೋಜನೆ ಜಾರಿ ಮಾಡಬೇಕಿತ್ತು. ಆದರೆ ರೈತರು ನಂದವಾಡಗಿ ನೀರೇ ಬೇಡ ಎಂದು ಪಟ್ಟು ಹಿಡಿದಿದ್ದರಿಂದ ಈಗ ಈ ಯೋಜನೆ ಹೆಸರನ್ನು ಬದಲಾಯಿಸಲಾಗಿದೆ. ವಟಗಲ್ ಬಸವೇಶ್ವರ ಏತ ನೀರಾವರಿ ಎಂದು ಮರು ನಾಮಕರಣ ಮಾಡಿ ಅಂತಿಮ ವರದಿ ಬಂದಿಲ್ಲ
5ಎ ಕಾಲುವೆ ಜಾರಿ ಸಾಧ್ಯ-ಅಸಾಧ್ಯತೆ ಕುರಿತು ನಿರ್ಧಾರ ಮಾಡಲು ತಾಂತ್ರಿಕ ತಜ್ಞರ ಸಮಿತಿ ಯೊಂದನ್ನು ಸರಕಾರ ನೇಮಿಸಿದೆ. ಕ್ಯಾ.ಆರ್. ದೊಡ್ಡಿಹಾಳ, ನಿವೃತ್ತ ಎಂಜಿನಿಯರ್ ಬಸವರಾಜ ಸೇರಿ ಇಲ್ಲಿನ ರೈತರು ಇರುವ ಸಮಿತಿ ರಚಿಸ ಲಾಗಿದೆ. ಪ್ರಾಥಮಿಕ ಸರ್ವೇ ನಡೆಸಿ ಡಿಪಿಆರ್ ತಯಾರಿಸಲು ನೆಕ್ಟ್ ಪ್ರವೈಟ್ ಲಿ. ಕಂಪನಿಗೆ ಗುತ್ತಿಗೆ ಸಹ ನೀಡಲಾಗಿದೆ. ಆದರೆ ಈ 2 ಸಮಿತಿಯಿಂದ ವರದಿ ಬರುವ ಮುನ್ನವೇ ಟೆಂಡರ್ ಕರೆದಿರುವುದು ಅಚ್ಚರಿ ಮೂಡಿಸಿದೆ. ಮಸ್ಕಿ ಕ್ಷೇತ್ರದ ಹಳ್ಳಿಗಳಿಗೆ 5ಎ ಕಾಲುವೆ ಮೂಲಕ ನೀರು ಕೊಡಲು ಅಸಾಧ್ಯ. ಹೀಗಾಗಿ ರೈತರ ಬೇಡಿಕೆಯಂತೆ ವಟಗಲ್ ಬಸವೇಶ್ವರ ಏತ ನೀರಾವರಿ ಮೂಲಕ ಹರಿ ನೀರಾವರಿ ವ್ಯವಸ್ಥೆ ಕೊಡಲಾಗುತ್ತದೆ. ಇದಕ್ಕಾಗಿ ಡಿಪಿಆರ್ ತಯಾರಿಸಲು ಟೆಂಡರ್ ಕರೆಯಲಾಗಿದೆ. ರಂಗರಾಮ್, ಸಿಇ ಕೆಬಿಜಿಎನ್‌ಎಲ್, ಎನ್‌ಎಲ್‌ಬಿಸಿ ರೋಡಲಬಂಡಾ *ಮಲ್ಲಿಕಾರ್ಜುನ ಚಿಲ್ಕರಾಗಿ