ಬೆಳಗಾವಿ: ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ಕಾರು ಅಡ್ಡಗಟ್ಟಿ ಬಂದೂಕು ತೋರಿಸಿ ದರೋಡೆ ಮಾಡಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ದರೋಡೆಯಾಗಿದ್ದು 75 ಲಕ್ಷ ರೂ. ಆದರೆ ಪತ್ತೆ ಆಗಿರುವುದು 1.01 ಕೋಟಿ ರೂ. ಎಂಬುದೇ ವಿಶೇಷ. ನ. 15ರಂದು ಕೊಲ್ಲಾಪುರದಿಂದ ಬರುತ್ತಿದ್ದ ಕಾರನ್ನು ಹರಗಾಪುರ ಬಳಿ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು 75 ಲಕ್ಷ ರೂ. ದರೋಡೆ ಮಾಡಿರುವ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
ದೂರು ಕೊಟ್ಟವರ ಮೇಲೆಯೇ ಸಂಶಯ ಬಂದಿದೆ ಎಂದು ಎಸ್ ಪಿ ಭೀಮಾಶಂಕರ ಗುಳೇದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.ಮಹಾರಾಷ್ಟ್ರದ ಸೂರಜ್ ಹೊನಮಾನೆ ಎಂಬುವರು ದೂರು ನೀಡಿದ್ದರು. ಆದರೆ ನೇರ್ಲಿ ಬಳಿ ಕಾರು ಪತ್ತೆಯಾಗಿದ್ದು, ಕಾರು ಚಾಲಕ ಆರೀಫ್ ಶೇಖ್, ಅದರಲ್ಲಿ ಪ್ರಯಾಣಿಸುತ್ತಿದ್ದ ಸೂರಜ್ ಹಾಗೂ ಅಜಯ ಸರಗಾರ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. 75 ಲಕ್ಷ ರೂ. ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಆದರೆ ಕಾರಿನಲ್ಲಿ 1.01 ಕೋಟಿ ರೂ. ಸಿಕ್ಕಿದೆ ಎಂದು ಹೇಳಿದರು.
Related Articles
ಬೇರೆ ಬೇರೆ ಕಡೆಗೆ ಹಾಕಿದ್ದರು. ಇದರ ಹಿಂದೆ ಇನ್ನೊಂದು ಕಾರು, ಕದ್ದ ಕಾರು ಎರಡೂ ಹುಕ್ಕೇರಿ ಕಡೆ ಹೋಗಿರುತ್ತವೆ. ಘಟನೆ ಮಾರನೇ ದಿನ ಕದ್ದ ಕಾರು ಪತ್ತೆಯಾದಾಗ ಇದರಲ್ಲಿ ಒಂದು ಕೋಟಿ ರೂ. ಸಿಕ್ಕಿದೆ ಎಂದರು.
Advertisementಮಹಾರಾಷ್ಟ್ರದ ಸಾಂಗಲಿಯ ಭರತ್ ಮಾರಗುಡೆ ಎಂಬ ವ್ಯಾಪಾರಿ ಕೇರಳದಲ್ಲಿ ಹಳೆಯ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಾರೆ. ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹಳೆಯ ಚಿನ್ನ ಕಳುಹಿಸುತ್ತಿದ್ದರು. ಇಲ್ಲಿಂದ ಕೇರಳಕ್ಕೆ ಹಣ ಹೋಗುತ್ತಿತ್ತು. ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೇರಳ, ಮಹಾರಾಷ್ಟ್ರ ಹಾಗೂ ಸ್ಥಳೀಯ ಮಟ್ಟದಲ್ಲಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಗುಳೇದ ಮಾಹಿತಿ ನೀಡಿದರು.