Advertisement
ಈಗಿನ ಜಮಾನದಲ್ಲಿ ಎಲ್ಲರೂ ಐಟಿ- ಬಿಟಿ ಕೆಲಸವನ್ನೇ ಬಯಸುತ್ತಾರೆ. ಎ.ಸಿ. ರೂಮ್‌ನ ಒಳಗಡೆ ಕುಳಿತು ಕೆಲಸ ಮಾಡುವ ಕನಸನ್ನು ಕಾಣುತ್ತಾರೆ. ಆದರೆ ಕೆಲವು ವಿದ್ಯಾರ್ಥಿಗಳಲ್ಲಿ ಇಂತಹ ಆಲೋಚನೆಯ ಬದಲು ಹಾರ್ಡ್‌ವೇರ್‌ನ ಪ್ರತಿಯೊಂದು ವಿಷಯವೂ ಕಲಿಯದೇನೆ ತಿಳಿದಿರುತ್ತಾರೆ ಮತ್ತು ಕೆಲವರು ತಿಳಿದುಕೊಂಡಿರುತ್ತಾರೆ. ಅಂಥವರಿಗೆ ಈ ಕೆಲಸಗಳನ್ನು ಮಾಡಬೇಕು ಎನ್ನುವ ಹಂಬಲಗಳಿರುತ್ತದೆ. ಒಳ್ಳೆಯ ಅವಕಾಶಗಳು ಇವೆ.
ಹಾರ್ಡ್‌ವೇರ್ ಬಗ್ಗೆ ಕಲಿಯಲು ಐ.ಟಿ.ಐ. ಅಥವಾ ಡಿಪ್ಲೊಮಾವನ್ನೇ ಮಾಡಬೇಕೆಂದಿಲ್ಲ. ನಮ್ಮ ವಿದ್ಯಾಭ್ಯಾಸದ ಜತೆಗೆ 3 ತಿಂಗಳ ಅಥವಾ 6 ತಿಂಗಳ ಕೋರ್ಸ್‌ಗಳನ್ನು ಪಡೆದರೆ ಸಾಕು. ಸಣ್ಣ ಮಟ್ಟಿನ ಹಾರ್ಡ್‌ವೇರ್ ಕೆಲಸಗಳನ್ನು ಮಾಡಬಹುದು. ಎನ್‌ಜಿಒಗಳು ಉಚಿತವಾಗಿ ಇಂತಹ ತರಬೇತಿಗಳನ್ನು ಆಗಾಗ ನೀಡುತ್ತವೆ. ಸರಕಾರವೂ ಇಂತಹ ತರಬೇತಿ ಕಾರ್ಯಕ್ರಮವನ್ನು ಜಿಲ್ಲೆಗೊಂದರಂತೆ ಮಾಡುತ್ತವೆ. ಮಾತ್ರವಲ್ಲದೆ ಅಂತರ್ಜಾಲವೂ ಈಗ ಈ ಎಲ್ಲ ಕಲಿಕೆಗೆ ಒಂದು ಒಳ್ಳೆಯ ಅವಕಾಶವನ್ನು ನೀಡುತ್ತಿರುವುದರಿಂದ ಇದರ ಮುಖಾಂತರವೂ ಕಲಿಯಬಹುದು.
Related Articles
ಇಂತಹ ಕಡಿಮೆ ಅವಧಿಯ ಕೋರ್ಸ್‌ಗಳನ್ನು ಮಾಡಿ ಬಂದವರಿಗೆ ಎ.ಸಿ. (ಏರ್ ಕಂಡೀಶನ್) ಮೊಬೈಲ್, ವಾಚ್, ಕಂಪ್ಯೂಟರ್ ಹಾರ್ಡ್‌ವೇರ್‌ಗಳ ರಿಪೇರಿ ಮಾಡಿ ಸಂಪಾದಿಸಬಹುದು. ಮಾತ್ರವಲ್ಲದೆ ಇದೊಂದು ಪಾರ್ಟ್‌ಟೈಮ್ ಜಾಬ್ ಕೂಡ ಹೌದು. ಸ್ವಂತ ಅಂಗಡಿಯನ್ನು ತೆರೆದು ವ್ಯವಹಾರ ನಡೆಸಬಹುದು. ಬೇರೆಯವರ ಅಂಗಡಿಯಲ್ಲಿ ನಾವು ಕೆಲಸ ಮಾಡಬಹುದು. ಈಗಿನ ಹೊಸತೆಂಬಂತೆ ಮನೆ ಮನೆಗೆ ತೆರಳಿ ಇವುಗಳ ರಿಪೇರಿಯನ್ನು ಮಾಡಬಹುದು. ಒಟ್ಟಿನಲ್ಲಿ ಈಗ ಯಾವುದೇ ವಿಷಯವನ್ನು ಕಲಿತರೂ ಒಳ್ಳೆಯದೆ. ಏಕೆಂದರೆ ಎಲ್ಲದಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಹಾಗಾಗಿ ಕಲಿಯುವ ಯುವ ಜನತೆ ತಮ್ಮ ಆಸಕ್ತಿಯ ಮೇಲೆ ಮುಂದೆ ಬಂದು ಜೀವನ ರೂಪಿಸಬಹುದು.
Advertisement
ಭರತ್ ರಾಜ್ ಕರ್ತಡ್ಕ