ಹೊಸದಿಲ್ಲಿ: ಗುಜರಾತ್ ಚುನಾವಣೆಯಲ್ಲಿ ಅತ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಅಭ್ಯರ್ಥಿಗಳಲ್ಲಿ ಒಬ್ಬರಾದ ಬಿಜೆಪಿ ನಾಯಕ ಹಾರ್ದಿಕ್ ಪಟೇಲ್ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ವಿರಾಮಗಂ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು, ಕಾಂಗ್ರೆಸ್ ನ ಲಖಾಭಾಯಿ ಭಾರವಾಡ್ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ.
2015 ರಲ್ಲಿ ಪಾಟಿದಾರ್ ಆಂದೋಲನದಲ್ಲಿ ಹಾರ್ದಿಕ್ ಪಟೇಲ್ ಮುನ್ನೆಲೆಗೆ ಬಂದರು. ಅವರು ಚಳವಳಿಯ ಭಾಗವಾಗಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ (PAAS) ನೇತೃತ್ವ ವಹಿಸಿದ್ದರು. ಗುಜರಾತ್ ನ ಸಮುದಾಯ ಸಾಮಾಜಿಕ ಗುಂಪು ಸರ್ದಾರ್ ಪಟೇಲ್ ಗ್ರೂಪ್ (SPG) ನ ಸದಸ್ಯರೂ ಆಗಿದ್ದರು.
ಇದನ್ನೂ ಓದಿ:ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ನಿವೃತ್ತಿ ಭಾಗ್ಯವೇ? ಗುಜರಾತ್ ಫಲಿತಾಂಶ ಹುಟ್ಟು ಹಾಕಿದೆ ಬಹುದೊಡ್ಡ ಚರ್ಚೆ
ಹಾರ್ದಿಕ್ ಪಟೇಲ್ ಮೊದಲು ಕಾಂಗ್ರೆಸ್ ಸೇರಿದ್ದರು. ಆದರೆ ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ಬಳಿಕ ಅವರು ಬಿಜೆಪಿಗೆ ಸೇರಿದ್ದರು. ಬಿಜೆಪಿಯ ಕಡು ವಿರೋಧಿಯಾಗಿದ್ದ ಹಾರ್ದಿಕ್ ಪಟೇಲ್ ಅವರು ಕಮಲ ಪಾಳಯ ಸೇರಿದ್ದು ಹಲವರು ಹುಬ್ಬೇರಿಸುವಂತೆ ಮಾಡಿತ್ತು.
Related Articles
ಅಹಮದಾಬಾದ್ ನ ವಿರಾಮಗಂ ಮಂಡಲ್ ಮತ್ತು ಡೆಟ್ರೋಜ್ ತಾಲೂಕುಗಳನ್ನು ಒಳಗೊಂಡಿರುವ ವಿರಾಮಗಂ ಕ್ಷೇತ್ರವು 2012 ರಿಂದ ಕಾಂಗ್ರೆಸ್ ಪಕ್ಷದಲ್ಲಿದೆ. ಕೊನೆಯ ಬಾರಿಗೆ 2007 ರ ಚುನಾವಣೆಯಲ್ಲಿ ಬಿಜೆಪಿ ವಿರಾಮಗಂ ಕ್ಷೇತ್ರವನ್ನು ಗೆದ್ದುಕೊಂಡಿತ್ತು.