Advertisement

ಮನೆಗೂ ಹೇಳದೆ ನಟಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ್ರಾ ಹಾರ್ದಿಕ್: ಪಾಂಡ್ಯಾ ತಂದೆ ಹೇಳಿದ್ದೇನು

10:02 AM Jan 06, 2020 | keerthan |

ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದರೆ ಈಗ ಬಯಲಾಗಿರುವ ಸಂಗತಿಯೆಂದರೆ ಹಾರ್ದಿಕ್ ಶಾಕ್ ನೀಡಿರುವುದು ಅಭಿಮಾನಿಗಳಿಗಷ್ಟೇ ಅಲ್ಲ ಸ್ವತಃ ಹಾರ್ದಿಕ್ ಕುಟುಂಬಿಕರಿಗೂ ಸಹ.

Advertisement

ಹೌದು, ಈ ಬಗ್ಗೆ ಸ್ವತಃ ಹಾರ್ದಿಕ್ ತಂದೆ ಹಿಮಾಂಶು ಹೇಳಿಕೊಂಡಿದ್ದು, ನತಾಶಾ ನಮಗೆ ಗೊತ್ತು. ಹಲವಾರು ಬಾರಿ ಅವಳನ್ನು ನಾವು ಭೇಟಿಯಾಗಿದ್ದೇವೆ. ಅವರು ರಜಾ ಕಳೆಯಲು ದುಬೈಗೆ ಹೊಗುತ್ತಾರೆಂದು ತಿಳಿದಿತ್ತು. ಆದರೆ ಅವರ ನಿಶ್ಚಿತಾರ್ಥದ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಬಾಂಬೆ ಟೈಮ್ಸ್ ಪತ್ರಿಕೆಯ ಜೊತೆಗೆ ಮಾತನಾಡುತ್ತಾ ಅವರು ಈ ಮಾತುಗಳನ್ನು ಹೇಳಿದರು.

ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಹೊಸ ವರ್ಷದ ದಿನದಂದು ನಟಿ, ರೂಪದರ್ಶಿ ನತಾಶಾ ಸ್ಟ್ಯಾಂಕೋವಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next