Advertisement

ಪಾಂಡ್ಯ ಅವಮಾನಿಸಿ ಟ್ವೀಟರ್‌ನಲ್ಲಿ ಬೈಸಿಕೊಂಡ ಪಾಕ್‌ ಪತ್ರಕರ್ತೆ

10:08 AM Sep 21, 2017 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಯುವ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯರನ್ನು ಇಂಗ್ಲೆಂಡ್‌ನ‌ ಖ್ಯಾತ ಕ್ರಿಕೆಟಿಗ ಬೆನ್‌ಸ್ಟೋಕ್ಸ್‌ಗೆ ಹೋಲಿಸಿದ್ದರು. ಇದಕ್ಕೆ ಸ್ವತಃ ಪಾಂಡ್ಯ ಕೊಹ್ಲಿಗೆ ಧನ್ಯವಾದ ಹೇಳಿದ್ದರು. ಮಾಧ್ಯಮಗಳು ಪ್ರಚಾರ ಮಾಡಿದ್ದವು. 

Advertisement

ಆದರೆ ಪಾಕಿಸ್ಥಾನದ ಮಹಿಳಾ ಪತ್ರಕರ್ತೆ ಫ‌ಜೀಲಾ ಸಾಬಾ ಟ್ವೀಟರ್‌ನಲ್ಲಿ ಕೊಹ್ಲಿ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. ಪಾಂಡ್ಯ ಓರ್ವ ಆಲ್‌ರೌಂಡರ್‌ ಅನ್ನುವುದರಲ್ಲಿ ಅನುಮಾನವಿಲ್ಲ. ಹಾಗಂತ ಭಾರತೀಯ  ಮಾಧ್ಯಮಗಳು ಬೆನ್‌ಸ್ಟೋಕ್ಸ್‌ಗೆ ಹೋಲಿಕೆ ಮಾಡುತ್ತಿರುವುದು ನ್ಯಾಯಸಮ್ಮತವಾಗಿಲ್ಲ’ ಎಂದಿದ್ದಾರೆ. 

ಅವರ ಟ್ವೀಟ್‌ ಪ್ರಕಟನೆಯಾದ ಕೆಲವೇ ನಿಮಿಷಗಳಲ್ಲಿ ಭಾರತೀಯ ಅಭಿಮಾನಿಗಳು ಪಾಕ್‌ ಪತ್ರಕರ್ತೆಯನ್ನು ಮನಬಂದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಟ್ವೀಟ್‌ ಮೂಲಕ ಜನಪ್ರಿಯರಾಗಲು ನೀವು ಪ್ರಯತ್ನಿಸುತ್ತಿದ್ದೀರಿ. ಒಳ್ಳೆ ಪ್ರಯತ್ನ ಎಂದು ಓರ್ವ ಅಭಿಮಾನಿ ಕುಟುಕಿದ್ದಾನೆ.  ಪಾಕ್‌ನಲ್ಲಿ ಪಾಂಡ್ಯರಂತೆ ಒಬ್ಬ ಕ್ರಿಕೆಟಿಗನನ್ನು ತೋರಿಸಿ ಸಾಕು. ಮೊದಲು ನಿಮ್ಮ ದೇಶದ ಆಟಗಾರನನ್ನು ನೋಡಿಕೊಳ್ಳಿ ಎಂದು ಮತ್ತೂಬ್ಬರು. ಹೀಗೆ ಸಾವಿರಾರು ಸಂಖ್ಯೆ ಯಲ್ಲಿ ಅಭಿಮಾನಿಗಳು ಟ್ವೀಟ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. 

ವಾರಗಳ ಹಿಂದೆ ಆಸೀಸ್‌ ಪತ್ರಕರ್ತನೊಬ್ಬ ಕೊಹ್ಲಿಯನ್ನು ಕಸಗುಡಿಸುವ ವ್ಯಕ್ತಿ ಎಂದು ಟೀಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದನು.

Advertisement

Udayavani is now on Telegram. Click here to join our channel and stay updated with the latest news.

Next