Advertisement

ಮಾದಕ ವಸ್ತುಗಳ ಮಾರಾಟ- ಸೇವನೆ ವಿರುದ್ಧ ಕಠಿನ ಕಾನೂನು ಕ್ರಮ: ಸಂದೀಪ್‌

12:58 AM Jun 27, 2019 | mahesh |

ಪುರಭವನ: ಮಾದಕ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ಸೇವಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆ ಸನ್ನದ್ಧವಾಗಿದೆ. ಮಾರಾಟಗಾರರು, ಡೀಲರ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್ ಹೇಳಿದ್ದಾರೆ.

Advertisement

ನಗರ ಪೊಲೀಸ್‌ ಇಲಾಖೆ ಆಶ್ರಯದಲ್ಲಿ ಪುರಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಹಾಗೂ ಕಳ್ಳಸಾಗಾಟ ವಿರೋಧಿ ದಿನವನ್ನು ಅವರು ಬುಧವಾರ ಉದ್ಘಾಟಿಸಿದರು.

ಕೆಲವೇ ನಿಮಿಷಗಳ ಖುಷಿಗೋಸ್ಕರ ಇಡೀ ಬದುಕನ್ನು ಕಸಿಯುವ ಮಾದಕ ದ್ರವ್ಯ ಸೇವನೆಯ ಚಟಕ್ಕೆ ಯುವ ಸಮುದಾಯ ಬಲಿಯಾಗುತ್ತಿರುವುದು ದುರದೃಷ್ಟಕರ. ಈ ಚಟಕ್ಕೆ ಬಿದ್ದು ಅಪರಾಧಿ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಷಾದನೀಯ. ಯುವಕರನ್ನು ತಪ್ಪು ದಾರಿಗೆಳೆಯುತ್ತಿರುವ ಮಾದಕ ದ್ರವ್ಯಗಳ ಮಾರಾಟಗಾರರು, ಡೀಲರ್‌ಗಳು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲೆ ಪೊಲೀಸ್‌ ಇಲಾಖೆ ನಿಗಾ ಇಡುತ್ತಿದೆ. ಅಂತಹವರ ಮೇಲೆ ಕಠಿನ ಕಾನೂನು ಕ್ರಮ ಕೈಗೊಳ್ಳಲು ಇಲಾಖೆ ಸದಾ ಸನ್ನದ್ಧವಾಗಿದೆ ಎಂದರು.

ಜಾಗೃತಿ ಅಗತ್ಯ
ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ವೈದ್ಯಕೀಯ ಕಾಲೇಜಿನ ಫೂರೆನ್ಸಿಕ್‌ ವಿಭಾಗ ಮುಖ್ಯಸ್ಥ ಡಾ| ಮಹಾಬಲ ಶೆಟ್ಟಿ ಮಾತನಾಡಿ, ಕಾಶ್ಮೀರ, ಪಂಜಾಬ್‌ ಮುಂತಾದೆಡೆಗಳಲ್ಲಿ ನಾರ್ಕೋ ಟೆರರಿಸಂ ವ್ಯಾಪಕವಾಗಿದೆ. ಶ್ರೀನಗರವೊಂದರಲ್ಲೇ 80 ಸಾವಿರ ಮಂದಿ ಮಾದಕ ವ್ಯಸನಕ್ಕೆ ಒಳಗಾಗಿದ್ದು, ಈ ಪೈಕಿ 15 ಸಾವಿರ ಯುವತಿಯರೂ ಸೇರಿದ್ದಾರೆ ಎಂಬುದಾಗಿ ಅಲ್ಲಿನ ಪ್ರಖ್ಯಾತ ಮನಃಶಾಸ್ತ್ರಜ್ಞರೊಬ್ಬರು ಹೇಳುತ್ತಾರೆ. ಕೇರಳದಲ್ಲಿ ಹೆಚ್ಚು ಆತ್ಮಹತ್ಯೆಗಳು ಮಾದಕ ದ್ರವ್ಯ ವ್ಯಸನದ ಪರಿಣಾಮವಾಗಿಯೇ ನಡೆಯು ತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಲಿಂಕ್‌ ಪುನರ್ವಸತಿ ಕೇಂದ್ರದ ಮುಖ್ಯಸ್ಥೆ ಲಿಡಿಯಾ ಲೋಬೋ, ಸಹ್ಯಾದ್ರಿ ಎಂಜಿನಿಯರಿಂಗ್‌ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆಯ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ಪ್ರಾಧ್ಯಾಪಕ ಅನಂತ ಪ್ರಭು ಜಿ. ಉಪಸ್ಥಿತರಿದ್ದರು. ಡಿಸಿಪಿ ಹನುಮಂತರಾಯ ಸ್ವಾಗತಿಸಿ ದರು. ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಭಾಸ್ಕರ್‌ ಒಕ್ಕಲಿಗ ವಂದಿಸಿದರು. ಬಂದರು ಸಂಚಾರ ಠಾಣೆಯ ನಿರೀಕ್ಷಕ ಗುರುದತ್‌ ಕಾಮತ್‌ ನಿರೂಪಿಸಿದರು.

Advertisement

ಮನಃಶಾಸ್ತ್ರಜ್ಞೆ ಕ್ಯಾರೋಲಿನ್‌ ಸಿ. ಡಿ’ಸೋಜಾ ಮಾತನಾಡಿ, ಭಾರತದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಶೇ. 50ರಷ್ಟು ಯುವಕರು ಮಾದಕ ದ್ರವ್ಯ ವ್ಯಸನಕ್ಕೊಳಗಾದವರೇ ಆಗಿದ್ದಾರೆ. ಇದೊಂದು ಮಾನಸಿಕ ಕಾಯಿಲೆಯಾಗಿದ್ದು, ಆರಂಭಿಕ ಹಂತದಲ್ಲೇ ಇಂತಹವರನ್ನು ಗುರುತಿಸಿ ಚಿಕಿತ್ಸೆ ನೀಡಬೇಕಾದ ಅವಶ್ಯವಿದೆ. ಮಾದಕ ದ್ರವ್ಯ ವ್ಯಸನದಿಂದ ವ್ಯಕ್ತಿಯನ್ನು ಮುಕ್ತಗೊಳಿಸುವಲ್ಲಿ ಪೊಲೀಸ್‌, ವೈದ್ಯರಷ್ಟೇ ತೊಡಗಿಸಿಕೊಳ್ಳದೆ, ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಆರಂಭದಲ್ಲೇ ಗುರುತಿಸಿ

Udayavani is now on Telegram. Click here to join our channel and stay updated with the latest news.

Next