Advertisement

ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನವನ್ನು ಹಿಂಪಡೆಯುವಂತೆ ನಾನೇ ಕೇಳಿಕೊಂಡಿದ್ದೆ: ಹರ್ಭಜನ್

12:23 PM Jul 19, 2020 | keerthan |

ಹೊಸದಿಲ್ಲಿ: ಕ್ರೀಡಾ ಲೋಕದ ಪ್ರತಿಷ್ಠಿತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶೀಫಾರಸ್ಸು ಮಾಡಿದ್ದ ನನ್ನ ಹೆಸರನ್ನು ಹಿಂಪಡೆಯುವಂತೆ ನಾನೇ ಸ್ವತಃ ಪಂಜಾಬ್ ಸರ್ಕಾರದ ಬಳಿ ಕೇಳಿಕೊಂಡಿದ್ದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಈ ಅತ್ಯುನ್ನತ ಪ್ರಶಸ್ತಿ ಪಡೆಯಲು ನಾನ ಅರ್ಹನಲ್ಲ. ಕಳೆದ ಮುರು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿನ ಸಾಧನೆಯನ್ನು ಈ ಪ್ರಶಸ್ತಿಗರ ಪರಿಗಣಿಸಲಾಗುತ್ತದೆ. ಹಾಗಾಗಿ ನಾನು ಈ ಪ್ರಶಸ್ತಿಗೆ ಅರ್ಹನಲ್ಲ. ಈ ಕಾರಣದಿಂದ ನಾನು ಪಂಜಾಬ್ ಸರಕಾರಕ್ಕೆ ಸತತ ಕರೆಗಳನ್ನು ಮಾಡಿ ನನ್ನ ಹೆಸರನ್ನು ಪರಿಗಣಿಸದಂತೆ ಕೇಳಿಕೊಂಡಿದ್ದೇನೆ ಎಂದು ಭಜ್ಜಿ ಹೇಳಿದ್ದಾರೆ.

ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದ ನನ್ನ ಹೆಸರನ್ನು ಹಿಂಪಡೆಯುವಲ್ಲಿ ಪಂಜಾಬ್ ಸರಕಾರದ ತಪ್ಪಿಲ್ಲ. ಅವರು ನನ್ನ ಹೆಸರನ್ನು ಹಿಂಪಡೆಯುವ ಹಕ್ಕನ್ನು ಹೊಂದಿದ್ದಾರೆ ಎಂದು ಭಜ್ಜಿ ಸ್ಪಷ್ಟಪಡಿಸಿದ್ದಾರೆ.

ಹರ್ಭಜನ್ ಸಿಂಗ್ 2007ರಲ್ಲಿ ಟಿ-20 ವಿಶ್ವಕಪ್ ಹಾಗೂ 2011ರಲ್ಲಿ ವಿಶ್ವಕಪ್ ಗೆದಿದ ತಂಡದ ಭಾಗವಾಗಗಿದ್ದರು. ಅನಿಲ್ ಕುಂಬ್ಳೆ (619) ಕಪಿಲ್ ದೇವ್ (434) ಬಿಟ್ಟರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದುಕೊಂಡ ಟೀಂ ಇಂಡಿಯಾದ ಮೂರನೇ ಆಟಗಾರ ಹರ್ಭಜನ್ ಸಿಂಗ್ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next