Advertisement

ಪರವಾನಗಿ ನೀಡುವಾಗ ಅಧಿಕಾರಿಗಳ ಕಿರುಕುಳ ಸಲ್ಲದು

12:09 PM Oct 20, 2021 | Team Udayavani |

ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕ್ಲರ್ಕ್‌ನಿಂದ ಹಿಡಿದು ಅಧಿಕಾರಿಗಳವರೆಗೆ ಉದ್ಯಮಿಗಳನ್ನು ಕಳ್ಳರಂತೆ ನೋಡು ತ್ತಿದ್ದು, ವಿದ್ಯುತ್‌, ನೀರು ಸಂಪರ್ಕ ಮತ್ತು ಪರವಾನಗಿ ನೀಡುವಲ್ಲಿ ಅನಗತ್ಯ ವಿಳಂಬ ಮಾಡಿ ಕಿರುಕುಳ ನೀಡುತ್ತಿದ್ದಾರೆ.

Advertisement

ಈ ಧೋರಣೆಯನ್ನು ಕೈಬಿಟ್ಟು ಉದ್ಯಮಸ್ನೇಹಿಯಾಗಿ ನಡೆದುಕೊಳ್ಳಬೇಕಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಗಳವಾರ ಕೆಂಪೇಗೌಡ ರಸ್ತೆಯಲ್ಲಿರುವ ಎಫ್ಕೆಸಿಸಿಐ ಸಭಾಂಗಣದಲ್ಲಿ “ಎಫ್ಕೆಸಿಸಿಐ- ಎಂಎಸ್‌ಎಂಇ ಇನ್ನೋವೇಷನ್‌ ಎಕ್ಸಲೆನ್ಸ್‌ ಅವಾರ್ಡ್‌-2021′ ಪ್ರದಾನ ಮಾಡಿ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರು ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿ ದ್ದಾರೆ. ಮಾತ್ರವಲ್ಲ, ಅದನ್ನು ಆಂದೋಲ ನದ ರೀತಿಯಲ್ಲಿ ದೊಡ್ಡ ಜಾಗೃತಿ ಮೂಡಿಸುತ್ತಿದ್ದಾರೆ. ರಕ್ಷಣಾ ಕ್ಷೇತ್ರ ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ವದೇಶಿ ಕಲ್ಪನೆ ಯನ್ನು ಬಿತ್ತುತ್ತಿದ್ದಾರೆ.

ಇದನ್ನೂ ಓದಿ;- ಕನ್ನಡ ಚಿತ್ರಗಳ ಪೈರಸಿ ತಡೆಗೆ ಕ್ರಮ

ಇದರಿಂದ ನವೋ ದ್ಯಮಗಳಿಗೂ ಪ್ರೋತ್ಸಾಹ ನೀಡಲಾಗು ತ್ತಿದೆ. ಆದರೆ, ಕೆಲವು ಅಧಿಕಾರಿಗಳು ನವೋದ್ಯಮ ಆರಂಭಿಸುವವರಿಗೆ ಪರವಾನಗಿ ನೀಡುವ ವೇಳೆ ಅನಗತ್ಯ ವಿಳಂಬನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು. ಇನ್ನು ಪ್ರಶಸ್ತಿ ಕುರಿತು ಮಾತನಾಡಿದ ಸಚಿವರು, ಈ ಪ್ರಶಸ್ತಿಯು ಸಾಧಕರಿಗೆ ಪ್ರೇರಣೆಯಾಗಿದೆ.

Advertisement

ಸರ್ಕಾರ ಕೂಡ ಕೈಗಾರಿಕೆಗಳನ್ನು ಉಳಿಸಿ ಬೆಳೆಸಲು ಕೈಜೋಡಿಸಲಿದೆ ಎಂದು ಭರವಸೆ ನೀಡಿದರು. ಎಫ್ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಎಂ. ಸುಂದರ್‌ ಮಾತನಾಡಿ, ಕೊರೊನಾ ನಂತರದ ಕಾಲಘಟ್ಟದಲ್ಲಿ ಯುವ ಉದ್ಯಮಗಳಿಗೆ ಹೊಸ ರೀತಿಯ ಅವಕಾಶಗಳು ದೊರೆಯುತ್ತಿವೆ. ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ನವೋದ್ಯಮಗಳು ಹೆಚ್ಚಿನ ಪ್ರಮಾಣದಲ್ಲಿ ಆರಂಭವಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದೆ ಎಂದರು. ಇದೇ ವೇಳೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸಾಧನೆ ಮಾಡಿರುವ 10 ಸಂಸ್ಥೆಗಳಿಗೆ ಎಕ್ಸ್‌ಲೆನ್ಸ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next