Advertisement
ತೊಕ್ಕೊಟ್ಟಿನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ನೆಲ್ಸನ್ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಏಜೆಂಟ್ ಮೂಲಕ ವೀಸಾ ಪಡೆದು ಕಳೆದ ವರ್ಷ ಆಗಸ್ಟ್‌ನಲ್ಲಿ ಕುವೈಟ್‌ಗೆ ತೆರಳಿದ್ದರು. ಆದರೆ ಅಲ್ಲಿ ಅವರಿಗೆ ಮನೆಕೆಲಸ ನೀಡಲಾಗಿತ್ತು. ಜತೆಗೆ ಪ್ರತಿದಿನ ಕಿರುಕುಳ ನೀಡಲಾಗುತ್ತಿತ್ತು. ಕೆಲವು ದಿನಗಳ ಬಳಿಕ ಸೌದಿಯ ಗಡಿಪ್ರದೇಶವೊಂದರ ಮರುಭೂಮಿ ಪ್ರದೇಶವಾದ ವಫ್ರಾದಲ್ಲಿ ಮನೆಯಲ್ಲಿರಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗಿತ್ತು.
ನೆಲ್ಸನ್ ಅವರು ಕುವೈಟ್‌ನಲ್ಲಿದ್ದ ತನ್ನ ಗೆಳೆಯ ದೀಪೆ¤¤àಶ್‌ಗೆ ಕರೆ ಮಾಡಿ ಸಹಾಯ ಯಾಚಿಸಿದ್ದರು. ಆದರೆ ದೀಪೆಶ್‌ಗೆ ಆ ಸಂದರ್ಭದಲ್ಲಿ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ನೆಲ್ಸನ್ ಆ ಮನೆಯಿಂದ ತಪ್ಪಿಸಿಕೊಂಡು ಹೊರಬಂದರು. ಸುಮಾರು 5 ಕಿ.ಮೀ. ನಡೆದುಕೊಂಡು ಬಂದು
ದೀಪೆಶ್ ಅವರನ್ನು ಭೇಟಿ ಮಾಡಿದ್ದರು. ಅನಂತರ ಕಾರ್ಕಳ ಮೂಲದ ಜೇಮ್ಸ್ ಪೌಲ್ ಅವರು ನೆಲ್ಸನ್ ನೆರವಿಗೆ ಬಂದರು. ಜೇಮ್ಸ್ ಪೌಲ್ ಹಾಗೂ ಮೋಹನದಾಸ್ ಕಾಮತ್ ಅವರು ಕುವೈಟ್‌ನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಾತ್ಕಾಲಿಕ ದಾಖಲೆಗಳನ್ನು ದೊರಕಿಸಿಕೊಟ್ಟಿದ್ದು ಎರಡು ಮೂರು ದಿನಗಳಲ್ಲಿ ನೆಲ್ಸನ್ ಅವರನ್ನು ಊರಿಗೆ ಕಳುಹಿಸುವುದಕ್ಕೆ ಕಾನೂನು ಪ್ರಕಾರ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೋಹನ್‌ದಾಸ್ ಕಾಮತ್ “ಉದಯವಾಣಿ’ಗೆ ತಿಳಿಸಿದ್ದಾರೆ. “ನಾನು ಡ್ರೈವರ್ ವೀಸಾದಲ್ಲಿ ಬಂದಿದ್ದೆ. ಆದರೆ ನನಗೆ ಮನೆಕೆಲಸ ಕೊಟ್ಟು ಹಿಂಸೆ ನೀಡಿದರು. ನರಕ
ಯಾತನೆ ಅನುಭವಿಸಿ ಕೊನೆಗೂ ತಪ್ಪಿಸಿಕೊಂಡು ಬಂದೆ. ಅನಂತರ ಹಲವು ಮಂದಿ ಗೆಳೆಯರು ನೆರವಾದ್ದರಿಂದ ಮರಳಿ ಭಾರತಕ್ಕೆ ಬರಲು ಈಗ ಸಿದ್ಧನಾಗಿದ್ದೇನೆ’ ಎಂದು ನೆಲ್ಸನ್ ತಿಳಿಸಿದ್ದಾರೆ.