Advertisement

ಸಿಡಿಲಬ್ಬರದ ಗಾಳಿ-ಮಳೆಗೆ ಜನತೆ ತತ್ತರ

11:50 AM Jun 07, 2019 | Team Udayavani |

ಹರಪನಹಳ್ಳಿ: ಹೊಂಬಗಳಗಟ್ಟಿಯಲ್ಲಿ ಮಳೆ, ಗಾಳಿಗೆ ಹಾರಿದ ಮನೆ ಮೇಲ್ಛಾವಣಿ. ಹರಪನಹಳ್ಳಿ: ಭಾರೀ ಮಳೆಗೆ ನೆಲಕಚ್ಚಿದ ಬಾಳೆ.

Advertisement

ಹರಪನಹಳ್ಳಿ: ಬಿಸಿಲಿನ ತಾಪಕ್ಕೆ ಬಸವಳಿದ್ದ ಜನತೆಗೆ ಬುಧವಾರ ತಡರಾತ್ರಿ ಸುರಿದ ಮಳೆ ತಂಪರೆದಿದೆ. ಆದರೆ ತಡರಾತ್ರಿ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಮೆಳೆಗೆ ನೂರಾರು ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಹಲವೆಡೆ ಮರಗಳು ಧರೆಗುರುಳಿದ್ದು, ಬಾಳೆ ತೋಟ ನೆಲಕಚ್ಚಿದೆ. ಕೆಲವೆಡೆ ವಿದ್ಯುತ್‌ ಕಂಬಗಳ ಮೇಲೆ ಮರಗಳು ಬಿದ್ದ ಪರಿಣಾಮ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಪಟ್ಟಣದ ಗುಂಡಿನಕೇರಿ ವಾಸಿ ದಾದಾಪೀರ್‌ ಎಂಬುವವರ ಮನೆಯ ಮೇಲ್ಛಾವಣಿ ಬಿದ್ದ ಪರಿಣಾಮ ಸಹರಾಭಾನು(9) ಮೃತಪಟ್ಟಿದ್ದು, ಇವರ ಸಹೋದರಿ ಸಿಮ್ರಾನ್‌(7) ಗಾಯಗೊಂಡಿದ್ದು, ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಂಡಿನಕೇರಿ ದುರುಗಮ್ಮ ದೇವಸ್ಥಾನ ಬಳಿಯ ಹಾಲಮ್ಮ ಎಂಬುವವರ ಮನೆಯ ಮೇಲೆ ಮರ ಬಿದ್ದ ಪರಿಣಾಮ 2ನೇ ತರಗತಿ ಓದುತ್ತಿರುವ ಬಾಲಕಿ ದೀಪಾಗೆ ತಲೆಗೆ ಪೆಟ್ಟು ಬಿದ್ದು, ಹಲ್ಲುಗಳು ಮುರಿದಿವೆ. ಕಿವಿಗೆ ಬಲವಾದ ಪೆಟ್ಟು ಬಿದ್ದಿದೆ.

ತೋಗರಿಕಟ್ಟೆ ಗ್ರಾಮದಲ್ಲಿ-8, ಅಡವಿಹಳ್ಳಿ-3, ಮುತ್ತಿಗಿ-3, ಸಾಸ್ವಿಹಳ್ಳಿ-3, ಬಾವಿಹಳ್ಳಿ-3, ಕೆ.ಕಲ್ಲಹಳ್ಳಿ-3, ನೀಲಗುಂದ-3, ಬೆಣ್ಣೆಹಳ್ಳಿ-2 ಮನೆಗಳು ಸೇರಿ ತಾಲೂಕಿನಾದ್ಯಂತ ಒಟ್ಟು 30 ಮನೆಗಳು ಭಾಗಶಃ ಹಾನಿಯಾಗಿದೆ. ತೊಗರಿಕಟ್ಟೆ ಗ್ರಾಮದಲ್ಲಿ 8 ಎಕರೆ ದಾಳಿಂಬೆ ಬೆಳೆ ಹಾನಿಯಾಗಿದೆ. ಅಲಗಿವಾಡ ಗ್ರಾಮದಲ್ಲಿ ನಿಂಗಪ್ಪ ಎಂಬುವವರ 4 ಎಕರೆ, ಮೃತ್ಯುಂಜಯಪ್ಪ-2.50 ಎಕರೆ, ಚನ್ನವೀರಪ್ಪ-1 ಎಕರೆ, ನಾಗ್ಯಾನಾಯ್ಕ-1.50 ಎಕರೆ, ಕಡತಿ ಗ್ರಾಮದ ಬಸವರಾಜ್‌-2 ಎಕರೆ, ಸೋಮಶೇಖರ್‌-1.50 ಎಕರೆ, ಬಸವರಾಜಪ್ಪ-2 ಎಕರೆ, ಹಲುವಾಗಲು ಲಕ್ಷ್ಮಮ್ಮ-1.50 ಎಕರೆ, ಯರಬಾಳು ಗ್ರಾಮದ ರಾಮಪ್ಪ-0.50 ಎಕರೆ, ಶಿವಮೂರ್ತೆಪ್ಪ-1 ಎಕರೆ, ರಾಜನಗೌಡ-1.50 ಎಕರೆ ಬಾಳೆ ತೋಟ ಸಂಪೂರ್ಣ ನೆಲಕಚ್ಚಿದೆ.

ಪಟ್ಟಣದ ಅರಣ್ಯ ಇಲಾಖೆ ಆವರಣ ಮತ್ತು ಸಂತೆ ಮೈದಾನದಲ್ಲಿ ತಲಾ 1 ಮರ ಬಿದ್ದಿದೆ. ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಆವರಣದೊಳಗೆ ನೀರು ನಿಂತಿದ್ದು, ಕೆಸರು ಗದ್ದೆಯಂತಾಗಿದೆ. ಪಟ್ಟಣದ ಗುಂಡಿನಕೇರಿಯಲ್ಲಿ ಹಾಲಮ್ಮ ಮತ್ತು ದಾವಣಗೆರೆ ಬಸಮ್ಮ ಎಂಬುವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಳ್ಳಿಕೇರಿ ಕೆಂಚಪ್ಪ ಅವರ ಮನೆ ತಗಡು ಹಾರಿಹೋಗಿವೆ. ತೆಕ್ಕದಗರಡಿ ಕೇರಿಯಲ್ಲಿ ದುರುಗಮ್ಮ ಹಾಗೂ ಚಲವಾದಿಕೇರಿ ಸಿ.ಅಂಜಿನಪ್ಪ ಅವರ ಮನೆಯ ಮೇಲೆ ಮರ ಬಿದ್ದಿದೆ. ಟಿ.ಗಂಗಪ್ಪ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.

Advertisement

ತಾಲೂಕಿನ ಯರಬಾಳು ಗ್ರಾಮದಲ್ಲಿ ಮಡಿವಾಳದ ನಿಂಗಪ್ಪ ಎಂಬುವರ ಆಶ್ರಯ ಮನೆಯ ಶೀಟ್ ಹಾರಿ ಹೋಗಿವೆ. ಗ್ರಾಪಂ ಅಧ್ಯಕ್ಷ ಲಂಕಿ ಭೀಮಪ್ಪ ಅವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯವರು ಮರ ಬಿದ್ದ ತಕ್ಷಣವೇ ಓಡಿ ಹೊರಬಂದಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪಟ್ಟಣದಲ್ಲಿ ರಸ್ತೆ ಹಾಗೂ ಮನೆಗಳ ಮೇಲೆ ಬಿದ್ದ ಮರಗಳನ್ನು ಪುರಸಭೆಯವರು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿದರು. ಪಟ್ಟಣದಲ್ಲಿ ತಹಶೀಲ್ದಾರ್‌ ಪ್ರಸಾದ್‌ ಹಾಗೂ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳಲ್ಲಿ ಮರಗಳು ಧರೆಗುರುಳಿವೆ. ಕೆಲವೆಡೆ ಮರಗಳು ವಿದ್ಯುತ್‌ ಕಂಬಗಳ ಮೇಲೆ ಬಿದ್ದ ಪರಿಣಾಮ ಸುಮಾರು 200ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮುರಿದು ಬಿದ್ದ ಪರಿಣಾಮ ಹಲವು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ನೂರಾರು ಸಂಖ್ಯೆಯಲ್ಲಿ ಕಂಬಗಳು ಮರಿದು ಬಿದ್ದಿವೆ. ಶುಕ್ರವಾರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಬೆಸ್ಕಾಂ ಇಲಾಖೆ ಎಇಇ ಜಯಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next