Advertisement
ಕಳೆದ ನಾಲ್ಕು ದಿನಗಳಿಂದ ಒಂದು ದಿನಕ್ಕೆ ಮೂರರಿಂದ ನಾಲ್ಕು ಮಂದಿ ಹೆಬ್ಬೆಟ್ಟನ್ನು ಸ್ವೀಕರಿಸುವುದೇ ಹೆಚ್ಚು. ಉಳಿದಂತೆ ಸರ್ವರ್ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತದೆ. ಪಡಿತರ ಪಡೆಯಲು ಸಿದ್ಧರಾಗಿ ಬರುವವರು ಸರ್ವರ್ ಇಲ್ಲದಿರುವುದನ್ನು ತಿಳಿದು ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ. ಪ್ರತಿ ತಿಂಗಳ ಮೊದಲ ವಾರದಲ್ಲಿ ಪಡಿತರದಾರರ ಹೆಬ್ಬೆಟ್ಟು ಪಡೆದು ನಂತರ ಪದಾರ್ಥಗಳನ್ನು ನೀಡಿ ಮುಗಿಸಬೇಕು. ಆದರೆ ಜನವರಿ ತಿಂಗಳ ಪಡಿತರವನ್ನು ಹದಿನೈದು ದಿನಗಳಾದರೂ ಕೊಡಲು ಸಾಧ್ಯವಾಗಿಲ್ಲ.
Related Articles
ಸಿಗುವ ಸಾಧ್ಯತೆಯಿದೆ. ಅದನ್ನು ತಿಳಿದು ಎಲ್ಲ ಕೆಲಸ ಬಿಟ್ಟು ಪಡಿತರ ಚೀಟಿ ಕುಟುಂಬದ ಸದಸ್ಯರು ಬಂದರೂ ಆ ವೇಳೆಯಲ್ಲೂ ಸ್ಥಗಿತಗೊಂಡಿರುವುದು ಪಡಿತರದಾರರನ್ನು ಕಂಗೆಡಿಸುತ್ತಿದೆ. ಇನ್ನು ಬೆಳಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಸರ್ವರ್ ಸಿಗುವುದೇ ಇಲ್ಲ. ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರ ಪದಾರ್ಥಗಳನ್ನು ನೀಡಲಾಗದೆ ಅಸಹಾಯಕತೆ ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಪಡಿತರ ಫಲಾನುಭವಿಗಳು ಒತ್ತಾಯಿಸಿದ್ದಾರೆ.
Advertisement
ಸರ್ವರ್ ಸಮಸ್ಯೆ ಕೇಳಿ ಬಂದ ಹಿನ್ನೆಲೆಯಲ್ಲಿ ನಾನು ಶುಕ್ರವಾರಬಾಗಳಿ, ಕೂಲಹಳ್ಳಿ, ಶೃಂಗಾರದೋಟ ಗ್ರಾಮಗಳ ನ್ಯಾಯ ಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ದೊಡ್ಡ ಸಮಸ್ಯೆ ಕಂಡು ಬಂದಿಲ್ಲ. ನ್ಯಾಯ ಬೆಲೆ ಅಂಗಡಿಗಳಲ್ಲಿ ಮೊಬೈಲ್ ಡಾಟಾ ಸರಿಯಾಗಿ ಹಾಕಿಸದಿರುವುದು ಮತ್ತು ಸಿಗ್ನಲ್ ಸಿಗದಿರುವ ಕಡೆಗಳಲ್ಲಿ ತೊಂದರೆ ಆಗಿದೆ. ಆ. 21ರಿಂದ ಪಡಿತರ ಪಡೆಯಲು ಮತ್ತು ಹೆಬ್ಬೆಟ್ಟು ನೀಡಲು ಪ್ರತ್ಯೇಕ ಸಾಪ್ಟವೇರ್ ಕಾರ್ಯನಿರ್ವಹಿಸಲಿದ್ದು, ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ. ಸಂಜಯ್ ಬಾಗೇವಾಡಿ,
ಆಹಾರ ಶಿರಸ್ತೇದಾರರು ಎಸ್.ಎನ್.ಕುಮಾರ್ ಪುಣಬಗಟ್ಟಿ