Advertisement

ವರದಿ ಮುನ್ನವೇ ಕ್ವಾರಂಟೈನ್‌ನಿಂದ ಬಿಡುಗಡೆ ಎಂಬುದರಲ್ಲಿ ಹುರುಳಿಲ್ಲ

01:01 PM Jun 04, 2020 | Naveen |

ಹರಪನಹಳ್ಳಿ: ಪಟ್ಟಣದ ಕೋವಿಡ್ ಪಾಸಿಟಿವ್‌ ಬಾಲಕನ ವರದಿ ಬರುವ ಮೊದಲೇ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿದೆ ಎಂಬುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್‌. ಮಂಜುನಾಥ ಸ್ಪಷ್ಟಪಡಿಸಿದರು.

Advertisement

ಪಟ್ಟಣದಲ್ಲಿ ಕೋವಿಡ್ ಪಾಸಿಟಿವ್‌ ಕೇಸ್‌ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಆಗಿರುವ ಬಾಣಗೆರೆ ಪ್ರದೇಶವನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಎರಡ್ಮೂರು ಭಾರಿ ನೆಗೆಟಿವ್‌ ವರದಿ ಬಂದ ನಂತರವೂ ಪಾಸಿಟಿವ್‌ ಬಂದ ಅನೇಕ ಪ್ರಕರಣಗಳಿವೆ. ಕೆಲವರಿಗೆ ಸೋಂಕು ತಗುಲಿ ಗುಣಮುಖರಾಗಿ ಬಿಡುಗಡೆ ಹೊಂದಿ ಎಷ್ಟು ದಿನಗಳ ನಂತರ ಪುನಃ ಪಾಸಿಟಿವ್‌ ವರದಿ ಬಂದಿದೆ. ಹೀಗಾಗಿ ವರದಿ ಬರುವ ಮುನ್ನವೇ ಯಾರನ್ನು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಕೋವಿಡ್ ಪಾಸಿಟಿವ್‌ ಬಂದಿರುವ ಪ್ರದೇಶವನ್ನು 100 ಮೀಟರ್‌ ಕಂಟೈನ್ಮೆಂಟ್‌ ಪ್ರದೇಶವೆಂದು ಗುರುತಿಸಲಾಗಿದೆ. ಇಲ್ಲಿ ಲಾಕ್‌ಡೌನ್‌ ಮಾಡಲಾಗಿದ್ದು, ಜನರ ಓಡಾಟವನ್ನು ನಿರ್ಬಂಧಿ ಸಲಾಗಿದೆ. ಇಲ್ಲಿರುವ ನಿವಾಸಿಗಳ ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು. ಅಗತ್ಯ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. 28 ದಿನ ಸೀಲ್‌ ಡೌನ್‌ ಇರಲಿದೆ. ಕಂಟೈನ್ಮೆಂಟ್‌ ಪ್ರದೇಶದಲ್ಲಿ ಎಲ್ಲ ಕುಟುಂಬಗಳಿಗೆ ಆಶಾ, ಅಂಗನವಾಡಿ, ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಪ್ರತಿದಿನ ಮನೆ ಮನೆಗೆ ತೆರಳಿ ಆರೋಗ್ಯ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಅನುಮಾನ ಬಂದ ವ್ಯಕ್ತಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ ಮೂರು ದಿನದಲ್ಲಿಯೇ ವರದಿ ಬರುತ್ತದೆ. ಪ್ರಥಮ ಬಾರಿಗೆ ನೆಗೆಟಿವ್‌ ಬಂದರೂ 2 ಬಾರಿ ವರದಿ ಬಂದ ನಂತರ ಬಿಡುಗಡೆ ಮಾಡಲಾಗುತ್ತಿದೆ. ಹರಪನಹಳ್ಳಿಯ ಪಾಸಿಟಿವ್‌ ಕೇಸ್‌ನಲ್ಲಿ 6 ಜನರು ಪ್ರಥಮ, 13 ದ್ವಿತೀಯ ಸಂಪರ್ಕ ಎಂದು ಗುರುತಿಸಲಾಗಿದೆ. ಪ್ರಥಮ ಸಂಪರ್ಕದವರನ್ನು ಕ್ವಾರಂಟೈನ್‌ಗೆ ಕಳಿಸಲಾಗಿದೆ. ದ್ವಿತೀಯ ಸಂಪರ್ಕದಲ್ಲಿರುವವರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನಾರಾಯಣಪುರ ಸರ್ವೇ ನಂ.1, ಯರಬಾಳು ಸರ್ವೇ ನಂ.1, 4, 106ರಲ್ಲಿ ಸರ್ಕಾರಿ ಹುಲ್ಲುಗಾವಲು ಜಮೀನು ಒತ್ತುವರಿ ಮಾಡಲಾಗಿದೆಂದು ದೂರು ಬಂದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿ ಸಿದ ದಾಖಲಾತಿ ಪರಿಶೀಲನೆ ಸಭೆ ನಡೆಸಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಿದ್ದೇವೆ. ಒತ್ತುವರಿಯಾಗಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

Advertisement

ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್‌, ತಹಶೀಲ್ದಾರ್‌ ಡಾ| ನಾಗವೇಣಿ, ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ, ಸಿಪಿಐ ಕೆ. ಕುಮಾರ್‌, ಪಿಎಸ್‌ಐ ಸಿ.ಪ್ರಕಾಶ್‌, ಮುಖ್ಯಾಧಿಕಾರಿ ಬಿ.ಆರ್‌. ನಾಗರಾಜನಾಯ್ಕ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next