ಹರಪನಹಳ್ಳಿ: ಸ್ಥಳೀಯ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಗುರುವಾರ 27 ವಾರ್ಡ್‌ಗಳಿಂದ ಒಟ್ಟು 88 ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ 24 ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷ 9 ವಾರ್ಡ್‌ಗಳಿಗೆ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಿದೆ. ಬಿಜೆಪಿ 6ನೇ ವಾರ್ಡ್‌ನಲ್ಲಿ ಇಬ್ಬರಿಗೆ ಬಿ-ಫಾರಂ ನೀಡಿದೆ. ಕಾಂಗ್ರೆಸ್-ಬಿಜೆಪಿಯಿಂದ ಎಲ್ಲ ವಾರ್ಡ್‌ಗಳಿಗೂ ತನ್ನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಪಕ್ಷ ಬಿ-ಫಾರಂ ಪಡೆದುಕೊಂಡ ಅಭ್ಯರ್ಥಿಗಳು ತಮ್ಮ ಅಪಾರ ಬೆಂಬಲಿಗರೊಂದಿಗೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ಕೆಲವರು ದೇವಸ್ಥಾನಗಳಲ್ಲಿ ಬಿ-ಫಾರಂಗೆ ವಿಶೇಷ ಪೂಜೆ ಸಲ್ಲಿಸಿದರು.
1ನೇ ವಾರ್ಡ್‌ಗೆ ಸತ್ತೂರು ಯಲ್ಲಮ್ಮ-ಕಾಂಗ್ರೆಸ್, ಪಿ.ಶೀಲಾ-ಬಿಜೆಪಿ, 2.ಉದ್ದಾರ ಗಣೇಶ್-ಕಾಂಗ್ರೆಸ್, ವೈ.ಮಂಜಪ್ಪ-ಬಿಜೆಪಿ, 3.ಶೋಭಾ-ಕಾಂಗ್ರೆಸ್, ಧನಲಕ್ಷ್ಮಿ-ಬಿಜೆಪಿ, ಎಂ.ಅನಿತಾ-ಜೆಡಿಎಸ್, 4. ಕೆ.ಎಂ.ಜಗದೀಶ್-ಕಾಂಗ್ರೆಸ್, ಕಿರಣ್-ಬಿಜೆಪಿ, ಕೆ.ಎಂ.ಕವಿತಾವಾಗೀಶ್-ಪಕ್ಷೇತರ, 5.ಗುಡಿ ನಾಗರಾಜ್-ಕಾಂಗ್ರೆಸ್, ಎಚ್.ಎಂ.ಅಶೋಕ್-ಬಿಜೆಪಿ, ಖಾಜಾಪೀರ್-ಜೆಡಿಎಸ್, 6.ಯು.ನಿಂಗಮ್ಮ-ಕಾಂಗ್ರೆಸ್, ಬಿ.ಜ್ಯೋತಿ-ಬಿಜೆಪಿ, ಕೆ.ಶಾಂತಮ್ಮ-ಬಿಜೆಪಿ-2, ರಾಯದುರ್ಗದ ಗಂಗಮ್ಮ-ಪಕ್ಷೇತರ, 7.ಎಲ್.ಲಾಟಿದಾದಪೀರ್-ಕಾಂಗ್ರೆಸ್, ಐ.ಪಕ್ಕೀರಪ್ಪ-ಬಿಜೆಪಿ, ಎ.ಟಿ.ಖಲಂದರ್- ಜೆಡಿಎಸ್, ಡಿ.ನಾರಾಯಣಪ್ಪ, ನವರಂಗ್, ಎಂ. ಡಿ.ಜಾಕೀರಹುಸೇನ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
8.ಜೋಗಿನವರ ಭರತೇಶ್-ಕಾಂಗ್ರೆಸ್, ನವೀನಕುಮಾರ್-ಬಿಜೆಪಿ, 9.ನಾಗರಾಜ್-ಕಾಂಗ್ರೆಸ್, ಎಚ್.ವೀರಣ್ಣ-ಬಿಜೆಪಿ, ಎಂ.ರುದ್ರಪ್ಪ, ಐ.ಎಸ್.ನವೀನ್ ಪಕ್ಷೇತರ, 10.ಎಂ.ವಿ.ಅಂಜಿನಪ್ಪ-ಕಾಂಗ್ರೆಸ್, ಜಟ್ಟೆಪ್ಪ-ಬಿಜೆಪಿ, ಎಂ.ಎಚ್.ದೊಡ್ಡೇಶ್-ಪಕ್ಷೇತರ, 11.ಎಸ್.ಜಾಕೀರಹುಸೇನ್-ಕಾಂಗ್ರೆಸ್, ಪೀರಾಸಾಬ್-ಬಿಜೆಪಿ, ಸಿ.ಪೀರ್‌ಅಹ್ಮದ್-ಜೆಡಿಎಸ್, ಎಚ್.ಮಹ್ಮದ್‌ಹುಸೇನ್, ಎನ್.ಎಂ.ವಾಹಬ್-ಪಕ್ಷೇತರ, 12.ಎ.ಸಮೀನಾ-ಕಾಂಗ್ರೆಸ್, ಕೆ.ಹಸೀನ್-ಬಿಜೆಪಿ, ಷಾಹೀನಾಬಿ-ಜೆಡಿಎಸ್, ಓ.ವಾಹೀದ್-ಪಕ್ಷೇತರ, 13. ಡಿ.ನಜೀರಅಹ್ಮದ್-ಕಾಂಗ್ರೆಸ್, ಅಬ್ದುಲ್ಅಜೀದ್-ಬಿಜೆಪಿ, ಬಿ.ಕೆ.ಇಸ್ಮಾಯಿಲ್, ಅಬ್ದುಲ್ರಹಿಮಾನ್ ಪಕ್ಷೇತರ, 14. ಬಂಗ್ಲಿ ಸೋಮಶೇಖರ್-ಕಾಂಗ್ರೆಸ್, ಎಂ.ಕೆ.ಜಾವೀದ್-ಬಿಜೆಪಿ, ಎ.ಮೂಸಾಸಾಬ್-ಜೆಡಿಎಸ್, ಡಿ.ಇಲಿಯಾಸ್, ಟಿ.ಅಹ್ಮದ್‌ಹುಸೇನ್-ಬಿಜೆಪಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ.
15. ಸಾಹೀರಾಬಾನು-ಕಾಂಗ್ರೆಸ್, ಎಂ.ನಾಗವೇಣಿ-ಬಿಜೆಪಿ, ನಜೀಮಬೀ-ಜೆಡಿಎಸ್, 16. ವೀಣಾ ಪಂಡಿತ್-ಕಾಂಗ್ರೆಸ್, ತಾರಾ-ಬಿಜೆಪಿ, ಟಿ.ವೈದೇಹಿ-ಪಕ್ಷೇತರ, 17. ಪ್ರಮೋದಕುಮಾರ್-ಕಾಂಗ್ರೆಸ್, ವಿನಯಕುಮಾರ್-ಬಿಜೆಪಿ, ಕೇಶವಮೂರ್ತಿ, ಭರಮಪ್ಪ-ಪಕ್ಷೇತರ, 18. ಬಾಪೂಜಿರಾವ್-ಕಾಂಗ್ರೆಸ್, ಮಂಜುನಾಥ-ಬಿಜೆಪಿ, ಎಚ್. ನಜೀರಸಾಬ್-ಜೆಡಿಎಸ್, ನಜೀರಸಾಬ್-ಪಕ್ಷೇತರ, 19. ನಾಗರತ್ನ-ಕಾಂಗ್ರೆಸ್, ಶಮಿ-ಬಿಜೆಪಿ, ಅಂಬುಜಾಕ್ಷಿ-ಪಕ್ಷೇತರ, 20. ಬಿ.ಫತೀಯಾ-ಕಾಂಗ್ರೆಸ್, ಚಿಂದಿ ಸರೋಜ-ಬಿಜೆಪಿ, ಸನ್ಮಾಮಬಾನು-ಜೆಡಿಎಸ್, 21. ಎಚ್.ಕೋಟ್ರೇಶ್-ಕಾಂಗ್ರೆಸ್, ಕೆ.ಅಂಜಿನಪ್ಪ-ಬಿಜೆಪಿ, 22. ತಳವಾರ ಲಕ್ಕಮ್ಮ-ಕಾಂಗ್ರೆಸ್, ಪದ್ಮಾವತಿ-ಬಿಜೆಪಿ, 23. ಪ್ರಮೀಳಾ-ಕಾಂಗ್ರೆಸ್, ಸುಜಾತಾ-ಬಿಜೆಪಿ, ಹನುಮಕ್ಕ-ಪಕ್ಷೇತರ, 24. ನೂರ್‌ಜಹಾನ್-ಕಾಂಗ್ರೆಸ್, ರಜಿಯಾಬಿ-ಬಿಜೆಪಿ, 25. ಟಿ.ವೆಂಕಟೇಶ್-ಕಾಂಗ್ರೆಸ್, ಆರ್.ಲೋಕೇಶ್-ಬಿಜೆಪಿ, ದುರುಗಪ್ಪ-ಪಕ್ಷೇತರ, 26.ಲಕ್ಷಮ್ಮ-ಕಾಂಗ್ರೆಸ್, ಭೀಮವ್ವ-ಬಿಜೆಪಿ, ದೇವಮ್ಮ ಪಕ್ಷೇತರ, 27.ಎಚ್.ಕೆ.ಹಾಲೇಶ್-ಕಾಂಗ್ರೆಸ್, ಡಿ.ರೊಕ್ಕಪ್ಪ-ಬಿಜೆಪಿ ನಾಮಪತ್ರ ಸಲ್ಲಿಸಿದ್ದಾರೆ.
13ನೇ ವಾರ್ಡ್‌ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಯೋಜಕ, ವಕೀಲ ಡಿ.ಅಬ್ದುಲ್ರಹಿಮಾನ್, 23ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕದ ಬ್ಲಾಕ್ ಅಧ್ಯಕ್ಷ ಚಿಕ್ಕೇರಿ ಬಸಪ್ಪನವರ ಪತ್ನಿ ಹನುಮಕ್ಕ, 4ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಪುರಸಭೆ ಮಾಜಿ ಅಧ್ಯಕ್ಷೆ ಕೆ.ಎಂ.ಕವಿತಾವಾಗೀಶ್ ಅವರು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. 11ನೇ ವಾರ್ಡ್‌ನ ಕಾಂಗ್ರೆಸ್ ಕಾರ್ಯಕರ್ತ ಸಿ.ಪೀರ್‌ಅಹ್ಮದ್ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. 3ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಎಲ್.ಮಂಜ್ಯನಾಯ್ಕ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್‌ನಿಂದ ಟಿಕೆಟ್ ಪಡೆದು ಪತ್ನಿ ಎಂ.ಅನಿತಾ ಅವರನ್ನು ಕಣಕ್ಕಿಳಿದ್ದಾರೆ.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್, ಸದಸ್ಯರಾದ ಬಿ.ನಜೀರ್‌ಅಹ್ಮದ್, ಬಂಗ್ಲೆ ಸೋಮಶೇಖರ್ ಸೇರಿದಂತೆ ಹಲವರು ಪುನಃ ಸ್ಪರ್ಧೆಗಿಳಿದಿದ್ದಾರೆ. ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಬಿಜೆಪಿ ರಾಜ್ಯ ಘಟಕದ ಸದಸ್ಯ ಎಚ್.ಎಂ.ಅಶೋಕ್ ಅವರು ಅದೃಷ್ಟವನ್ನು ಪಣಕ್ಕಿಟ್ಟಿದ್ದಾರೆ. ಜೆಡಿಎಸ್ ಮತ್ತು ಕೆಲವೆಡೆ ಬಂಡಾಯ ಅಭ್ಯರ್ಥಿಗಳು ಕೆಲವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.