Advertisement

ಪ್ರಾಮಾಣಿಕ ಸೇವೆಯಿಂದ ಜನಮನದಲ್ಲಿ ನೆಲೆ

04:28 PM Aug 05, 2019 | Naveen |

ಹರಪನಹಳ್ಳಿ:ಪಟ್ಟಣದ ಪೊಲೀಸ್‌ ಉಪವಿಭಾಗದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ವರ್ಗಾವಣೆಗೊಂಡ ಸಿಪಿಐ ಡಿ. ದುರುಗಪ್ಪ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಸಿಪಿಐ ಕೆ. ಕುಮಾರ್‌ ಅವರ ಸ್ವಾಗತ ಸಮಾರಂಭ ನಡೆಯಿತು.

Advertisement

ವರ್ಗಾವಣೆಗೊಂಡ ಸಿಪಿಐ ಡಿ. ದುರುಗಪ್ಪ ಸನ್ಮಾನ ಸ್ವೀಕರಿಸಿ, ಪ್ರತಿಯೊಬ್ಬ ಅಧಿಕಾರಿ ಶಿಸ್ತುಬದ್ಧವಾಗಿ, ಕಾನೂನಾತ್ಮಕವಾಗಿ ಸೇವೆ ಸಲ್ಲಿಸಿದರೆ ಅವರ ಅಧಿಕಾರವಧಿಯ ನಂತರವೂ ಗೌರವಗಳು ದೊರೆಯುತ್ತವೆ. ಇಲಾಖೆಗಳ ನಡುವಿನ ಸಂಬಂಧಗಳು ಉತ್ತಮವಾಗಿದ್ದರೆ ಕರ್ತವ್ಯ ನಿರ್ವಹಿಸುವುದು ಸುಲಭ. ನಾನು ಹರಪ್ಪನಹಳ್ಳಿಯೇ ಅಭ್ಯಾಸ ಮಾಡಿದ್ದು, ನಂತರ ಇಲ್ಲಿಯೇ 3 ವರ್ಷ ಪಿಎಸ್‌ಐ ಆಗಿ ಸೇವೆ ಸಲ್ಲಿಸಿದ್ದರಿಂದ ದಕ್ಷತೆಯಿಂದ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ. ಹರಪನಹಳ್ಳಿಯ ಜನರು ಸಹೃದಯಿಗಳಾಗಿದ್ದು, ಸರ್ವಧರ್ಮ ದವರು ಹೊಂದಾಣಿಕೆಯಿಂದ ಕಾನೂನಿಗೆ ತಲೆಬಾಗಿ ನಡೆಯುತ್ತಾರೆ. ಹೀಗಾಗಿ ಸಮಸ್ಯೆಗಳನ್ನು ಕುಳಿತು ಬಗೆಹರಿಸಿದರೆ ಎಲ್ಲವೂ ಸಾಧ್ಯ ಎಂದರು.

ನೂತನ ಸಿಪಿಐ ಕೆ.ಕುಮಾರ್‌ ಮಾತನಾಡಿ, ಡಿ. ದುರುಗಪ್ಪ ಅವರ ಕಾರ್ಯವೈಖರಿ ಮೆಚ್ಚಿಕೊಂಡು ಅಭಿಮಾನದಿಂದ ಬೀಳ್ಕೊಡುಗೆ ಸಮಾರಂಭಕ್ಕೆ ಇಷ್ಟೊಂದು ಜನಗಳು ಆಗಮಿಸಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಇದರಿಂದಾಗಿ ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ದುರುಗಪ್ಪ ಅವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರದೇ ಸರ್ವಧರ್ಮಿಯ ಪ್ರೀಯರಾಗಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಹರಪನಹಳ್ಳಿಯ ನಾಗರಿಕರು ಅವರ ಕಾರ್ಯಗಳಿಗೆ ಸಹಕಾರ ನೀಡಿದ್ದಿರೋ ಹಾಗೆ ನನಗೂ ಸಹ ಸಹಕಾರ ನೀಡಿದರೆ ದುರುಗಪ್ಪ ಅವರ ಸ್ಥಾನ ತುಂಬುತ್ತೇನೆ ಎಂದು ವಿನಂತಿಸಿಕೊಂಡರು.

ಡಿವೈಎಸ್ಪಿ ನಾಗೇಶ್‌ ಐತಾಳ್‌ ಮಾತನಾಡಿ, ಸರಕಾರಿ ಸೇವೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರು ಮಾತ್ರ ಜನಮಾನಸದಲ್ಲಿ ಉಳಿಯಲು ಸಾಧ್ಯ. ವರ್ಗಾವಣೆ ಹೊಂದಿರುವ ಸಿಪಿಐ ಡಿ. ದುರುಗಪ್ಪ ಅವರು ಸರಕಾರಿ ಸೇವೆಯಲ್ಲಿ ಸಮಾಜದಲ್ಲಿ ತಮ್ಮ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿದಾಗ ಸಮಾಜ ತನ್ನಿಂತಾನೆ ಅಧಿಕಾರಿಗಳನ್ನು ಗುರುತಿಸುತ್ತದೆ ಎಂಬುವುದಕ್ಕೆ ಇವರೇ ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಮುಖಂಡರು, ಚುನಾಯಿತ ಪ್ರತಿನಿಧಿಗಳು, ನಾಗರೀಕರು ಜಗಳೂರು ತಾಲೂಕಿಗೆ ವರ್ಗಾವಣೆಗೊಂಡ ಸಿಪಿಐ ಡಿ.ದುರುಗಪ್ಪ ಅವರಿಗೆ ಸನ್ಮಾನಿಸಿದರು ಮತ್ತು ಹರಪನಹಳ್ಳಿ ಆಗಮಿಸಿರುವ ಸಿಪಿಐ ಕೆ.ಕುಮಾರ್‌ ಅವರನ್ನು ಸ್ವಾಗತಿಸುವ ಮೂಲಕ ಬರಮಾಡಿಕೊಂಡರು.

Advertisement

ಹರಪನಹಳ್ಳಿ ಠಾಣೆ ಪಿಎಸ್‌ಐ ಕೆ. ಶ್ರೀಧರ್‌, ಹಲುವಾಗಲು ಪಿಎಸ್‌ಐ ಸಿ.ಪ್ರಕಾಶ್‌, ಅರಸೀಕೆರೆ ಪಿಎಸ್‌ಐ ಎಂ.ಡಿ.ಸಿದ್ದೇಶ್‌ ಮತ್ತು ಪೊಲೀಸ್‌ ಇಲಾಖೆಯ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next