Advertisement

ಕರ್ತವ್ಯನಿರತ ಪೊಲೀಸ್‌ಗೆ ಕೋವಿಡ್ !

11:16 AM Jun 26, 2020 | Naveen |

ಹರಪನಹಳ್ಳಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕರ್ತವ್ಯಕ್ಕೆ ಹಾಜರಾದ ಪೊಲೀಸ್‌ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದ್ದು, ಪರೀಕ್ಷೆಗೆ ಹಾಜರಾದ ಮಕ್ಕಳಲ್ಲಿ ಆತಂಕ ಶುರುವಾಗಿದೆ.

Advertisement

ಉಚ್ಚಂಗಿದುರ್ಗ ಗ್ರಾಮದ ಶ್ರೀಉತ್ಸವಾಂಬ ಪ್ರೌಢಶಾಲೆಯಲ್ಲಿ ಪರೀûಾ ಕೇಂದ್ರ ತೆರೆಯಲಾಗಿದ್ದು, ಸಾಮಾಜಿಕ ಅಂತರ ಕಾಯ್ದಕೊಳ್ಳುವ ದೃಷ್ಟಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪರೀಕ್ಷೆ ಕೇಂದ್ರಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಇಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರಸೀಕೆರೆ ಠಾಣೆಯ ಹೆಡ್‌ಕಾನ್‌ಸ್ಟೆàಬಲ್‌ ಗೆ ಕೊರೊನಾ ಪಾಸಿಟಿವ್‌ ಬಂದಿದೆ. ಕಳೆದ ವಾರ ಜಿಂದಾಲ್‌ ಆಸ್ಪತ್ರೆಯ ಕರ್ತವ್ಯಕ್ಕೆ ಅವರನ್ನು ನಿಯೋಜಿಸಲಾಗಿತ್ತು. ಅಲ್ಲಿಂದ ಮಂಗಳವಾರ ಅರಸೀಕೆರೆ ಗ್ರಾಮಕ್ಕೆ ಮರಳಿದ್ದರು. ಬುಧವಾರ ವಿಶ್ರಾಂತಿ ಪಡೆದು ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಕರ್ತವ್ಯಕ್ಕೆ ಹಾಜರಾಗಿದ್ದು, ಸಂಜೆ ವೇಳೆಗೆ ಅವರ ವರದಿ ಪಾಸಿಟಿವ್‌ ಬಂದಿದೆ.

ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನದಲ್ಲಿ ಹರಪನಹಳ್ಳಿಯಿಂದ ಉಚ್ಚಂಗಿದುರ್ಗ ಗ್ರಾಮಕ್ಕೆ ಹೋಗಿದ್ದಾರೆ. ಹೀಗಾಗಿ ವಾಹನದಲ್ಲಿ ಜತೆಗೆ ತೆರಳಿದ ನಾಲ್ವರನ್ನು ಹೋಂ ಕ್ವಾರಂಟೈನ್‌ ಮಾಡಲು ನಿರ್ಧರಿಸಲಾಗಿದೆ. ಹೆಡ್‌ಕಾನ್‌ ಸ್ಟೇಬಲ್‌ ಪರೀûಾ ಕೇಂದ್ರದ ಒಳಗಡೆ ಸುತ್ತಾಡದ ಹಿನ್ನೆಲೆಯಲ್ಲಿ ಸ್ಯಾನಿಟೈಜರ್‌ ಮಾಡಿ ಪರೀಕ್ಷೆ ನಡೆಸಲು ತಹಶೀಲ್ದಾರ್‌ ಸೂಚನೆ ನೀಡಿದ್ದಾರೆ ಎಂದು ಬಿಇಒ ವೀರಭದ್ರಯ್ಯ ತಿಳಿಸಿದ್ದಾರೆ. ಹೆಡ್‌ಕಾನ್‌ ಸ್ಟೇಬಲ್‌ ಸಂಪರ್ಕಿತರನ್ನು ಕಿತ್ತೂರು ರಾಣಿ ಚೆನ್ನಮ್ಮ ಕ್ವಾರಂಟೈನ್‌ ಕೇಂದ್ರಕ್ಕೆ ರವಾನಿಸಲಾಗುವುದು ಎಂದು ಸಿಪಿಐ ಕೆ.ಕುಮಾರ್‌ ತಿಳಿಸಿದ್ದಾರೆ.

ಬಳ್ಳಾರಿ ಸಂಜೀವಿನಿ ಆಸ್ಪತ್ರೆಗೆ ಸೋಂಕಿತರನ್ನು ಸ್ಥಳಾಂತರಿಸಲಾಗಿದ್ದು, ಇವರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿರುವವರನ್ನು ಗುರುತಿಸಿ, ಪ್ರಥಮ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ರವಾನಿಸಲಾಗುವುದು. ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ ಮಾಡಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್‌ ತಿಳಿಸಿದ್ದಾರೆ. ಅರಸೀಕೆರೆ ಗ್ರಾಮಕ್ಕೆ ಉಪವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್‌, ತಹಶೀಲ್ದಾರ್‌ ಡಾ.ನಾಗವೇಣಿ, ಡಿವೈಎಸ್ಪಿ ಮಲ್ಲೇಶ ದೊಡ್ಡಮನೆ, ಸಿಪಿಐ ಕೆ.ಕುಮಾರ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next