Advertisement

Har Ghar Tiranga ಅಭಿಯಾನ ಆಂದೋಲನವಾಗಲಿ: ಮೋದಿ

01:11 AM Aug 10, 2024 | Team Udayavani |

ಹೊಸದಿಲ್ಲಿ: ದೇಶಾದ್ಯಂತ ಶುಕ್ರವಾರ “ಹರ್‌ ಘರ್‌ ತಿರಂಗಾ’ ಅಭಿಯಾನ ಆರಂಭವಾಗಿದೆ. ಇದನ್ನು ಸ್ಮರಣೀಯ ಜನಾಂದೋಲನವಾಗಿ ರೂಪಿಸುವಂತೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣ ಗಳಲ್ಲಿ ತಮ್ಮ ಪ್ರೊಫೈಲ್‌ ಚಿತ್ರವನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿರುವ ಮೋದಿ, ಇದನ್ನು ಅನುಸರಿಸುವಂತೆ ದೇಶದ ಜನತೆಗೂ ಮನವಿ ಮಾಡಿದ್ದಾರೆ. ಅಲ್ಲದೇ ರಾಷ್ಟ್ರಧ್ವಜದೊಂದಿಗೆ ತೆಗೆದುಕೊಂಡಿರುವ ಜನತೆ ತಮ್ಮ ಸೆಲ್ಫಿಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳಲು ತಿಳಿಸಿದ್ದಾರೆ. ಜಾಲತಾಣಗಳ ತಮ್ಮೆಲ್ಲ ಖಾತೆಗಳ ಪ್ರೊಫೈಲ್‌ ಚಿತ್ರವನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸಿಕೊಂಡಿದ್ದಾರೆ.

Advertisement

ಹರಿಯಾಣ ಶಾಲೆಗಳಲ್ಲಿನ್ನು ಗುಡ್‌ ಮಾರ್ನಿಂಗ್‌ ಬದಲಿಗೆ ಜೈಹಿಂದ್‌
ಪ್ರಸಕ್ತ ವರ್ಷದ ಸ್ವಾತಂತ್ರ್ಯೋ ತ್ಸವದ ಅನಂತರ ಎಲ್ಲ ಶಾಲೆಗಳಲ್ಲಿ “ಗುಡ್‌ ಮಾರ್ನಿಂಗ್‌’ ಬದಲಿಗೆ “ಜೈ ಹಿಂದ್‌’ ಎಂದು ಶುಭ ಕೋರಬೇಕು ಎಂದು ಹರಿಯಾಣ ಸರಕಾರ ಸುತ್ತೋಲೆ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮತ್ತು ರಾಷ್ಟ್ರೀಯ ಏಕತೆಯ ಅರಿವು ಹಾಗೂ ಗೌರವ ಹೆಚ್ಚಿಸುವ ಗುರಿಯಿದೆ ಎಂದು ಶಾಲಾ ಶಿಕ್ಷಣ ನಿರ್ದೇಶನಾಲಯ ತಿಳಿಸಿದೆ. ಅಲ್ಲದೇ ಜೈ ಹಿಂದ್‌ ಎಂಬ ಘೋಷವಾಕ್ಯವು ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವ ತ್ಯಾಗ ಮಾಡಿದ ವೀರರನ್ನು ನೆನೆಯುವಂತೆ ಮಾಡುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next