Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ ಘರ್ ತಿರಂಗಾ ಅಭಿಯಾನವು ಎಲ್ಲರಲ್ಲೂ ದೇಶಾಭಿಮಾನ ಮೂಡಿಸುವ ವಿನೂತನ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶದ ಎಲ್ಲ ಪ್ರಜೆಗಳೂ ಭಾಗವಹಿಸಬೇಕು. ಎಲ್ಲರಿಗೂ ತಿರಂಗಾ ಧ್ವಜ ದೊರಕಬೇಕೆಂಬ ಉದ್ದೇಶದಿಂದ ಅಂಚೆ ಕಚೇರಿ ಮುಂದೆ ಬಂದಿದೆ. ಕರ್ನಾಟಕ ಪೋಸ್ಟಲ್ ಸರ್ಕಲ್ ಇಲ್ಲಿಯವರೆಗೆ 9,500ಕ್ಕೂ ಹೆಚ್ಚು ಅಂಚೆ ಕಚೇರಿಗಳ ಮೂಲಕ 2.5 ಲಕ್ಷಕ್ಕೂ ಹೆಚ್ಚು ಧ್ವಜಗಳನ್ನು ಮಾರಾಟ ಮಾಡಿದೆ ಎಂದರು.
ರಾಜ್ಯಾದ್ಯಂತ 97 ಅಂಚೆ ಕಚೇರಿಯಲ್ಲಿ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ. ಹ್ಯಾಶ್‌ಟ್ಯಾಗ್‌ಗಳೊಂದಿಗೆ ಇಂಡಿಯಾ ಪೋಸ್ಟ್ ಮತ್ತು ಅಮೃತ್ ಮಹೋತ್ಸವ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡುವ ಮೂಲಕ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಹುದು. ಪ್ರಧಾನ ಅಂಚೆ ಕಚೇರಿಗಳು “ಹರ್ ಘರ್ ತಿರಂಗಾ’ ಗೀತೆಯನ್ನು ಬಿಡುಗಡೆ ಮಾಡುವುದರ ಜತೆಗೆ ಪ್ರಚಾರದ ವೀಡಿಯೋಗಳನ್ನೂ ಪೋಸ್ಟ್ ಮಾಡಲಾಗುತ್ತದೆ. ಪ್ರಭಾತ್ ಪೇರಿ
ರಾಜ್ಯಾದ್ಯಂತ ಅಂಚೆ ವಿಭಾಗಗಳಿಂದ 19 ಸ್ಥಳಗಳಲ್ಲಿ ಪ್ರಭಾತ್ ಪೇರಿ ಆಯೋಜಿಸಲಾಗಿದ್ದು, ಇದರಲ್ಲಿ ಅಂಚೆ ಸಿಬಂದಿ ಮತ್ತು ಸ್ಥಳೀಯ ನಾಗರಿಕರನ್ನು ಒಳಗೊಂಡ 50 ರಿಂದ 75 ಮಂದಿ ಭಾಗವಹಿಸಲಿದ್ದಾರೆ.