Advertisement

ಹೊಸ ಸಂವತ್ಸರ ಸರ್ವರಿಗೆ ಶುಭ ತರಲಿ, ಸರಳವಾಗಿ ಹಬ್ಬ ಆಚರಿಸಿ: ಪ್ರಧಾನಿ ಮೋದಿ

11:17 AM Mar 27, 2020 | Mithun PG |

ನವದೆಹಲಿ: ಇಂದು ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾದ ಯುಗಾದಿಯನ್ನು ಸಂಭ್ರಮ ಸಡಗರದಿಂದ ಆಚರಿಸಬೇಕಾಗಿತ್ತು. ಆದರೇ ಕೋವಿಡ್ 19 ಸಾಮಾನ್ಯ ಜನರನ್ನು ಕೂಡ ಕಂಗಾಲಾಗಿಸಿದೆ. ಹಾಗಾಗಿ ಮನೆಮಂದಿಯೆಲ್ಲಾ ಸೇರಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಹಬ್ಬವನ್ನು ಸರಳವಾಗಿ ಆಚರಿಸಬೇಕಾದ ಅನಿವಾರ್ಯತೆಯಿದೆ.

Advertisement

ಯುಗಾದಿ ಹಬ್ಬದ ಪ್ರಯುಕ್ತ  ಪ್ರಧಾನಿ ಮೋದಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಭಾರತದಾದ್ಯಂತ ಹಲವಾರು ಹಬ್ಬಗಳನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತೇವೆ. ಹಾಗೆಯೇ ಸಾಂಪ್ರದಾಯಿಕವಾಗಿ ಯುಗಾದಿ ಭಾರತೀಯರಿಗೆ ಹೊಸ ವರುಷ ಎನಿಸಿಕೊಳ್ಳುತ್ತದೆ.  ಹಾಗಾಗಿ ದೇಶದ ಎಲ್ಲಾ ಜನರಿಗೆ ಯುಗಾದಿಯ ಶುಭ ಕೋರುತ್ತೇನೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ , ಸಂತೋಷ, ಜೀವನದಲ್ಲಿ ಏಳಿಗೆ ಪ್ರಾಪ್ತಿಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ದೇಶದಲ್ಲಿ ಕೋವಿಡ್ 19 ಭೀತಿ ಸೃಷ್ಟಿಸಿರುವಾಗಲೇ ನಾವು ಯುಗಾದಿ ಹಬ್ಬಕ್ಕೆ ಸಾಕ್ಷಿಯಾಗಿದ್ದೇವೆ. ಹಾಗಾಗಿ ನಾವು ಪ್ರತಿವರ್ಷದಂತೆ ಈ ವರ್ಷ ಹಬ್ಬವನ್ನು ಆಚರಿಸಲಾಗುವುದಿಲ್ಲ. ಸರಳವಾಗಿ ಆಚರಿಸಿ. ಮಾತ್ರವಲ್ಲದೆ ದೃಢನಿರ್ಧಾರ ಮಾಡಿ ಕೋವಿಡ್ 19 ವಿರುದ್ಧ ಹೋರಾಡಿ ಎಂದಿದ್ದಾರೆ.

ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು  ಕೂಡ ಟ್ವೀಟ್ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ಹೊಸ ಸಂವತ್ಸರ ಸರ್ವರಿಗೆ ಶುಭವನ್ನು ತರಲಿ. ಕೋವಿಡ್ 19 ಸೋಂಕು ತಡೆಗಟ್ಟಲು ಮನೆಗಳಲ್ಲಿಯೇ ಯುಗಾದಿ ಆಚರಿಸಿ ಎಂದು ಕರೆನಿಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next