Advertisement

ಟೂ ಬಿಟ್ಟವರ ಖುಷಿ! ಪಾಳ್ಯಗಾರರ ಸಂತೋಷ ಮತ್ತು ಸಂಭ್ರಮ

05:15 AM Jul 21, 2017 | Team Udayavani |

2012 ರಲ್ಲಿ “ದಂಡುಪಾಳ್ಯ’ ಚಿತ್ರ ಯಶಸ್ಸು ಪಡೆದಿತ್ತು. 2017 ರಲ್ಲಿ ಮುಂದುವರೆದ ಭಾಗ “2′ ಬಂದಿದೆ. ಚಿತ್ರಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ, ಜನರು ಸ್ವೀಕರಿಸಿದ್ದಾರೆ, ಪ್ರಯತ್ನ ಸಾರ್ಥಕ ಎಂಬುದನ್ನು ಹೇಳಿಕೊಳ್ಳಲೆಂದೇ ಚಿತ್ರತಂಡದ ಸಮೇತ ಪತ್ರಕರ್ತರ ಮುಂದೆ ಬಂದಿದ್ದ ನಿರ್ದೇಶಕ ಶ್ರೀನಿವಾಸರಾಜು,ಮೊದಲು ಮೈಕ್‌ ಹಿಡಿದು ಮಾತಿಗಿಳಿದರು.

Advertisement

“ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೆ. ಅದರ ಪ್ರತಿಫ‌ಲ ಸಿಕ್ಕಿದೆ. ಆರಂಭದಲ್ಲಿ ಎಲ್ಲರೂ ಅದೊಂದು ಕ್ರೈಮ್‌ ಸಿನಿಮಾ. ಎಲ್ಲವನ್ನೂ ಭಯಾನಕವಾಗಿ ತೋರಿಸುತ್ತಾರೆ ಅಂದ್ರು. ಮೊದಲ ಚಿತ್ರಕ್ಕೂ ಇದೇ ಮಾತು ಬಂದಿತ್ತು. ಆ ಚಿತ್ರ ಗೆಲುವು ಕೊಡು¤. ಈ ಚಿತ್ರದ ಬಗ್ಗೆಯೂ ಮಾತಾಡಿದ್ದರು. ಈಗ ಸಿನಿಮಾ ನೋಡಿದವರು ಮೆಚ್ಚುಗೆ ಪಡುತ್ತಿದ್ದಾರೆ. ಇಲ್ಲಿ, ಎಲ್ಲವೂ ನನ್ನೊಬ್ಬನಿಂದಲೇ ಆಗಿಲ್ಲ. ಕಲಾವಿದರು, ತಂತ್ರಜ್ಞರು, ಚಿತ್ರತಂಡ ಹಾಗೂ ಮಾಧ್ಯಮ ಇವರೆಲ್ಲರ ಸಹಕಾರ, ಪ್ರೋತ್ಸಾಹ “2′ ಚಿತ್ರದ ಗೆಲುವಿಗೆ ಕಾರಣ. ಮೊದಲ ಚಿತ್ರಕ್ಕೂ ಈ “2′ ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ.
ಬಿಡುಗಡೆ ದಿನ ಇದ್ದ ಗಳಿಕೆ ಎರಡು ಮತ್ತು ಮೂರನೇ ದಿನಕ್ಕೆ ಡಬ್ಬಲ್‌ ಆಗಿತ್ತು. ಸೋಮವಾರವೂ ಅದು ಸ್ಟಡಿಯಾಗಿಯೇ ಇದೆ’ ಎಂದರು ಶ್ರೀನಿವಾಸರಾಜು.

ನಿರ್ಮಾಪಕ ವೆಂಕಟ್‌ಗೆ ಜನ ಚಿತ್ರ ಒಪ್ಪಿಕೊಂಡಿದ್ದಕ್ಕೆ ಖುಷಿಯಾಗಿದೆಯಂತೆ. “ಇಂತಹ ಚಿತ್ರದಲ್ಲಿ ಕಾಮಿಡಿ,
ಸೆಂಟಿಮೆಂಟ್‌ ಇರಲ್ಲ ಎಂಬ ಮಾತುಗಳಿದ್ದವು. ಆದರೆ, ಇಲ್ಲಿ ಹಾಸ್ಯವೂ ಇದೆ, ಸೆಂಟಿಮೆಂಟ್‌ ಕೂಡ ಇದೆ. ಗ್ಯಾಂಗ್‌ನವರಿಗೆ ಪೊಲೀಸ್‌ನವರು ಕೊಡುವ ಹಿಂಸೆ ಹೇಗಿರುತ್ತೆ ಎಂಬ ಕುರಿತ ಸಿನಿಮಾ ಇದು. ಅದು ನೋಡುಗರನ್ನು ಖುಷಿಗೊಳಿಸಿದೆ. ಚಿತ್ರದ ಗಳಿಕೆಯೂ ಹೆಚ್ಚಿದೆ’ ಅಂದರು ವೆಂಕಟ್‌.

ಪೂಜಾ ಗಾಂಧಿಗೂ ಸಹಜವಾಗಿಯೇ ಸಿನಿಮಾ ಯಶಸ್ಸು ನೋಡಿ ಖುಷಿಯಾಗಿದೆಯಂತೆ. “ಮೊದಲ ಚಿತ್ರ ಬಂದಾಗ, ಎರಡು ಹಾಗೂ ಮೂರು ಚಿತ್ರ ಮಾಡ್ತೀವಿ ಅಂದುಕೊಂಡಿರಲಿಲ್ಲ. ನನಗೊಂದು ಕುತೂಹಲವಿತ್ತು. “2′ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆ ಅಂತ. ಇಲ್ಲಿ ಎಮೋಷನಲ್‌ ಅಂಶಗಳು ನಾಟುತ್ತವೆ.

“ದಂಡುಪಾಳ್ಯ’ ಮಾಡಿದಾಗ ಹೆಣ್ಮಕ್ಕಳು ನೋಡಲ್ಲ ಅನ್ನುತ್ತಿದ್ದರು. ಆದರೆ, “2′ ಚಿತ್ರವನ್ನು ಹೆಣ್ಮಕ್ಕಳು ನೋಡುತ್ತಿದ್ದಾರೆ. ಇದು ನನಗೆ ಖುಷಿ ನೀಡಿದೆ. ಈ ಹತ್ತು ವರ್ಷದ ನನ್ನ ಸಿನಿ ಜರ್ನಿಯಲ್ಲಿ ಈ ಎರಡು ಸಿನಿಮಾಗಳು ಹೊಸ ಇಮೇಜ್‌ ತಂದುಕೊಟ್ಟಂತಹ ಚಿತ್ರಗಳು’ ಅಂದರು ಪೂಜಾಗಾಂಧಿ. ಸಂಜನಾಗೆ ಎಲ್ಲರೂ ಗ್ಲಾಮರ್‌ ಪಾತ್ರವನ್ನೇ ಹುಡುಕಿ ಕೊಡುತ್ತಿದ್ದರಂತೆ. ಆದರೆ, “2′ ಚಿತ್ರದಲ್ಲಿ ಅವರಿಗೆ ಸಿಕ್ಕ ಪಾತ್ರ ಆ ಗ್ಲಾಮರ್‌ಗೆ ಬ್ರೇಕ್‌ ಕೊಟ್ಟಿದೆಯಂತೆ. ಚಿತ್ರದಲ್ಲೊಂದು ದೃಶ್ಯಕ್ಕೆ ಸೆನ್ಸಾರ್‌ ಕತ್ತರಿ ಹಾಕಿದೆ. ಆ ದೃಶ್ಯ ಚಿತ್ರದ ಹೈಲೈಟ್‌ ಆಗಿತ್ತು. ಆ ದೃಶ್ಯದಲ್ಲಿ ಸಿಜಿ ಮೂಲಕ “ಬೆತ್ತಲೆ’ ಮಾಡಲಾಗಿದೆ. ಅದು ಸಿನಿಮಾದ ಪ್ರಮುಖ ಭಾಗವಾಗಿದ್ದರೂ, ಅದನ್ನು ಸೆನ್ಸಾರ್‌ ಮಂಡಳಿ ಬಿಟ್ಟಿಲ್ಲ. ಇಷ್ಟು ದಿನ ಮಾಡಿದ ಪಾತ್ರಗಳಿಗಿಂತಲೂ ಇಲ್ಲಿ ಭಿನ್ನವಾಗಿರುವಂತಹ ಪಾತ್ರ ಸಿಕ್ಕಿದೆ ಅಂದರು ಸಂಜನಾ. ಉಳಿದಂತೆ ಕರಿಸುಬ್ಬು, ಡ್ಯಾನಿ ಕುಟ್ಟಪ್ಪ, ಮುನಿ, ಜಯದೇವ್‌ ಇವರೆಲ್ಲರೂ ತಮ್ಮ ಅನುಭವ ಹಂಚಿಕೊಳ್ಳುವ ಹೊತ್ತಿಗೆ ಆ ಸಕ್ಸಸ್‌
ಮೀಟ್‌ಗೂ ತೆರೆಬಿತ್ತು.

Advertisement

– ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next