ವಾಷಿಂಗ್ಟನ್: ಭಾರತದ 75ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಭ ಹಾರೈಸಿದ್ದಾರೆ.
ಮಹಾತ್ಮಾ ಗಾಂಧಿಯವರ ಮಾರ್ಗದರ್ಶನದ ಸತ್ಯ ಮತ್ತು ಶಾಂತಿಯತೆಯ ದೀರ್ಘ ಪ್ರಯಾಣದ ಮೂಲಕ 1947ರ ಆ.15ರಂದು ಸ್ವಾತಂತ್ರ್ಯ ವನ್ನು ಸಾಧಿಸಿಕೊಂಡಿತು.
ಪ್ರಜಾಪ್ರಭುತ್ವದ ಮೂಲಕ ಜನರ ಇಚ್ಛೆಯನ್ನು ಗೌರವಿಸುವ ಬದ್ಧತೆಯು ಜಗತ್ತಿಗೆ ಸ್ಫೂರ್ತಿ ನೀಡುತ್ತಲೇ ಇದೆ. ನಮ್ಮ ದೇಶಗಳ ನಡುವಿನ ವಿಶೇಷ ಬಾಂಧ್ಯವಕ್ಕೆ ಆಧಾರವಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಸಂಸತ್‌ನಲ್ಲಿ ಉಪಯುಕ್ತ ಚರ್ಚೆಗಳಿಲ್ಲ: ನ್ಯಾಯಮೂರ್ತಿ ರಮಣ ವಿಷಾದ
“ಒಂದು ವರ್ಷದಲ್ಲಿ ಕೊರೊನಾ ವಿರುದ್ಧ ಹೋರಾಡಲು ಉಭಯ ದೇಶಗಳು ಒಟ್ಟಾಗಿವೆ. ಜಪಾನ್ ಮತ್ತು ಆಸ್ಟ್ರೇಲಿಯಾ ಕೂಡ ಜತೆಯಾಗಿ ನಿಂತಿವೆ. ಎರಡು ದೇಶಗಳ ಶ್ರೇಷ್ಠ ಮತ್ತು ವೈವಿಧ್ಯಮಯ ಪ್ರಜಾಪ್ರಭುತ್ವಗಳು ವಿಶ್ವದ ಮೂಲೆ ಮೂಲೆಯ ಜನರಿಗೂ ತಲುಪಬಲ್ಲದು’ ಎಂದು ಬೈಡನ್ ಹೇಳಿದ್ದಾರೆ.