Advertisement

ಬಿಷಪ್‌ ಅಲೋಶಿಯಸ್‌ರಿಗೆ ಹುಟ್ಟು ಹಬ್ಬದ ಶುಭಾಶಯ

12:20 PM Jun 22, 2018 | |

ಮಹಾನಗರ: ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್‌ ಅವರು ಗುರುವಾರ ಕೊಡಿಯಾಲಬೈಲ್‌ ನಲ್ಲಿರುವ ಬಿಷಪ್ಸ್‌ ಹೌಸ್‌ಗೆ ಭೇಟಿ ನೀಡಿ ಬಿಷಪ್‌ ವಂ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರಿಗೆ 77ನೇ ಜನ್ಮ ದಿನಾಚರಣೆಯ ಶುಭಾಶಯ ಕೋರಿದರು.

Advertisement

ಬಿಷಪ್‌ ಅವರಿಗೆ ಪುಷ್ಪಗುಚ್ಛ ನೀಡಿ ಹಾರ ಹಾಕಿ ಫಲ ಕಾಣಿಕೆಯನ್ನು ನೀಡಿದ ಸಚಿವರು ಬಿಷಪ್‌ ಅವರ ಪ್ರತಿಯೊಂದು ಕೆಲಸಗಳೂ ಶುಭಪ್ರದವಾಗಲಿ ಎಂದರು. ಅಲ್ಲದೆ ತನಗೆ ಬಿಷಪ್‌ ಅವರು ನಿರಂತರ ಮಾರ್ಗದರ್ಶನ ನೀಡುವಂತೆ ಸಚಿವರು ವಿನಂತಿಸಿದರು.

ತಾನು ಈ ಹಿಂದೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವನಾಗಿದ್ದಾಗ ತನ್ನನ್ನು ಹಲವಾರು ಕಾರ್ಯಕ್ರಮಗಳಿಗೆ ಬಿಷಪ್‌ ಅವರು ಆಹ್ವಾನ ನೀಡಿರುವುದನ್ನು ನೆನಪಿಸಿದ ಸಚಿವ ಖಾದರ್‌ ಈ ಬಾರಿ ಚುನಾವಣೆಯಲ್ಲಿ ಗೆದ್ದಾಗ ತಾನು ಬಿಷಪ್ಸ್‌ ಹೌಸ್‌ಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೆ. ನಗರಾಭಿವೃದ್ಧಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಿಷಪ್‌ ಅವರನ್ನು ಭೇಟಿಯಾಗಲು ಬಯಸಿದ್ದೆನು. ಇದೀಗ ಅವರ ಜನ್ಮ ದಿನದಂದೇ ಭೇಟಿ ಮಾಡಿ ಶುಭಾಶಯ ಸಲ್ಲಿಸಲು ಸಂತಸವಾಗುತ್ತದೆ ಎಂದರು. ತಾ. ಪಂ. ಅಧ್ಯಕ್ಷ ಮಹಮದ್‌ ಮೋನು, ಪಿಯುಸ್‌ ಮೊಂತೇರೊ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next