Advertisement

Happy Birthday ಸುನೀಲ್‌ ಗಾವಸ್ಕರ್ @ 75

01:29 AM Jul 11, 2024 | Team Udayavani |

ಮುಂಬಯಿ: ದಾಖಲೆಗಳ ವೀರ, ಲಿಟ್ಲ ಮಾಸ್ಟರ್‌, 70-80ರ ದಶಕದ ಕ್ರಿಕೆಟ್‌ ಹೀರೋ, ಅಂಕಣಕಾರ, ಹಾಲಿ ಕಮೆಂಟೇಟರ್‌, ಇನ್ನೂ ಯುವಕರನ್ನು ನಾಚಿಸುವ ರೀತಿಯಲ್ಲಿರುವ ಸುನೀಲ್‌ ಗಾವಸ್ಕರ್‌ ಬುಧವಾರ ತಮ್ಮ ಬಾಳ್ವೆಯಲ್ಲಿ ಮಹತ್ವದ ಮೈಲುಗಲ್ಲೊಂದನ್ನು ನೆಟ್ಟರು. 75ನೇ ವಸಂತಕ್ಕೆ ಕಾಲಿಟ್ಟರು. ಈ ಸಂಭ್ರಮದ ಗಳಿಗೆಗೆ ಎಲ್ಲೆಡೆಯಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದು ಬಂದಿದೆ.

Advertisement

“ಹ್ಯಾಪ್ಪಿ ಬರ್ತ್‌ಡೇ ಸುನೀಲ್‌ ಗಾವಸ್ಕರ್‌! ಅತ್ಯಂತ ಸುಲಭವಾಗಿ ಆಕ್ರಮಣಕಾರಿ ಹಾಗೂ ರಕ್ಷಣಾತ್ಮಕ ಹೊಡೆತಗಳೆರಡನ್ನೂ ಬಾರಿಸುವ ನಿಮ್ಮ ಬ್ಯಾಟಿಂಗ್‌ ತಂತ್ರಗಾರಿಕೆ ಪರಿಪೂರ್ಣತೆಗೆ ಸಾಕ್ಷಿ. ಶುಭ ಹಾರೈಕೆಗಳು. ಅದ್ಭುತ ವರ್ಷ ನಿಮ್ಮದಾಗಲಿ’ ಎಂಬುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹಾರೈಸಿದ್ದಾರೆ.

ಆರ್‌ಸಿಬಿ, ಡೆಲ್ಲಿ ಫ್ರಾಂಚೈಸಿ ಕೂಡ ಸನ್ನಿಗೆ ಜನ್ಮದಿನದ ಶುಭಾಶಯ ಕೋರಿದೆ. ಹಾಲಿ, ಮಾಜಿ ಆಟಗಾರರು “ದ ಗ್ರೇಟ್‌ ಗಾವಸ್ಕರ್‌’ಗೆ 75ನೇ ವರ್ಷದ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

1949ರಲ್ಲಿ ಜನಿಸಿದ ಗಾವಸ್ಕರ್‌, 1971ರ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆ ಟೆಸ್ಟ್‌ ಕ್ರಿಕೆಟಿಗೆ ಅಡಿಯಿರಿಸಿದ್ದರು. ಅಂದು ವಿಂಡೀಸಿನ ಅತ್ಯಂತ ಘಾತಕ ಹಾಗೂ ಭಯಾನಕ ವೇಗದ ಪಡೆಯನ್ನು ದಿಟ್ಟ ರೀತಿಯಲ್ಲಿ ಎದುರಿಸಿದ ಗಾವಸ್ಕರ್‌, ಒಂದು ದ್ವಿಶತಕ, 3 ಶತಕ, 3 ಅರ್ಧ ಶತಕಗಳ ನೆರವಿನಿಂದ 774 ರನ್‌ ಪೇರಿಸಿ ಅಸಾಮಾನ್ಯ ಸಾಧನೆಗೈದ ಸಾಹಸಿ. ಟೆಸ್ಟ್‌ ಇತಿಹಾಸದಲ್ಲಿ 10 ಸಾವಿರ ರನ್‌ ಬಾರಿಸಿದ ಮೊದಲ ಆಟಗಾರನೆಂಬುದು ಇವರ ಹಿರಿಮೆ. 1983ರ ಏಕದಿನ ವಿಶ್ವಕಪ್‌ ವಿಜೇತ ತಂಡದ ಆಟಗಾರನೂ ಆಗಿದ್ದ ಗಾವಸ್ಕರ್‌, 1987ರಲ್ಲಿ ಪಾಕಿಸ್ಥಾನ ವಿರುದ್ಧ ಕೊನೆಯ ಟೆಸ್ಟ್‌ ಆಡಿದರು.

Advertisement

Udayavani is now on Telegram. Click here to join our channel and stay updated with the latest news.

Next