Advertisement

ಹುಟ್ಟು ಹಬ್ಬದ ಶುಭಾಶಯಗಳು; ಗಾನಕೋಗಿಲೆ ಲತಾಮಂಗೇಶ್ಕರ್ @90 

09:37 AM Sep 29, 2019 | Nagendra Trasi |

ನವದೆಹಲಿ: ಬಾಲಿವುಡ್ ನ ಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಇಂದು 90ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಮೆಲೋಡಿ ಹಾಡುಗಳ ಮೂಲಕ ಲಕ್ಷಾಂತರ ಸಂಗೀತ ಪ್ರೇಮಿಗಳ ಮನಗೆದ್ದ ಲತಾ ಇಂದಿಗೂ ಹೊಸ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ.

Advertisement

ಸತತ ಏಳು ದಶಕಗಳ ಕಾಲ ಸಂಗೀತಲೋಕ ಆಳಿದ ಲತಾ ಮಂಗೇಶ್ಕರ್ ದೇಶದ ಪ್ರತಿಷ್ಠಿತ ಭಾರತ ರತ್ನ, ದಾದಾ ಸಾಹೇಬ್ ಫಾಲ್ಕೆ, ಪದ್ಮ ವಿಭೂಷಣ್, ಪದ್ಮಭೂಷಣ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಲತಾ ಮಂಗೇಶ್ಕರ್ 1929ರಲ್ಲಿ ಜನಿಸಿದ್ದರು. ಮರಾಠಿ ಗಾಯಕರಾಗಿದ್ದ ಪಂಡಿತ್ ದೀನನಾಥ್ ಮಂಗೇಶ್ಕರ್ ಹಾಗೂ ಸೇವಂತಿ ದಂಪತಿಯ ಹಿರಿಯ ಪುತ್ರಿ ಲತಾ. ತನ್ನ 5ನೇ ವಯಸ್ಸಿನಲ್ಲಿಯೇ ತಂದೆಯಿಂದ ಸಂಗೀತ ಪಾಠ ಕಲಿತಿದ್ದ ಲತಾ ಮಂಗೇಶ್ಕರ್ 1942ರಲ್ಲಿಯೇ ತಮ್ಮ ಸಂಗೀತ ಯಾನವನ್ನು ಆರಂಭಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next