Advertisement

ಮೌನದ ಭಾಷೆಯಲ್ಲಿದೆ ಬದುಕಿನ ಸಂತೋಷ

12:00 PM Apr 29, 2019 | Naveen |

ಮೌನದ ಭಾಷೆ ಅರ್ಥಮಾಡಿಕೊಳ್ಳು ವುದನ್ನು ತಿಳಿದವನಿಗೆ ಜಗತ್ತು ನಿಜಕ್ಕೂ ತುಂಬಾ ಸುಂದರವಾಗಿ ಕಾಣುತ್ತದೆ. ಇಲ್ಲಿನ ಪ್ರತಿಯೊಂದು ವಸ್ತು ವಿಚಾರದಲ್ಲಿಯೂ ಅಚ್ಚರಿಗಳನ್ನು ಕಾಣುತ್ತಾ ಕ್ಷಣ ಕ್ಷಣವೂ ಆನಂದವನ್ನು ಅನುಭವಿಸುತ್ತಾನೆ. ವಿಸ್ಮಯದ ಗೂಡಾಗಿರುವ ಈ ಭೂಮಿಯ ನವಿರು ಘಮ ಸವಿಯುವ ಮೂಲಕ ಹೆಚ್ಚು ಆನಂದವನ್ನು ಸೃಷ್ಟಿಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾನೆ. ಇವೆಲ್ಲದರ ಹಿಂದೆಯೂ ಒಂದು ಮೌನವಿದೆ. ಶಬ್ಧಾತೀತವಾದ ನವಿರಾದ ರೋಮಾಂಚನವಿದೆ. ಆಸ್ವಾದಿಸಲು ಕಲಿತವನಿಗೆ ಇದಕ್ಕಿಂತ ಹೆಚ್ಚಿನ ಸುಖ ಪ್ರಪಂಚದಲ್ಲಿ ಬೇರೆಲ್ಲಿಯೂ ಸಿಗುವುದೇ ಅಸಾಧ್ಯವೇನೋ.

Advertisement

ಇಲ್ಲಿರುವ ಪ್ರತಿಯೊಂದು ಜೀವಿಗೂ ತನ್ನದೇ ಆದ ಒಂದು ಪುಟ್ಟ ಭಾವನಾ ಲೋಕವಿದೆ. ಅಲ್ಲಿ ನೋವು-ನಲಿವುಗಳೆಂಬ ಎರಡು ಭಾವಗಳೂ ಜೀವ ಪಡೆಯುತ್ತವೆ. ಜೀವನ ಪಾಠವೆಂಬ ಅನುಭವಗಳ ಮೂಲಕ ನಿಶ್ಶಬ್ಧದಲ್ಲಿಯೇ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಮಾಡುವ ಕೆಲಸ, ಸರಿ ತಪ್ಪುಗಳು, ಇನ್ನೊಬ್ಬರನ್ನು ಪ್ರೀತಿಸುವ ಗುಣ, ಅಶಕ್ತರಿಗೆ ಮಡುವ ಸಹಾಯ ಇವೆಲ್ಲವೂ ಮೌನದ ನಡುವೆಯೇ ನಮ್ಮ ಪ್ರಭಾವಳಿಯನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತದೆ ಎಂದರೆ ತಪ್ಪಾಗಲಾರದು. ಪರೋಪಕಾರ ಜೀವನ, ಎಲ್ಲರನ್ನೊಳಗೊಂಡು ಜೀವಿಸುವ ಕಲೆ, ಇನ್ನೊಬ್ಬರ ಜೀವನದಲ್ಲಿ ಭರವಸೆ ಮೂಡಿಸುವ ಕೆಲಸಗಳೆ ಸದಾ ಕಲ ನಮ್ಮ ನಿಶ್ಶಬ್ಧದಲ್ಲಿಯೂ ಇತರರಿಗೆ ಶಬ್ಧವಾಗುವಂತೆ ಮಾಡಿ ಬಿಡುತ್ತದೆ.

ನಮ್ಮ ಆತ್ಮಗೌರವದ ಜತೆಗೆ, ವ್ಯಕ್ತಿತ್ವವನ್ನು ಜನರಿಗೆ ಹೆಚ್ಚು ಆಪ್ತವಾಗುವಂತೆ, ಮತ್ತಷ್ಟು ಎತ್ತರಕ್ಕೆ ಏರುವಂತೆ ಮಾಡುವ ಕೆಲಸವನ್ನು ಮೌನದೊಳಗಿನ ಅರ್ಥಪೂರ್ಣ ಕಾರ್ಯವೇ ಮಾಡಿ ಬಿಡುತ್ತದೆ. ಇದಕ್ಕೆ ನಾವು ಕಲಿಯಬೇಕಾದ ಮುಖ್ಯ ಅಂಶ ಪ್ರಕೃತಿಯೊಂದಿಗೆ ಒಂದಾಗುವ, ಆ ಮೂಲಕ ಎಲ್ಲರನ್ನೂ ಒಳಗೊಳ್ಳುವುದು, ಏಕಾಂತದಲ್ಲಿಯೂ ಕ್ರಿಯಾಶೀಲತೆಯನ್ನು ಅಳವಡಿಸಿಕೊಳ್ಳುವುದು. ಈ ಪಾಠ ನಮಗೆ ಸಿಗುವುದು ನಿಸರ್ಗದಿಂದ.

ಹರಿಯುವ ನೀರು ಬದುಕಿನ ನಿರಂತರತೆಯನ್ನು ಸೂಚಿಸಿದರೆ, ಬಾನಕ್ಕಿಗಳು ಜೀವನದಲ್ಲಿ ಎತ್ತರಕ್ಕೆರುವ ಛಲವನ್ನು, ಹಚ್ಚ ಹಸುರು ಸದಾ ಕಾಲ ಚೈತನ್ಯದಿಂದ ನಳನಳಿಸುವುದನ್ನು ಹೇಳಿಕೊಟ್ಟರೆ, ಪ್ರಾಣಿಗಳು ನಮ್ಮವರೊಂದಿಗೆ ಈ ಕ್ಷಣವನ್ನು ಆನಂದಿಸುವ ತಣ್ತೀ ವನ್ನು ಸಾರುತ್ತವೆ. ಇದು ಬದುಕಿಗೆ ಬಹುದೊಡ್ಡ ಪಾಠ.

ಭುವನ ಬಾಬು, ಪುತ್ತೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next