Advertisement

ಖುಷಿಯಿಂದ ಮೈತ್ರಿ ಸರ್ಕಾರ ರಚಿಸಿಲ್ಲ

06:00 AM Jun 18, 2018 | Team Udayavani |

ಬೀದರ: “”ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಉದ್ದೇಶದಿಂದ ಮೈತ್ರಿ ಸರ್ಕಾರ ರಚಿಸಲಾಗಿದೆಯೇ ಹೊರತು ಖುಷಿಯಿಂದ ಸರ್ಕಾರ ರಚಿಸಿಲ್ಲ” ಎಂದು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Advertisement

ನಗರದ ಗಣೇಶ ಮೈದಾನದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ನೂತನ ಸಚಿವ ರಾಜಶೇಖರ ಪಾಟೀಲ ಹಾಗೂ ವಿಧಾನ ಪರಿಷತ್‌ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗುವ ಸ್ಥಿತಿ ಯಾಕೆ ಬಂತು? ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಯಾಕೆ ಬರಲಿಲ್ಲ? ರಾಜ್ಯದ ಜನರು ಯಾಕೆ ಈ ಶಿಕ್ಷೆ ನೀಡಿದ್ದಾರೆ ಎಂಬುದು ಇಂದಿಗೂ ನನಗೆ ಕಾಡುತ್ತಿದೆ ಎಂದರು.

ಕಾಂಗ್ರೆಸ್‌ ಪಕ್ಷ ನನಗೆ 11ಚುನಾವಣೆಗಳಲ್ಲಿ ಟಿಕೆಟ್‌ ನೀಡಿದ್ದು, ಎಲ್ಲ ಚುನಾವಣೆಗಳಲ್ಲೂ ಗೆಲುವು ಸಾಧಿ ಸಿದ್ದೇನೆ ಎಂದ ಅವರು, ಇನ್ನೊಂದು ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪ ರ್ಧಿಸುವುದಾಗಿ ಘೋಷಿಸಿದರು.

ನಾನೂ ಸಚಿವನಾದರೆ ಆಶ್ಚರ್ಯವಿಲ್ಲ
ಮೈತ್ರಿ ಸರ್ಕಾರದಲ್ಲಿ ನಾನೂ ಕೂಡ ಸಚಿವನಾಗಿ ಆಯ್ಕೆಯಾದರೆ ಆಶ್ಚರ್ಯ ಪಡಬೇಕಿಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್‌ ಹೇಳಿದರು. ನಗರದ ಗಣೇಶ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ಈಶ್ವರ ಖಂಡ್ರೆ ಸಚಿವರಾಗಿದ್ದರು. ಇದೀಗ ರಾಜಶೇಖರ ಪಾಟೀಲ ಸಚಿವರಾಗಿದ್ದಾರೆ. ಮುಂದೆ ರಹೀಮ್‌ ಖಾನ್‌ ಆಗಬಹುದು. ಇದೇ ಮೈತ್ರಿ ಸರ್ಕಾರದಲ್ಲಿ ಮುಂದೆ ನಾನೂ ಸಚಿವನಾಗಬಹುದು. ಎರಡೂ¾ರು ಬಾರಿ ಗೆದ್ದವರೇ ಸಚಿವರಾಗಬೇಕು ಎಂಬ ನಿಯಮವೇನಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next