ಹರಪನಹಳ್ಳಿ: ಪಟ್ಟಣದ ಜ್ಞಾನಗಂಗೋತ್ರಿ ಆವರಣದಲ್ಲಿ ಡಿ. 24 ತ್ತು 25ರಂದು ಲಿಂ. ಚಂದ್ರಮೌಳೀಶ್ವರ ಶಿವಾಚಾರ್ಯ ಶ್ರೀಗಳ 5ನೇ ವಾರ್ಷಿಕ ಪುಣ್ಯಾರಾಧನೆ ಹಾಗೂ ವರಸದ್ಯೋಜಾತ ಶ್ರೀಗಳ ಚತುರ್ಥ ವಾರ್ಷಿಕೋತ್ಸವ ಮತ್ತು ಟಿಎಂಎಇ ಸಂಸ್ಥೆಯ ಸುವರ್ಣಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತೆಗ್ಗಿನಮಠ ಸಂಸ್ಥಾನದ ಆಡಳಿತಾಧಿಕಾರಿ ಟಿ.ಎಂ.ಚಂದ್ರಶೇಖರಯ್ಯ ತಿಳಿಸಿದರು.
ಪಟ್ಟಣದ ತೆಗಿನಮಠ ಆವರಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 25ರಂದು ನಡೆಯಲಿರುವ ಟಿಎಂಎಇ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ರಂಭಾಪುರಿ ಮತ್ತು ಉಜ್ಜಯನಿ ಪೀಠಾಧ್ಯಕ್ಷರ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಂಸ್ಥೆ ಲಾಂಛನ ಅನಾವರಣಗೊಳಿಸಲಿದ್ದಾರೆ.
ಶಾಸಕ ಜಿ. ಕರುಣಾಕರರೆಡ್ಡಿ ಅಧ್ಯಕ್ಷತೆ ವಹಿಸಲಿದ್ದು, ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗೀಶ್ವರಸ್ವಾಮೀಜಿ ನುಡಿನಮನ ಸಲ್ಲಿಸಲಿದ್ದಾರೆ. ವರಸದ್ಯೋಜಾತ ಸ್ವಾಮೀಜಿ, ಗೃಹ ಸಚಿವ ಬಸವರಾಜ ಬೊಮ್ಮಯಿ, ಸಚಿವರಾದ ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆನಂದಸಿಂಗ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿ. 24ರಂದು ಮಧ್ಯಾಹ್ನ 12 ಗಂಟೆಗೆ ವಿವಿಧ ವಾದ್ಯ, ಕಲಾ ತಂಡಗಳೊಂದಿಗೆ ಲಿಂ. ಪೂಜ್ಯರ ಭಾವಚಿತ್ರ ಮೆರವಣಿಗೆ ಮಠದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜ್ಞಾನ ಗಂಗೋತ್ರಿ ಆವರಣ ತಲುಪಲಿದೆ. ಸಂಜೆ 4ಗಂಟೆಗೆ ಚಳಗೇರ ವೀರಸಂಗಮೇಶ್ವರ ಮತ್ತು ವರಸದ್ಯೋಜಾತ ಶ್ರೀಗಳ ಸಾನ್ನಿಧ್ಯದಲ್ಲಿ ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಕರುಣಾಕರರೆಡ್ಡಿ ಅಧ್ಯಕ್ಷತೆವಹಿಸಲಿದ್ದಾರೆ. ಸಂಸದರಾದ ದಾವಣಗೆರೆ ಜಿ.ಎಂ. ಸಿದ್ದೇಶ್ವರ್, ಬಳ್ಳಾರಿ ವೈ.ದೇವೇಂದ್ರಪ್ಪ, ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ,
ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವಿಶ್ವನಾಥ ಪಿ.ಹಿರೇಮಠ, ಸರ್ಕಾರದ ನಿವೃತ್ತ ಕಾರ್ಯದರ್ಶಿ ಡಾ| ಸಿ. ಸೋಮಶೇಕರ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಾಗಲಕೋಟೆ ಎಸ್.ಆರ್.ನವಲಿ ಹಿರೇಮಠ- ಜಂಗಮಸಿರಿ, ಬೆಂಗಳೂರು ಡಾ| ಟಿ.ಎಂ. ಕೊಟ್ರೇಶ್- ವಿಜ್ಞಾನ ಸಿರಿ, ಬೆಂಗಳೂರು ವಕೀಲ ಎಂ.ಎಂ. ಸ್ವಾಮಿ-ಕಾನೂನು ಸಿರಿ, ದಾವಣಗೆರೆ ಡಾ| ಶಶಿಕುಮಾರ್ ಮೆಹರಾÌಡೆ- ಸಮಾಜ ಸೇವಾ ಸಿರಿ, ಆಸ್ಟ್ರೇಲಿಯಾ ಡಾ| ಟಿ.ಎಂ. ಜ್ಯೋತಿ ಕಿರಣಕುಮಾರ್ -ಉದಯೋನ್ಮುಖ ಔಷ ಧ ಸಿರಿ, ಹೊಸಪೇಟೆ ಕೆ. ರವಿಶಂಕರಗೌಡ-ವೀರಶೈವ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ತಾಲೂಕಿನ ವೀರ ಯೋಧರಿಗೆ ಸನ್ಮಾನ, ಡಿ. 24ರಂದು ರಾಮಘಟ್ಟ ರೇವಣಸಿದ್ದೇಶ್ವರ ಶ್ರೀಗಳ ನೇತೃತ್ವದಲ್ಲಿ ವೀರಮಹೇಶ್ವರ ವಟುಗಳಿಗೆ ಶಿವದೀಕ್ಷೆ, ಡಿ. 23ರಂದು ಬೆಳಗ್ಗೆ 10 ಗಂಟೆಗೆ ಎಸ್ ಎಸ್‌ಐಎಂಎಸ್-ಸ್ಪರ್ಶ್ ಆಸ್ಪತ್ರೆವತಿಯಿಂದ ಕೀಲು ಮತ್ತು ಮೂಳೆ ಸಮಸ್ಯೆಗೆ ಉಚಿತ ತಪಾಸಣಾ ಶಿಬಿರ ನಡೆಯಲಿದೆ ಎಂದು ಹೇಳಿದರು.
ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಹಾವೇರಿಯಲ್ಲಿ ಶ್ರೀಜಗದ್ಗುರು ಗಂಗಾಧರೇಶ್ವರ ವಿದ್ಯಾರ್ಥಿ ನಿಲಯ, ಹೊಸಪೇಟೆಯಲ್ಲಿ ಮಾತೋಶ್ರೀ ಸಿದ್ರಾಮಮ್ಮ ವಿದ್ಯಾರ್ಥಿನಿಯರ ನಿಲಯ, ಹರಪನಹಳ್ಳಿಯಲ್ಲಿ ಟಿ.ಎಂ. ಚಂದ್ರಶೇಖರಯ್ಯ ವಿದ್ಯಾರ್ಥಿ ನಿಲಯ, ಸಿಂಗಟಾಲೂರು ಬಳಿ ಷಟಸ್ಥಲ ಜ್ಞಾನ ಮಂದಿರ (ಗುರುಕುಲ), ಹಾವೇರಿ ಮತ್ತು ಭದ್ರವತಿಯಲ್ಲಿ ಶ್ರೀಗುರು ನಿವಾಸ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಮಧ್ಯ ಕರ್ನಾಟಕದಲ್ಲಿ ಲಿಂ. ಚಂದ್ರಮೌಳೀಶ್ವರ ಶ್ರೀಗಳು ಸಂಸ್ಥೆ ಸ್ಥಾಪಿಸಿ 65ಕ್ಕೂ ಹೆಚ್ಚು ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಜನ
ಸಮುದಾಯದ ಅಜ್ಞಾನ ತೊಲಗಿಸುವುದರೊಂದಿಗೆ ಉದ್ಯೋಗ ನೀಡಿದ ಅನ್ನದಾತರಾಗಿದ್ದಾರೆ ಎಂದು ತಿಳಿಸಿದರು. ಪ್ರಾಚಾರ್ಯರಾದ ನಾಗೇಂದ್ರರಾವ್, ಅರುಣಕುಮಾರ್, ಮುಖ್ಯ ಶಿಕ್ಷಕ ಸಿ.ಎಂ. ಕೊಟ್ರಯ್ಯ ಸುದ್ದಿಗೋಷ್ಠಿಯಲ್ಲಿದ್ದರು.