Advertisement
ಹನೂರು ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 13 ವಾರ್ಡುಗಳಿದ್ದು 13 ಸದಸ್ಯ ಬಲವಿದೆ. ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 7 ಸ್ಥಾನಗಳ ಅವಶ್ಯಕತೆಯಿದೆ. 2019ರ ಮೇನಲ್ಲಿ ಜರುಗಿದ ಚುನಾವಣೆಯಲ್ಲಿ ಮತದಾರರು ಯಾವುದೇ ಪಕ್ಷಕ್ಕೂ ಬಹುಮತ ನೀಡಿಲ್ಲ. ಇಲ್ಲಿ 13 ಸ್ಥಾನಗಳ ಪೈಕಿ 6 ಸ್ಥಾನಗಳಲ್ಲಿ ಜೆಡಿಎಸ್, 4 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು 3 ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ ಬಿಜೆಪಿ ಪಕ್ಷದ ಸದಸ್ಯರೋರ್ವರು ಕೋವಿಡ್ ಗೆ ತುತ್ತಾದ ಹಿನ್ನೆಲೆ ಹಾಲಿ 12 ಸದಸ್ಯರು ಮಾತ್ರವಿದ್ದು, ಮತ್ತೊಂದು ಸ್ಥಾನಕ್ಕೆ ಉಪಚುನಾವಣೆ ಎದುರಾಗಲಿದೆ.
Related Articles
Advertisement
ಇದನ್ನೂ ಓದಿ:ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಗೆ ಕೋವಿಡ್ ದೃಢ
ಮೀಸಲಾತಿ ಗೊಂದಲ: ಇದೀಗ ಪ್ರಕಟಗೊಂಡಿರುವ ಮೀಸಲಾತಿಯಲ್ಲಿ ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಕಾಂಗ್ರೆಸ್‍ನಿಂದ ಯಾವ ಮಹಿಳಾ ಸದಸ್ಯರು ಆಯ್ಕೆಯಾಗಿಲ್ಲ. ಆದುದರಿಂದ ಅಧ್ಯಕ್ಷ ಹುದ್ದೆಯು ಬಿಜೆಪಿ ಅಥವಾ ಜೆಡಿಎಸ್‍ನ ಪಾಲಾಗಲಿದೆ. ಇನ್ನು ಉಪಾಧ್ಯಕ್ಷ ಹುದ್ದೆ ಹಿಂದುಳಿದ ವರ್ಗ ಬಿಗೆ ಮೀಸಲಾಗಿದ್ದು ಈ ವರ್ಗಕ್ಕೆ ಸೇರಿರುವ ಯಾವ ಸದಸ್ಯರು ಆಯೆಯಾಗಿಲ್ಲ. ಈ ಹಿನ್ನೆಲೆ ಸಾಮಾನ್ಯ ವರ್ಗದಿಂದ ಗೆಲುವು ಸಾಧಿಸಿರುವ ಯಾವ ಸದಸ್ಯರಿಗೆ ಈ ಸ್ಥಾನ ದೊರಕಲಿದೆ ಎಂಬುವುದು ಚರ್ಚಾ ವಿಷಯವಾಗಿದೆ. ಇನ್ನು ಕೆಲ ಸದಸ್ಯರಂತು ನಮ್ಮ ಸಮುದಾಯ ಯಾವ ವರ್ಗಕ್ಕೆ ಬರಲಿದೆ, ನಮಗೇನಾದರೂ ಅವಕಾಶ ಸಿಗಲಿದೆಯೇ ಎಂಬುವ ಹಂಬಲದಿಂದ ಜಾತಿವಾರು ಪಟ್ಟಿಯ ಹುಡುಕಾಟಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ:ಯಶೋಗಾಥೆ:5 ಸಾವಿರ ರೂ. ಬಂಡವಾಳದಲ್ಲಿ ಕೋಳಿ ಫಾರಂ ಆರಂಭ…ಇಂದು 8,700 ಕೋಟಿ ವಹಿವಾಟು!
ಒಟ್ಟಾರೆ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಇಬ್ಬರು ಸದಸ್ಯರು, ಜೆಡಿಎಸ್‍ನಿಂದ 3 ಸದಸ್ಯರು ಅರ್ಹರಾಗಿದ್ದು ಒಂದೊಮ್ಮೆ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಏರ್ಪಟ್ಟಲ್ಲಿ 12ನೇ ವಾರ್ಡಿನ ಸದಸ್ಯೆ ಚಂದ್ರಮ್ಮ ಆಯ್ಕೆ ಬಹುತೇಕ ಖಚಿತವಾಗಲಿದೆ. ಉಪಾಧ್ಯಕ್ಷ ಹುದ್ದೆ ಇನ್ನೂ ಗೊಂದಲದ ಗೂಡಾಗಿದೆ.