Advertisement

ಹನೂರು: ಮಲೆ ಮಾದಪ್ಪ ಮಹಾ ರಥೋತ್ಸವಕ್ಕೆ ಚಾಲನೆ

12:40 PM Feb 21, 2023 | Team Udayavani |

ಹನೂರು:  ಲಕ್ಷಾಂತರ ಭಕ್ತಾದಿಗಳ ಉಘೇ ಮಾದಪ್ಪ, ಉಘೇ ಮಾದಪ್ಪ ಜಯ ಘೋಷದ ನಡುವೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

Advertisement

ಮಂಗಳವಾರ ಬೆಳಿಗ್ಗೆ 8.20 ರಿಂದ 9.10ರ ನಡುವಿನ ಶುಭ ವೇಳೆಯಲ್ಲಿ ಮಲೆ ಮಾದಪ್ಪನ ಮಹಾ ರಥೋತ್ಸವವು ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿತು.

ಮಲೆ ಮಾದಪ್ಪನ ಮಹಾರಥೋತ್ಸವಕ್ಕೆ ಬೂದುಗುಂಬಳಕಾಯಿ ಒಡೆಯುವ ಮೂಲಕ ಚಾಲನೆ ದೊರೆಯುತ್ತಿದ್ದಂತೆ ನಡೆದಿದ್ದ ಲಕ್ಷಾಂತರ ಭಕ್ತಾದಿಗಳ ಘೋಷಣೆಗಳು ಮುಗಿಲು ಮುಟ್ಟುವಂತಿತ್ತು.

ಮಹಾ ರಥೋತ್ಸವದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ರಮೇಶ್ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಹಾಗೂ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next