Advertisement

ಹನುಮಮಾಲೆ ಧಾರಣೆಗೆ ಜಿದ್ದಿಗೆ ಬಿದ್ದ ಕನಕಗಿರಿಯ  ಹಾಲಿ ಮಾಜಿ  ಶಾಸಕರು

12:12 PM Apr 11, 2022 | Team Udayavani |

ಗಂಗಾವತಿ: ಕರ್ನಾಟಕದ ರಾಜಕಾರಣ ಅಭಿವೃದ್ಧಿ ಕಾರ್ಯಗಳಿಗಿಂತ ಹಿಂದೂ ಮುಸ್ಲಿಮ್ ಧಾರ್ಮಿಕ ವಿಚಾರಗಳೇ ಹೆಚ್ಚು ಪ್ರಸ್ತುತವಾಗುತ್ತಿವೆ.ಅದರಲ್ಲೂ ಕನಕಗಿರಿ ಮತ್ತು ಗಂಗಾವತಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಮತ್ತು ಬಿಜೆಪಿ ಕಾಂಗ್ರೆಸ್ ಮುಖಂಡರು ಹಿಂದುತ್ವ ದೇವರು ಜಾತಿ ಧರ್ಮದ ಬಗೆಗೆ ಹೆಚ್ಚು ಮಾತನಾಡುತ್ತಾರೆ. ಕನಕಗಿರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ದಡೇಸುಗೂರು ಬಸವರಾಜ ರವಿವಾರ ಹನುಮಮಾಲೆ  ಧಾರಣೆ ಮಾಡಿ ದಿನವೂ ಗುಡಿಗಳ ಸುತ್ತಾ ಗಿರಿಕಿ ಹೊಡೆಯುತ್ತಿದ್ದಾರೆ .

Advertisement

ಈ ಮಧ್ಯೆ ಸೋಮವಾರ ಮಾಜಿ ಸಚಿವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಶಿವರಾಜ್ ತಂಗಡಗಿ ಹಾಗೂ ಅವರ ಆಪ್ತ ಕಾಂಗ್ರೆಸ್ ನ 50  ಕ್ಕೂ ಹೆಚ್ಚು ಬೆಂಬಲಿಗರು ಗಂಗಾವತಿಯ ಅಯ್ಯಪ್ಪಸ್ವಾಮಿ ಗಿರಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಹನುಮ ಮಾಲೆ ಧಾರಣೆ ಮಾಡಿ ತಾವೂ ಸಹ ಧರ್ಮದ ಪರವಾಗಿದ್ದು ಮೂಲತಃ ನಾವೆಲ್ಲ ಸಮಾನತೆ ಸಾರುವ ದೇವರು ಧರ್ಮದಲ್ಲಿ ನಂಬಿಕೆ ಇಟ್ಟವರಾಗಿದ್ದೇವೆ ಎನ್ನುವ ಸಂದೇಶವನ್ನು ಮಾಜಿ ಸಚಿವ ಶಿವರಾಜ್ ತಂಗಡಗಿ ನೀಡಲು ಯತ್ನಿಸಿದ್ದಾರೆ ಎನ್ನಲಾಗುತ್ತಿದೆ .

ಗಂಗಾವತಿಯ ಅಯ್ಯಪ್ಪ ಸ್ವಾಮಿ ದೇಗುಲ ನಿರ್ಮಾಣದ ಹಿಂದೆ ಹಲವು ಚರ್ಚಿತ ವಿಷಯಗಳಿದ್ದು ಬಿಜೆಪಿ ಕಾಂಗ್ರೆಸ್ ಮುಖಂಡರು ಈ ದೇಗುಲದಿಂದ ನೇ ತಮ್ಮ ರಾಜಕೀಯ ಲಾಭವನ್ನು ಪಡೆಯಲು ಯತ್ನಿಸುತ್ತಿದ್ದಾರೆಂಬ ಮಾತು ಪ್ರಬಲವಾಗಿ ಕೇಳಿಬರುತ್ತಿದೆ.

ಇದನ್ನೂ ಓದಿ:ಮಂಡ್ಯದ ಜನ ಹೇಳಿದರೆ ಬಿಜೆಪಿಗೆ ಸೇರುವ ಬಗ್ಗೆ ನಿರ್ಧಾರ: ಸಂಸದೆ ಸುಮಲತಾ ಅಂಬರೀಷ್

ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಹಿಂದುತ್ವವನ್ನು ಆರಂಭಿಸಿದ್ದಾರೆ. ಬಿಜೆಪಿಯವರಿಗೆ ಅಭಿವೃದ್ಧಿ ಬೇಡ ಬಡವರು ದಲಿತರು ಶೋಷಿತರ ಬಗ್ಗೆ ಚಿಂತನೆ ಬೇಡ ಅವರಿಗೆ ರಾಜಕೀಯ ಅಧಿಕಾರಕ್ಕಾಗಿ ಹಿಂದುತ್ವವನ್ನು ಹಿಡಿದಿದ್ದಾರೆ ಅವರು ನಿಜವಾದ ಹಿಂದುತ್ವ ಪ್ರತಿಪಾದಕರಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚಿನ ಪ್ರಗತಿ ಕಾರ್ಯಗಳು ಜರುಗಿವೆ ಅದರಲ್ಲೂ ಗಂಗಾವತಿ ಕನಕಗಿರಿಯಲ್ಲಿ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಮಾಡಲಾಗಿದೆ .ಆದರೂ ಬಿಜೆಪಿಯವರು ಧರ್ಮ ಜಾತಿ ಹೆಸರಿನಲ್ಲಿ ಜನರನ್ನು ಒಡೆದು ಅಧಿಕಾರಕ್ಕೆ ಬರುತ್ತಾರೆ .ಕಾಂಗ್ರೆಸ್ ನವರು ಸಹ ಧರ್ಮ ಮತ್ತು ಹಿಂದುಳಿದವರು ದಲಿತರು ಮೇಲ್ವರ್ಗದಲ್ಲಿರುವ ಬಡವರ ಬಗ್ಗೆ ಕಾಳಜಿವುಳ್ಳವರಾಗಿದ್ದಾರೆ.

Advertisement

ನಾವು ಸಹ ಹಬ್ಬಹರಿದಿನಗಳನ್ನು ತಪ್ಪದೇ ಮಾಡುತ್ತೇವೆ ಆದರೆ ನಾವು ಜಾತಿಯ ಲಾಭದಿಂದ ರಾಜಕಾರಣ ಮಾಡುವವರಲ್ಲ .ನಾನು ಆಂಜನೇಯನಿಗೆ ಹರಕೆ ಹೊತ್ತಂತೆ ಹನುಮ ಮಾಲೆ ಧಾರಣೆ ಮಾಡಿದ್ದೇನೆ ಹೊರತು ಬೇರಾವ ರಾಜಕೀಯ ಉದ್ದೇಶದಿಂದಲ್ಲ. ಕಾಂಗ್ರೆಸ್ ನ ಪ್ರತಿಯೊಬ್ಬ ಕಾರ್ಯಕರ್ತನು ಸಹ ಧರ್ಮಪಾಲಕನೆ ಆಗಿದ್ದಾನೆ ಆದ್ದರಿಂದ ಅವರಿಗೆ ಜಾತಿ ರಾಜಕಾರಣ ಗೊತ್ತಿಲ್ಲ ,ಅನ್ಯಾಯ ಗೊತ್ತಿಲ್ಲ ಅವರೇ ಹೊತ್ತಿರುವುದು ಸರ್ವಜನಾಂಗದ ಶಾಂತಿಯ ತೋಟ .ಸರ್ವರ ಅಭಿವೃದ್ಧಿಯಾಗಿದೆ ಎಂದು ಮಾಜಿ ಸಚಿವ ಎಸ್ . ಶಿವರಾಜ್ ತಂಗಡಗಿ ಉದಯವಾಣಿ ಜತೆ ಮಾತಾಡುತ್ತಾ ಅಭಿಪ್ರಾಯ ಹಂಚಿಕೊಂಡರು .

Advertisement

Udayavani is now on Telegram. Click here to join our channel and stay updated with the latest news.

Next