Advertisement

ಪಲಿಮಾರು ಶ್ರೀಗಳಿಂದ ತರಕಾರಿ ಮುಹೂರ್ತ

06:45 AM Mar 31, 2018 | Team Udayavani |

ಉಡುಪಿ: ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ  ಶ್ರೀಕೃಷ್ಣ ಮುಖ್ಯಪ್ರಾಣ ಸೇವಾ ಸಮಿತಿಯ ವತಿಯಿಂದ ಮಾ. 31ರಂದು ನಡೆಯುವ 12ನೇ ವರ್ಷದ ಹನುಮಜ್ಜಯಂತಿ ಉತ್ಸವದ ಪೂರ್ವಬಾವಿಯಾಗಿ  ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಗಳು ಮತ್ತು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳು ಶುಕ್ರವಾರ ತರಕಾರಿ ಮುಹೂರ್ತ ನಡೆಸಿದರು. 

Advertisement

ಶೀÅಕೃಷ್ಣ ಮತ್ತು ಮುಖ್ಯಪ್ರಾಣ ದೇವರಿಗೆ ಪ್ರಾರ್ಥನೆ ನಡೆಸಿದ ಬಳಿಕ ಶ್ರೀಗಳು ತರಕಾರ ಮುಹೂರ್ತ ಚಾಲನೆ ನೀಡಿದರು. ಮಧ್ಯಾಹ್ನ ನಡೆಯುವ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಮುಖ್ಯಪ್ರಾಣ ದೇವರಿಗೆ ಅತಿ ಪ್ರಿಯವಾದ ಹಾಲು ಪಾಯಸವನ್ನು ನೀಡಲಾಗುತ್ತದೆ.
 
ಸೇವಾ ಸಮಿತಿಯ ಸಮಿತಿಯ ಪ್ರಮುಖರಾದ ಭುವನೇಂದ್ರ ಕಿದಿಯೂರು, ಯುವರಾಜ್‌ ಸಾಲ್ಯಾನ್‌ ಮಸ್ಕತ್‌, ಹಿರಿಯಣ್ಣ ಟಿ. ಕಿದಿಯೂರು, ಜಿತೇಶ್‌ ಕಿದಿಯೂರು, ಹೀರಾ ಬಿ. ಕಿದಿಯೂರು, ಗೋಪಾಲ ಕುಂದರ್‌, ಹರಿಯಪ್ಪ ಕೋಟ್ಯಾನ್‌, ರಮೇಶ್‌ ಕೋಟ್ಯಾನ್‌, ರಮೇಶ್‌ ಕಿದಿಯೂರು, ಸೋಮನಾಥ್‌ ಕಾಂಚನ್‌, ಸುಧಾಕರ್‌ ಮೆಂಡನ್‌, ಪಾಂಡುರಂಗ ಕರ್ಕೇರ, ವಿಲಾಸ್‌ ಕುಮಾರ್‌  ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next