Advertisement

ಹನುಮ ಜಯಂತಿ ಮಾಡೇ ಮಾಡ್ತೇವೆ: ಪ್ರತಾಪ್‌ಸಿಂಹ 

12:47 PM Dec 07, 2017 | Team Udayavani |

ಮೈಸೂರು: ಹುಣಸೂರಿನಲ್ಲಿ ಸದ್ಯದಲ್ಲಿಯೇ ವಿಜೃಂಭಣೆಯಿಂದ ಹನುಮಜಯಂತಿ ಮೆರವಣಿಗೆ ಮಾಡುತ್ತೇವೆ. ಇದು ನಮ್ಮ ಸಂಕಲ್ಪ ಎಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು. ನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಹನುಮ ಯಜ್ಞದಲ್ಲಿ ಪಾಲ್ಗೊಂಡು ಡಿ.1ರಂದು ಧರಿಸಿದ್ದ ಹನುಮಾಲೆ ತೆಗೆದರು.

Advertisement

ಈ ವೇಳೆ ಮಾತನಾಡಿ, ಕಾರ್ಯನಿಮಿತ್ತ ಬೇರೆ ಕಡೆಗೆ ಹೋಗಬೇಕಿರುವುದರಿಂದ ಹನುಮ ಮಾಲೆ ತೆಗೆಯುತ್ತಿದ್ದೇನೆ. ಆದರೆ, ಹನುಮ ಜಯಂತಿ ಮೆರವಣಿಗೆ ನಡೆಸುವುದು ನಮ್ಮ ಸಂಕಲ್ಪ. ಮೆರವಣಿಗೆ ನಡೆದೆ ನಡೆಯುತ್ತೆ. ಇದಕ್ಕೆ ಜಿಲ್ಲಾಡಳಿತದಿಂದಲೂ ಸಹಕಾರ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

ಡಿ.3ರಂದು ಹುಣಸೂರಿನಲ್ಲಿ ಏನು ನಡೆಯಿತು, ಯಾರು ದರ್ಪದಿಂದ ಯಾಕಾಗಿ ನಮ್ಮ ನಂಬಿಕೆಗಳ ಮೇಲೆ ಪ್ರಹಾರ ಮಾಡಿದರು ಎಂಬುದನ್ನು ಹುಣಸೂರಿನ ಜನತೆ ನೋಡಿದ್ದಾರೆ. ಭಕ್ತಿಗೆ ನಿಷ್ಠೆಗೆ ಮಾತ್ರವಲ್ಲ, ಶಕ್ತಿಗೂ ಹನುಮ ಪ್ರೇರಣೆ. 23 ವರ್ಷಗಳ ಕಾಲ ರಂಗನಾಥ ಬಡಾವಣೆಯಿಂದ ಆರಂಭವಾಗಿ ನಗರದಲ್ಲಿ ವಿಜೃಂಭಣೆಯಿಂದ ಹನುಮ ಜಯಂತಿ ಮೆರವಣಿಗೆ ನಡೆದಿದೆ.

ಆದರೆ, ಕಳೆದ 2 ವರ್ಷಗಳಿಂದ ಮೆರವಣಿಗೆ ಮೇಲೆ ನಿರ್ಬಂಧ, ನಿಷೇಧ ಹೇರಿ ಕಾನೂನು ಸುವ್ಯವಸ್ಥೆ ನೆಪದಲ್ಲಿ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಚಾಮುಂಡೇಶ್ವರಿ ಅವರಿಗೆ ತಕ್ಕ ಶಾಸ್ತಿ ಮಾಡ್ತಾಳೆ, ಕಾಲವೇ ಇಂತವರಿಗೆ ಉತ್ತರ ಕೊಡುತ್ತೆ, ಆ ಕಾಲವೂ ಸನ್ನಿಹಿತ ಎಂದರು.

ನಮ್ಮ ಹಬ್ಬ-ಹರಿದಿನ ಆಚರಣೆ ತಡೆಯುವ ಹಕ್ಕು ಯಾರಿಗೂ ಇಲ್ಲ. ಹುಣಸೂರಲ್ಲಿ ಇಂತಹದೊಂದು ಪರಿಸ್ಥಿತಿ ನಿರ್ಮಾಣವಾಗಲು ಕಾರಣರು ಯಾರು ಎಂಬುದು ಜನತೆಗೆ ಗೊತ್ತಿದೆ. ಕಾನೂನು, ಕಾಯ್ದೆ ನೆಪದಲ್ಲಿ ಹನುಮ ಭಕ್ತರಿಗೆ ತೊಂದರೆ ಕೊಡಲು ನೋಡಿದರೆ ಅವರ ವಿರುದ್ಧ ನಾವೂ ಕಾನೂನು ಹೋರಾಟ ಮಾಡುತ್ತೇವೆಂದರು.

Advertisement

ತಾಲೂಕು ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯೋಗಾನಂದ ಕುಮಾರ್‌, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವೆಂಕಟನಾರಾಯಣ ದಾಸ್‌, ನೂರಾರು ಹನುಮ ಭಕ್ತರು ಹನುಮ ಜಯnದಲ್ಲಿ ಪಾಲ್ಗೊಂದು ಹನುಮ ಮಾಲೆ ತೆಗೆದರು. 

ಪಿಎಫ್ಐ ಪೋಸ್ಟರ್‌ಗೆ ಅವಕಾಶವಿದೆಯೇ?
ಮೈಸೂರು:
ಇಂತಹ ಪೋಸ್ಟರ್‌ಗಳಿಗೂ ಅವಕಾಶವಿದೆಯೇ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲಿ ಏನಾಗುತ್ತಿದೆ ನೋಡಿ ಎಂದು ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಫೋಸ್ಟರ್‌ಅನ್ನು ಸಾಮಾಜಿಕ ಜಾಲದಲ್ಲಿ ಹಾಕಿ ಸಂಸದ ಪ್ರತಾಪ್‌ ಸಿಂಹ ಕಿಡಿಕಾರಿದ್ದಾರೆ.

ಬಾಬರಿ ಮಸ್ಜಿದ್‌ ಪುನರ್‌ ನಿರ್ಮಿಸಿ; ನಾವು ಮರೆಯದಿರೋಣ, ದ್ರೋಹದ 25 ವರ್ಷಗಳು ಶೀರ್ಷಿಕೆ ಹೊತ್ತ ಪೋಸ್ಟರ್‌ಗಳು ಜಿಲ್ಲೆಯ ಕೆ.ಆರ್‌.ನಗರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ. ಈದ್‌ ಮಿಲಾದ್‌, ಟಿಪ್ಪು ಜಯಂತಿ ಮೆರವಣಿಗೆಗಳು ಸರಿ, ಇಂತಹ ಪೋಸ್ಟರ್‌ಗಳನ್ನು ಹಾಕಲು ಅವಕಾಶವಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next