Advertisement

Hanuman ಧ್ವಜ ವಿವಾದ; ಗೋಡ್ಸೆ ವಂಶಸ್ಥರು ಶಾಂತಿ ಕದಡುತ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

02:46 PM Jan 30, 2024 | Team Udayavani |

ಬೆಂಗಳೂರು: ಹನುಮಾನ್ ಧ್ವಜ ತೆರವು ವಿಚಾರದ ಗದ್ದಲದ ಕುರಿತು ಮಂಗಳವಾರ ಸಿಎಂ ಸಿದ್ದರಾಮಯ್ಯ ” ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯ ವಂಶಸ್ಥರು ರಾಜ್ಯದಲ್ಲಿ ಶಾಂತಿ ಕದಡುತ್ತಿದ್ದಾರೆ” ಎಂದು ಕಿಡಿ ಕಾರಿದ್ದಾರೆ.

Advertisement

ಮಹಾತ್ಮ ಗಾಂಧಿಯವರ ಪುಣ್ಯತಿಥಿಯಂದು ಮಹಾತ್ಮ ಗಾಂಧೀಜಿಯವರಿಗೆ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ “ನಮ್ಮ ನಡುವೆಯೂ ಗೋಡ್ಸೆಯನ್ನು ಪೂಜಿಸುವ ಜನರಿದ್ದಾರೆ. ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ. ಶಾಂತಿಯನ್ನು ಕದಡುವವರು ಗೋಡ್ಸೆಯ ವಂಶಸ್ಥರು. ಸಮಾಜದಲ್ಲಿ ಶಾಂತಿ ನೆಲೆಸಲು ಜನರು ಪ್ರೀತಿ ವಿಶ್ವಾಸದಿಂದ ಬಾಳಬೇಕು. ಯಾರೂ ಕೋಮು ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು ಎಂದರು.

ಮಂಡ್ಯದ ಕೆರಗೋಡು ಗ್ರಾಮದ 108 ಅಡಿ ಎತ್ತರದ ಕೇಸರಿ ಧ್ವಜ ತೆರವು ವಿರೋಧಿಸಿ ಸೋಮವಾರ ಬಿಜೆಪಿ ಮತ್ತು ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿದ್ದು, ವಿಪಕ್ಷಗಳು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಧರಣಿ ನಡೆಸುತ್ತಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆರಗೋಡು ಪಂಚಾಯತ್ ತ್ರಿವರ್ಣ ಅಥವಾ ಕರ್ನಾಟಕ ಧ್ವಜವನ್ನು ಹಾರಿಸಲು ಮಾತ್ರ ಅನುಮತಿ ನೀಡಿದೆ ಹೊರತು ಯಾವುದೇ ಧಾರ್ಮಿಕ ಅಥವಾ ರಾಜಕೀಯ ಧ್ವಜವನ್ನು ಹಾರಿಸುವುದಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next