Advertisement

ಇರಾನಿ ಟ್ರೋಫಿ ಕ್ರಿಕೆಟ್‌: ಶೇಷ ಭಾರತಕ್ಕೆ ವಿಹಾರಿ ನಾಯಕ

10:41 PM Sep 28, 2022 | Team Udayavani |

ನವದೆಹಲಿ: ಮೂರು ವರ್ಷ ಬಳಿಕ ನಡೆಯಲಿರುವ ಇರಾನಿ ಟ್ರೋಫಿ’ ಕ್ರಿಕೆಟ್‌ ಪಂದ್ಯದಲ್ಲಿ ಹನುಮ ವಿಹಾರಿ ಶೇಷ ಭಾರತ’ (ರೆಸ್ಟ್‌ ಆಫ್ ಇಂಡಿಯಾ) ತಂಡವನ್ನು ಮುನ್ನಡೆಸಲಿದ್ದಾರೆ. 2019-20ನೇ ಸಾಲಿನ ರಣಜಿ ಚಾಂಪಿಯನ್‌ ಸೌರಾಷ್ಟ್ರ ವಿರುದ್ಧ ಅ. ಒಂದರಿಂದ ಐದರ ತನಕ ರಾಜ್‌ಕೋಟ್‌ನಲ್ಲಿ ಈ ಪಂದ್ಯ ನಡೆಯಲಿದೆ.

Advertisement

ಶೇಷ ಭಾರತ ತಂಡ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿದೆ. ರೆಡ್‌ ಬಾಲ್‌ ಸ್ಪೆಷಲಿಸ್ಟ್‌ ಮಾಯಾಂಕ್‌ ಅಗರ್ವಾಲ್‌, ಯುವ ಆರಂಭಕಾರ ಪ್ರಿಯಾಂಕ್‌ ಪಾಂಚಾಲ್‌, ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ದ್ವಿಶತಕ ಬಾರಿಸಿದ ಯಶಸ್ವಿ ಜೈಸ್ವಾಲ್‌, ಅಂಡರ್‌-19 ತಂಡದ ಹೀರೋ ಯಶ್‌ ಧುಲ್‌, ಬಿಗ್‌ ಹಿಟ್ಟರ್‌ ಸಫ‌ìರಾಜ್‌ ಖಾನ್‌ ಮೊದಲಾದವರು ತಂಡದಲ್ಲಿದ್ದಾರೆ.

ಸೌರಾಷ್ಟ್ರ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಟೆಸ್ಟ್‌ ಸ್ಪೆಷಲಿಸ್ಟ್‌ ಚೇತೇಶ್ವರ್‌ ಪೂಜಾರ ಆಡುವ ಸಾಧ್ಯತೆ ಇದೆ.

ಶೇಷ ಭಾರತ ತಂಡ:
ಹನುಮ ವಿಹಾರಿ (ನಾಯಕ), ಮಾಯಾಂಕ್‌ ಅಗರ್ವಾಲ್‌, ಪ್ರಿಯಾಂಕ್‌ ಪಾಂಚಾಲ್‌, ಅಭಿಮನ್ಯು ಈಶ್ವರನ್‌, ಯಶ್‌ ಧುಲ್‌, ಸಫ‌ìರಾಜ್‌ ಖಾನ್‌, ಯಶಸ್ವಿ ಜೈಸ್ವಾಲ್‌, ಕೆ.ಎಸ್‌. ಭರತ್‌, ಉಪೇಂದ್ರ ಯಾದವ್‌, ಜಯಂತ್‌ ಯಾದವ್‌, ಸೌರಭ್‌ ಕುಮಾರ್‌, ಆರ್‌. ಸಾಯಿ ಕಿಶೋರ್‌, ಮುಕೇಶ್‌ ಕುಮಾರ್‌, ಉಮ್ರಾನ್‌ ಮಲಿಕ್‌, ಕುಲದೀಪ್‌ ಸೇನ್‌, ಅರ್ಜಾನ್‌ ನಗÌಸ್ವಾಲಾ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next