Advertisement

ಅಂತಿಮ ಪಂದ್ಯದಿಂದ ವಿಹಾರಿ ಔಟ್‌

12:39 AM Jan 12, 2021 | Team Udayavani |

ಸಿಡ್ನಿ : ಸ್ನಾಯು ಸೆಳೆತದ ನಡುವೆಯೂ ಸಿಡ್ನಿ ಟೆಸ್ಟ್‌ ಪಂದ್ಯದ ಅಂತಿಮ ದಿನ ಸುದೀರ್ಘ‌ ಬ್ಯಾಟಿಂಗ್‌ ನಡೆಸಿ ಭಾರತವನ್ನು ಸೋಲಿನಿಂದ ಪಾರುಮಾಡಿದ ಹನುಮ ವಿಹಾರಿ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ಲಭ್ಯರಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಪಂದ್ಯದ ಬಳಿಕ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿದ್ದು, ಸಂಜೆ ಅಥವಾ ಮಂಗಳವಾರ ವರದಿ ಬರುವ ಸಾಧ್ಯತೆ ಇದೆ.

Advertisement

ಆದರೆ ಇದು ಯಾವುದೇ ಮಾದರಿಯ ಸ್ನಾಯು ಸೆಳೆತವಾಗಿದ್ದರೂ ವಿಹಾರಿಗೆ ಬ್ರಿಸ್ಬೇನ್‌ ಟೆಸ್ಟ್‌ ಆಡಲು ಸಾಧ್ಯವಿಲ್ಲ ಎಂಬುದು ಆಘಾತಕಾರಿ ಸಂಗತಿ. ಅವರಿಗೆ ಕನಿಷ್ಠ 4 ವಾರಗಳ ವಿಶ್ರಾಂತಿ ಅಗತ್ಯವಿದ್ದು, ಕೇವಲ ಬ್ರಿಸ್ಬೇನ್‌ ಮಾತ್ರವಲ್ಲದೆ ಇಂಗ್ಲೆಂಡ್‌ ವಿರುದ್ಧದ ತವರಿನ ಟೆಸ್ಟ್‌ ಸರಣಿಯಲ್ಲೂ ಆಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ವಿಹಾರಿ ಬದಲು ಮಾಯಾಂಕ್‌ ಅಗರ್ವಾಲ್‌ ಅಥವಾ ವೃದ್ಧಿಮಾನ್‌ ಸಾಹಾ ಅವರನ್ನು ಸೇರಿಸಿಕೊಂಡು ಭಾರತ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯಕ್ಕೆ ತಂಡವನ್ನು ಕಟ್ಟಬೇಕಿದೆ. ರವೀಂದ್ರ ಜಡೇಜ ಬದಲು ಶಾರ್ದೂಲ್‌ ಠಾಕೂರ್‌ ಆಡಬಹುದು.

ಹೈ ಡೋಸ್‌ ನೋವು ನಿವಾರಕಅಂತಿಮ ದಿನ ವಿಹಾರಿ ಮತ್ತು ಪಂತ್‌ “ಹೈಡೋಸ್‌’ ನೋವು ನಿವಾರಕ ಔಷಧ ತೆಗೆದುಕೊಂಡು ಆಡಲಿಳಿದದ್ದು ತಿಳಿದು ಬಂದಿದೆ. ಹಾಗೆಯೇ ರವೀಂದ್ರ ಜಡೇಜ ಇಂಜೆಕ್ಷನ್‌ ತೆಗೆದುಕೊಂಡು ಆಡಲು ಅಣಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next