ಮೂಡಿಗೆರೆ: ತಾಲ್ಲೂಕಿನ ಹಂತೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ವೈದ್ಯರು, ಸಹಾಯಕಿಯರು, ಸಿಬ್ಬಂದಿಗಳು ಬಾರದೇ ಇರುವುದರಿಂದ ರೋಗಿಗಳು ಪರದಾಡುವಂತಾಗಿದೆ.
ರೋಗಿಗಳು ಹೋದಾಗ ಪ್ರಾಥಮಿಕ ಚಿಕಿತ್ಸೆ ನೀಡಲು ಯಾವುದೇ ಕರ್ತವ್ಯ ನಿರತ ಅಧಿಕಾರಿಗಳು, ನರ್ಸ್ ಕಾರ್ಯ ನಿರ್ವಹಿಸದೆ, ಆಸ್ಪತ್ರೆಯಲ್ಲಿ ಅಟೆಂಡರ್ ಕೆಲಸಗಾರರನ್ನು ಬಿಟ್ಟು ಹೋಗುತ್ತಿದ್ದು ಸರಿಯಾದ ಕಾರ್ಯ ನಿರ್ವಹಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದ್ದರಿಂದ ಸುತ್ತಮುತ್ತಲಿನ ಗ್ರಾಮಗಳ ರೋಗಿಗಳು ಆಸ್ಪತ್ರೆಗೆ ಬಂದು ಚಿಕತ್ಸೆಗಾಗಿ ಕಾದು ಹಿಂದಿರುಗುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾ.ಪಂ ಸದಸ್ಯ ವಿನೋದ್ ಕಣಚೂರು, ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸುಂಕದಕಟ್ಟೆ: ಕಾರು ಢಿಕ್ಕಿ ಹೊಡೆದು ರಿಕ್ಷಾ ಪಲ್ಟಿ… ಚಾಲಕನಿಗೆ ಗಂಭೀರ ಗಾಯ